PBKS vs RR, IPL 2023: ಐಪಿಎಲ್​ನಲ್ಲಿಂದು ಪಂಜಾಬ್-ರಾಜಸ್ಥಾನ್ ಮುಖಾಮುಖಿ: ಯಾವ ತಂಡ ಗೆದ್ದರೆ ಆರ್​ಸಿಬಿಗೆ ಸಹಕಾರಿ?

|

Updated on: May 19, 2023 | 7:44 AM

Punjab vs Rajastan: ರಾಜಸ್ಥಾನ್ ತನ್ನ ಹಿಂದಿನ ಪಂದ್ಯದಲ್ಲಿ ತೀರಾ ಕಳಪೆ ಪ್ರದರ್ಶನ ತೋರಿತ್ತು. ಆರ್​ಸಿಬಿ ವಿರುದ್ಧ ಕೇವಲ 59 ರನ್​ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯ ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಆರ್​ಆರ್​ ತಂಡಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ.

PBKS vs RR, IPL 2023: ಐಪಿಎಲ್​ನಲ್ಲಿಂದು ಪಂಜಾಬ್-ರಾಜಸ್ಥಾನ್ ಮುಖಾಮುಖಿ: ಯಾವ ತಂಡ ಗೆದ್ದರೆ ಆರ್​ಸಿಬಿಗೆ ಸಹಕಾರಿ?
PBKS vs RR IPL 2023
Follow us on

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2023) ಮಹತ್ವದ ಪಂದ್ಯ ನಡೆಯಲಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಸಂಜು ಸ್ಯಾಮ್ಸನ್ ಅವರ ರಾಜಸ್ಥಾನ್ ರಾಯಲ್ಸ್ (PBKS vs RR) ಅನ್ನು ಎದುರಿಸಲಿದೆ. ಸದ್ಯ ಆರ್​ಆರ್ ಆಡಿರುವ 13 ಪಂದ್ಯಗಳಲ್ಲಿ ಆರು ಗೆಲುವು, ಏಳು ಸೋಲುಂಡು 12 ಅಂಕ ಸಂಪಾದಿಸಿ ಆರನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕೂಡ ಆಡಿದ 13 ಪಂದ್ಯಗಳಲ್ಲಿ ಆರು ಗೆಲುವು, ಏಳು ಸೋಲುಂಡು 12 ಅಂಕ ಸಂಪಾದಿಸಿ ರನ್​ರೇಟ್ ಆಧಾರದ ಮೇಲೆ ಎಂಟನೇ ಸ್ಥಾನದಲ್ಲಿದೆ. ಇಂದು ಯಾವ ತಂಡ ಗೆದ್ದರೂ ಅಥವಾ ಸೋತರೂ ಆರ್​ಸಿಬಿಗೆ (RCB) ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಮುಂದಿನ ಪಂದ್ಯದಲ್ಲಿ ಬೆಂಗಳೂರು ಸೋತರಷ್ಟೆ ಸಂಕಷ್ಟಕ್ಕೆ ಸಿಲುಕಲಿದೆ.

ಪಂಜಾಬ್ ಕಿಂಗ್ಸ್:

ಪಂಜಾಬ್ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿತ್ತು. ಬರಬರುತ್ತ ನಾಯಕ ಶಿಖರ್ ಧವನ್ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ. ಪ್ರಭುಸಿಮ್ರಾನ್ ಸಿಂಗ್ ಅವರು ಉತ್ತಮ ಆರಂಭ ಒದಗಿಸಬೇಕಿದೆ. ಲಿಯಾಮ್ ಲಿವಿಂಗ್​ಸ್ಟೋನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಜಿತೇಶ್ ಶರ್ಮಾ ಮತ್ತು ಅಥರ್ವ ಟೈಡೆ ಸಾಥ್ ನೀಡುತ್ತಿದ್ದಾರೆ. ಸ್ಯಾಮ್ ಕುರ್ರರನ್ ಕಡೆಯಿಂದ ಆಲ್ರೌಂಡ್ ಆಡ ಬರಬೇಕು. ಬೌಲಿಂಗ್​ನಲ್ಲಿ ಪಂಜಾಬ್ ದುರ್ಬಲವಾಗಿದೆ. ಹಿಂದಿನ ಪಂದ್ಯದಲ್ಲಿ ಅರ್ಶ್​ದೀಪ್ ಸಿಂಗ್, ನೇಥನ್ ಎಲಿಸ್, ರಬಾಡ ಸೇರಿದಂತೆ ಎಲ್ಲ ವೇಗಿಗಳು ದುಬಾರಿ ಆಗಿದ್ದರು. ರಾಹುಲ್ ಚಹರ್, ಹರ್ಪ್ರೀತ್ ಬ್ರರ್ ಇದ್ದರೂ ಮಾರಕವಾಗುತ್ತಿಲ್ಲ.

