
ರಾಜಸ್ಥಾನ್ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು 50 ರನ್‌ಗಳಿಂದ ಸೋಲಿಸಿ ಅವರ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಶನಿವಾರ ಮುಲ್ಲನ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ, ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 205 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಂಜಾಬ್ ತಂಡ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 155 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸಂಜು ಸ್ಯಾಮ್ಸನ್ ನೇತೃತ್ವದ ತಂಡ ಸತತ ಎರಡನೇ ಗೆಲುವು ದಾಖಲಿಸಿತು.
ರಾಜಸ್ಥಾನ ರಾಯಲ್ಸ್ ತಂಡವು ತಮ್ಮ ಬೌಲರ್‌ಗಳ ಬಲದಿಂದ ಈ ಪಂದ್ಯವನ್ನು 50 ರನ್‌ಗಳಿಂದ ಗೆದ್ದುಕೊಂಡಿತು. 206 ರನ್‌ಗಳಿಗೆ ಉತ್ತರವಾಗಿ ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳಿಸಲಷ್ಟೇ ಶಕ್ತವಾಯಿತು.
ಪಂಜಾಬ್ ಕಿಂಗ್ಸ್ 7ನೇ ವಿಕೆಟ್ ಕಳೆದುಕೊಂಡಿದೆ. ಸೂರ್ಯಾಂಶು ಶೆಡ್ಜ್ 4 ಎಸೆತಗಳಲ್ಲಿ 2 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಈಗ ಪಂಜಾಬ್‌ಗೆ ಗೆಲುವು ದೂರದಲ್ಲಿರುವಂತೆ ತೋರುತ್ತಿದೆ.
ಪಂಜಾಬ್ 131 ರನ್‌ಗಳಿಗೆ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ನೆಹಾಲ್ ವಾಧೇರಾ 41 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಪಂಜಾಬ್ 2 ಎಸೆತಗಳಲ್ಲಿ 2 ದೊಡ್ಡ ವಿಕೆಟ್‌ಗಳನ್ನು ಕಳೆದುಕೊಂಡಿತು.
ಪಂಜಾಬ್ ಕಿಂಗ್ಸ್ 131 ರನ್‌ಗಳಿಗೆ ದೊಡ್ಡ ಹಿನ್ನಡೆ ಅನುಭವಿಸಿದೆ. ನೆಹಾಲ್ ವಾಧೇರಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ ಮುರಿದು ಬಿದ್ದಿದೆ. ಗ್ಲೆನ್ ಮ್ಯಾಕ್ಸ್‌ವೆಲ್ 21 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು.
ನೆಹಾಲ್ ವಾಧೇರಾ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರು ಉತ್ತಮ ಲಯದಲ್ಲಿರುವಂತೆ ತೋರುತ್ತಿದ್ದು, ತಂಡವನ್ನು ಗುರಿಯ ಹತ್ತಿರಕ್ಕೆ ಕೊಂಡೊಯ್ಯುತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಅವರಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.
13 ಓವರ್‌ಗಳ ಅಂತ್ಯಕ್ಕೆ ಪಂಜಾಬ್ ತಂಡ 4 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ. ಇಲ್ಲಿಂದ ಪಂಜಾಬ್ ಗೆಲ್ಲಲು 42 ಎಸೆತಗಳಲ್ಲಿ 96 ರನ್‌ಗಳ ಅವಶ್ಯಕತೆಯಿದೆ.
ಪಂಜಾಬ್ ತಂಡದ ಇನ್ನಿಂಗ್ಸ್‌ನ 11 ಓವರ್‌ಗಳು ಮುಗಿದಿದ್ದು 4 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ. ಗೆಲ್ಲಲು ಇನ್ನೂ 54 ಎಸೆತಗಳಲ್ಲಿ 123 ರನ್‌ಗಳು ಬೇಕಾಗಿವೆ. ನೆಹಾಲ್ ವಾಧೇರಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕ್ರೀಸ್‌ನಲ್ಲಿದ್ದಾರೆ.
ಪಂಜಾಬ್‌ನ ಆರಂಭಿಕ ಪ್ರಭ್ಸಿಮ್ರನ್ ಸಿಂಗ್ ಕೂಡ 16 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ಪಂಜಾಬ್ ತಂಡ 43 ರನ್‌ಗಳಿಗೆ 4ನೇ ವಿಕೆಟ್ ಕಳೆದುಕೊಂಡಿದೆ.
ಪಂಜಾಬ್ ಕಿಂಗ್ಸ್ ತಂಡದ ಆರಂಭ ತುಂಬಾ ಕೆಟ್ಟದಾಗಿದೆ. ತಂಡವು ಕೇವಲ 26 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿದೆ. ಮಾರ್ಕಸ್ ಸ್ಟೊಯಿನಿಸ್ 7 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು.
