ವಿಶ್ವಕಪ್ ಹಿಡಿಯುವ ಬದಲಾಗಿ ಕಪ್ ಗೆದ್ದು ತಂದವರ ಕೈ ಹಿಡಿದ ಮೋದಿ: ಫೋಟೋ ವೈರಲ್

|

Updated on: Jul 04, 2024 | 8:41 PM

2024ರ ಟಿ20 ವಿಶ್ವಕಪ್ ಗೆದ್ದು ಬೀಗಿರುವ ಭಾರತ ತಂಡ ತವರಿಗೆ ಆಗಮಿಸಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಬಾರ್ಬಡೋಸ್​ನಿಂದ ಗುರುವಾರ ಮುಂಜಾನೆ ದೆಹಲಿಗೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು ಮತ್ತು ಸಿಬ್ಬಂದಿಗಳು, 11 ಗಂಟೆಗೆ ನವದೆಹಲಿಯ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್​ ಟಿ20 ವಿಶ್ವಕಪ್ ಟ್ರೋಫಿ ಹಿಡಿದು ಮೋದಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಆದ್ರೆ, ಮೋದಿ ಮಾತ್ರ ಟ್ರೋಫಿಯನ್ನು ಮುಟ್ಟದೇ ದ್ರಾವಿಡ್ ಮತ್ತು ರೋಹಿತ್​ ಕೈ ಹಿಡಿದಿದ್ದಾರೆ. ಇದೀಗ ಈ ಫೋಟೋ ಸಿಕ್ಕಾಪಟೆ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ವಿಶ್ವಕಪ್ ಹಿಡಿಯುವ ಬದಲಾಗಿ ಕಪ್ ಗೆದ್ದು ತಂದವರ ಕೈ ಹಿಡಿದ ಮೋದಿ: ಫೋಟೋ ವೈರಲ್
ಟೀಂ ಇಂಡಿಯಾ ಜತೆ ಮೋದಿ
Follow us on

2024ರ ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ಬಾರ್ಬಡೋಸ್​ನಿಂದ ನೇರವಾಗಿ ದೆಹಲಿಗೆ ಆಗಮಿಸಿ ಅಲ್ಲಿಂದ ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೆ ಭೇಟಿ ನೀಡಿತು. ಈ ವೇಳೆ ಪ್ರಧಾನಿ ಮೋದಿ ಟೀಂ ಇಂಡಿಯಾ ಆಟಗಾರರಿಗೆ ಅಭಿನಂದನೆ ತಿಳಿಸಿ ಕೆಲ ಹೊತ್ತು ಕುಶಲೋಪರಿ ನಡೆಸಿದರು. ಬಳಿಕ ಟೀಮ್ ಇಂಡಿಯಾ ಆಟಗಾರರು ಪ್ರಧಾನಿಯೊಂದಿಗೆ ಟಿ20 ವಿಶ್ವಕಪ್ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದರ ನಡುವೆ ಭಾರತದ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್​ ಮೋದಿಗೆ ವಿಶ್ವಕಪ್ ಟ್ರೋಫಿ ಹಿಡಿದು ಫೋಟೋ ತೆಗೆಸಿಕೊಂಡರು. ಆದ್ರೆ, ಮೋದಿ ಮಾತ್ರ ಟ್ರೋಫಿಯನ್ನು ಹಿಡಿಯದೇ ಕೇವಲ ರೋಹಿತ್ ಮತ್ತು ದ್ರಾವಿಡ್ ಕೈ ಹಿಡಿದುಕೊಂಡಿದ್ದಾರೆ. ಇದರೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ನಾನಾ ವ್ಯಾಖ್ಯಾನಗಳು ವ್ಯಕ್ತವಾಗುತ್ತಿವೆ. ಪ್ರಧಾನಿ ಮೋದಿ ಅವರು ಯಾಕೆ ಟ್ರೋಫಿ ಮುಟ್ಟಿಲ್ಲ ಎಂಬ ಚರ್ಚೆ ಶುರುವಾಗಿದೆ.

ಫೋಟೋಗೆ ನಾನಾ ವ್ಯಾಖ್ಯಾನ

ಕೆಲವರು ಅದನ್ನು ಉತ್ತಮ ಗುಣವೆಂದು ಕೊಂಡಾಡಿದ್ದು,  ಪ್ರಶಸ್ತಿ ಗೆಲ್ಲಲು ಶ್ರಮಿಸಿದವರ ಕಠಿಣ ಪರಿಶ್ರಮವನ್ನು ಗುರುತಿಸುವ ಕೆಲಸ ಮಾಡಿದ್ದಾರೆ  ಎಂದಿದ್ದಾರೆ.  ಕಪ್‌ ಅವರೇ ಹಿಡಿಯೋ ಬದಲು, ನಾಯಕ ಮತ್ತು ಕೋಚ್ ಕೈ ಹಿಡಿದು ಅವರ ಕೈಯಲ್ಲಿ ಕಪ್ ಹಿಡಿಸಿದ್ದಾರೆ. ಇನ್ನು ಕೆಲವರು ಮೋದಿ ಅವರು ಕಪ್ ಎತ್ತಿ ಹಿಡಿಯುವ ಬದಲಾಗಿ ಆ ಕಪ್ ಗೆದ್ದು ತಂದವರ ಕೈ ಹಿಡಿದಿದ್ದಾರೆ ಎಂದು ವ್ಯಾಖ್ಯಾನ ಮಾಡಿದ್ದಾರೆ.

ಇದನ್ನೂ ಓದಿ: 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಾಗ ಭಾರತ ತಂಡದ ಪಾಲಿಗೆ ಲಕ್ಷ್ಮೀಯಾಗಿ ಬಂದಿದ್ದ ಲತಾ ಮಂಗೇಶ್ಕರ್

ನಿಮ್ಮ ಸೋಲುಗಳಲ್ಲಿ ನಾವು ನಿಮ್ಮೊಂದಿಗಿದ್ದೆವು, ನಿಮ್ಮ ಗೆಲುವಿನಲ್ಲೂ ನಾವು ನಿಮ್ಮೊಂದಿಗೆ ಇದ್ದೇವೆ, ನಾವು ಪ್ರತಿ ಸಂತೋಷ ಮತ್ತು ದುಃಖವನ್ನು ಒಟ್ಟಿಗೆ ಹಂಚಿಕೊಳ್ಳುತ್ತೇವೆ ಎನ್ನುವ ಸಂದೇಶ ನೀಡಿದ್ದಾರೆ ಎನ್ನುವ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು. ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಗೆದ್ದುಕೊಂಡ ರೋಹಿತ್‌ ಶರ್ಮ ಮತ್ತು ತಂಡದ ಗೆಲುವನ್ನು ಪ್ರಧಾನಿ ಕೊಂಡಾಡಿದರು.

ಮತ್ತಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:39 pm, Thu, 4 July 24