IPL 2023: 400 ರನ್ ನೀಡಿದ ಹರ್ಷಲ್ ಪಟೇಲ್

ಇದನ್ನೂ ಓದಿ
IPL 2023 Points Table: ಭರ್ಜರಿ ಜಯದೊಂದಿಗೆ ಟಾಪ್-4 ಗೆ RCB ಎಂಟ್ರಿ
LSG New Jersey: LSG ಮಾಸ್ಟರ್ ​ಪ್ಲ್ಯಾನ್: ಹೊಸ ಜೆರ್ಸಿ ಅನಾವರಣ
Virat Kohli: ಕಿಂಗ್ ಕೊಹ್ಲಿಯ ಸಿಡಿಲಬ್ಬರದ ಸೆಂಚುರಿಗೆ ಹಳೆಯ ದಾಖಲೆಗಳು ಧೂಳೀಪಟ
IPL 2023: ಫಾಫ್ ಜೊತೆಗೂಡಿ ಕ್ರಿಸ್ ಗೇಲ್ ಜೊತೆಗಿನ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ

ರಾಜಸ್ಥಾನ್:

ರಾಜಸ್ಥಾನ್ ತನ್ನ ಹಿಂದಿನ ಪಂದ್ಯದಲ್ಲಿ ತೀರಾ ಕಳಪೆ ಪ್ರದರ್ಶನ ತೋರಿತ್ತು. ಆರ್​ಸಿಬಿ ವಿರುದ್ಧ ಕೇವಲ 59 ರನ್​ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯ ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಆರ್​ಆರ್​ ತಂಡಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ಅದರಲ್ಲೂ ಜೈಸ್ವಾಲ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಸರಿಯಾದ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಿಗದೆ ದೇವದತ್ ಪಡಿಕ್ಕಲ್ ಪರದಾಡುತ್ತಿದ್ದಾರೆ. ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೇರ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅಸ್ತ್ರ. ಧ್ರುವ್ ಜುರೆಲ್ ಮತ್ತು ಜೇಸನ್ ಹೋಲ್ಡರ್ ಕಡೆಯಿಂದ ಉತ್ತಮ ಆಟ ಬರಬೇಕಿದೆ. ಆರ್​ಆರ್​ ಸ್ಪಿನ್ನರ್​ಗಳಾದ ಚಹಲ್, ಅಶ್ವಿನ್ ಮತ್ತು ಝಂಪಾ ಎದುರಾಳಿಗೆ ಕಂಟಕವಾಗಿದ್ದಾರೆ. ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಜೇಸನ್ ಹೋಲ್ಡನ್, ಕುಲ್ದೀಪ್ ಸೇನ್ ವೇಗಿಗಳಾಗಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡ: ಶಿಖರ್ ಧವನ್ (ನಾಯಕ), ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್ಪ್ರೀತ್ ಸಿಂಗ್ ಭಾಟಿಯಾ, ಸಿಖಂದರ್ ರಾಜಾ, ಸ್ಯಾಮ್ ಕುರ್ರನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಕಗಿಸೋ ರಬಾಡ, ರಾಹುಲ್ ಚಾಹರ್, ಅರ್ಶ್ದೀಪ್ ಸಿಂಗ್, ಪ್ರಭಾಸಿಮ್ರಾನ್ ಸಿಂಗ್, ನೇಥನ್ ಎಲಿಸ್, ಮೋಹಿತ್ ರಾಥೀ, ರಿಷಿ ಧವನ್, ಭಾನುಕಾ ರಾಜಪಕ್ಸೆ, ಗುರ್ನೂರ್ ಬ್ರಾರ್, ಬಲ್ತೇಜ್ ಸಿಂ , ಲಿಯಾಮ್ ಲಿವಿಂಗ್​ಸ್ಟೋನ್, ವಿಧ್ವತ್ ಕಾವೇರಪ್ಪ, ಶಿವಂ ಸಿಂಗ್.

ರಾಜಸ್ಥಾನ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ಧ್ರುವ್ ಜುರೆಲ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಲ್, ಕುಲ್ದೀಙ್ ಸೇನ್, ಮುರುಗನ್ ಪರಾಗ್, ರಿಯಾನ್ ಪರಾಗ್ , ಡೊನಾವನ್ ಫೆರೇರಾ, ಕುಲ್ದೀಪ್ ಯಾದವ್, ಜೋ ರೂಟ್, ಆಡಮ್ ಝಂಪಾ, ನವದೀಪ್ ಸೈನಿ, ಆಕಾಶ್ ವಸಿಷ್ಟ್, ಕೆಸಿ ಕರಿಯಪ್ಪ, ಓಬೇದ್ ಮೆಕಾಯ್, ಕೆಎಂ ಆಸಿಫ್, ಅಬ್ದುಲ್ ಬಸಿತ್, ಕುನಾಲ್ ಸಿಂಗ್ ರಾಥೋರ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