ಪಂಜಾಬ್ ಕಿಂಗ್ಸ್ ಮೊದಲ ಓವರ್‌ನಲ್ಲೇ ಎರಡನೇ ವಿಕೆಟ್ ಕಳೆದುಕೊಂಡಿತು. ಶ್ರೇಯಸ್ ಅಯ್ಯರ್ 5 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. ಅಯ್ಯರ್ ಕೂಡ ಆರ್ಚರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಪಂಜಾಬ್ ಕಿಂಗ್ಸ್ ತಂಡವು ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಪ್ರಿಯಾಂಶ್ ಆರ್ಯ ಖಾತೆ ತೆರೆಯದೆಯೇ ಔಟ್ ಆಗಿದ್ದಾರೆ. ಜೋಫ್ರಾ ಆರ್ಚರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ರಾಜಸ್ಥಾನ ರಾಯಲ್ಸ್ ಇನ್ನಿಂಗ್ಸ್ ಮುಗಿದಿದೆ. 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಜೈಸ್ವಾಲ್ ಅತಿ ಹೆಚ್ಚು 67 ರನ್ ಗಳಿಸಿದರು. ಅದೇ ಸಮಯದಲ್ಲಿ, ರಿಯಾನ್ ಪರಾಗ್ ಅಜೇಯ 43 ರನ್ ಮತ್ತು ಸಂಜು ಸ್ಯಾಮ್ಸನ್ 38 ರನ್ ಗಳಿಸಿದರು. ಪಂಜಾಬ್ ಪರ ಲಾಕಿ ಫರ್ಗುಸನ್ ಗರಿಷ್ಠ 2 ವಿಕೆಟ್ ಪಡೆದರು. ಈ ಮೈದಾನದಲ್ಲಿ ಮೊದಲ ಬಾರಿಗೆ ತಂಡವೊಂದು 200 ರನ್‌ಗಳ ಗಡಿಯನ್ನು ಮುಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ, ಪಂಜಾಬ್ ಗೆಲ್ಲಲು ದಾಖಲೆಯ ರನ್ ಬೆನ್ನಟ್ಟಬೇಕಾಗುತ್ತದೆ.
ರಾಜಸ್ಥಾನ್ ರಾಯಲ್ಸ್ ತಂಡವು 185 ರನ್‌ಗಳಿಗೆ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಶಿಮ್ರಾನ್ ಹೆಟ್ಮೆಯರ್ 12 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು.
ರಾಜಸ್ಥಾನ್ ರಾಯಲ್ಸ್ 17 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿದೆ. ಪ್ರಸ್ತುತ ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೈರ್ ಕ್ರೀಸ್‌ನಲ್ಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡವು 138 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. ನಿತೀಶ್ ರಾಣಾ 7 ಎಸೆತಗಳಲ್ಲಿ 12 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಯಶಸ್ವಿ ಜೈಸ್ವಾಲ್ ರೂಪದಲ್ಲಿ ರಾಜಸ್ಥಾನ್ ರಾಯಲ್ಸ್ ಎರಡನೇ ಹಿನ್ನಡೆ ಅನುಭವಿಸಿದೆ. ಯಶಸ್ವಿ ಜೈಸ್ವಾಲ್ 45 ಎಸೆತಗಳಲ್ಲಿ 67 ರನ್ ಗಳಿಸಿ ಔಟಾದರು. ರಾಜಸ್ಥಾನ 123 ರನ್‌ಗಳಿಗೆ ವಿಕೆಟ್ ಕಳೆದುಕೊಂಡಿತು.
ಯಶಸ್ವಿ ಜೈಸ್ವಾಲ್ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಯಶಸ್ವಿ ಜೈಸ್ವಾಲ್ ಅವರ ಈ ಋತುವಿನ ಮೊದಲ 50+ ಸ್ಕೋರ್ ಆಗಿದೆ.
ರಾಜಸ್ಥಾನ್ ರಾಯಲ್ಸ್ ತಂಡ 89 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ 38 ರನ್ ಗಳಿಸಿ ಔಟಾದರು. ರಿಯಾನ್ ಪರಾಗ್ ಈಗ ಕ್ರೀಸ್‌ಗೆ ಬರುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡ 7 ಓವರ್ ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 62 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ 26 ರನ್ ಮತ್ತು ಯಶಸ್ವಿ ಜೈಸ್ವಾಲ್ 35 ರನ್ ಗಳಿಸಿ ಆಡುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ 4 ಓವರ್‌ಗಳಲ್ಲಿ 40 ರನ್ ಸೇರಿಸಿದರು.
ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಆರಂಭವಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ತಂಡಕ್ಕೆ ಆರಂಭಿಕರಾಗಿ ಆಡಲಿದ್ದಾರೆ. ಈ ಬಾರಿ ಯಶಸ್ವಿ ಉತ್ತಮ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತದೆಯೇ ಎಂಬುದರ ಮೇಲೆ ಎಲ್ಲರ ಕಣ್ಣುಗಳಿವೆ.
ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಸೂರ್ಯಾಂಶ್ ಶೆಡ್ಜ್, ಮಾರ್ಕೊ ಯಾನ್ಸೆನ್, ಅರ್ಷ್‌ದೀಪ್ ಸಿಂಗ್, ಲಾಕಿ ಫರ್ಗುಸನ್, ಯುಜ್ವೇಂದ್ರ ಚಾಹಲ್.
ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಯುಧ್ವೀರ್ ಸಿಂಗ್ ಚರಕ್, ಸಂದೀಪ್ ಶರ್ಮಾ.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ರಾಜಸ್ಥಾನ್ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 7:04 pm, Sat, 5 April 25