ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ವಿಶ್ವಚಾಂಪಿಯನ್ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ

ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ವಿಶ್ವಚಾಂಪಿಯನ್ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 04, 2024 | 7:53 PM

ಐಸಿಸಿ ಟಿ20 ವಿಶ್ವಕಪ್ ಅನ್ನು ಭಾರತ ಎರಡನೇ ಸಲ ಗೆದ್ದಿದೆ. 2007ರಲ್ಲಿ ನಡೆದ ಇದರ ಚೊಚ್ಚಲು ಅವೃತ್ತಿಯನ್ನು ಟೀಮ್ ಇಂಡಿಯ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಗೆದ್ದಿತ್ತು. ಈ ಬಾರಿ ಚಾಂಪಿಯನ್ ಶಿಪ್ ಗಾಗಿ ನಡೆದ ಹಣಾಹಣಿಯಲ್ಲಿ ಭಾರತವು ಚೋಕರ್ಸ್ ಎಂದೇ ಕ್ರಿಕೆಟ್ ವಿಶ್ವದಲ್ಲಿ ಹೆಸರಾಗಿರುವ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು.

ಮುಂಬೈ: ಒಂದು ದಿನದ ಪಂದ್ಯಗಳ ವಿಶ್ವಕಪ್ ಗೆದ್ದ ಹದಿಮೂರು ವರ್ಷಗಳ ನಂತರ ಐಸಿಸಿ ಟಿ20ಐ ವಿಶ್ವಕಪ್ ಮುಡಿಗೇರಿಸಿಕೊಂಡ ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯ ಇಂದು ಬೆಳಗ್ಗೆ ದೆಹಲಿಯಲ್ಲಿ ಬಂದಿಳಿದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಲ್ಲಿದ ಹೊರಟು ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈಗೆ ಅಗಮಿಸಿದೆ. ಟೂರ್ನಿಯುದ್ದಕ್ಕೂ ಚಾಂಪಿಯನ್ ಗಳಂತೆ ಆಡಿ ವಿಶ್ವಕಪ್ ಗೆದ್ದ ನೀಲಿ ಉಡುಗೆಯ ಹುಡುಗರನ್ನು ಸ್ವಾಗತಿಸಲು ವಿಮಾನ ನಿಲ್ದಾಣ ಮತ್ತು ರಸ್ತೆಗಳಲ್ಲಿ ಅಭಿಮಾನಿಗಳ ದಂಡು! ಆಟಗಾರರು ಒಬ್ಬರ ಹಿಂದೆ ಒಬ್ಬರಾಗಿ ನಿಲ್ದಾಣದಿಂದ ಹೊರಬರುವಾಗ ಜನರಿಂದ ಚಪ್ಪಾಳೆ, ಕೇಕೆ ಮತ್ತು ಆಟಗಾರರ ಹೆಸರುಗಳ ಕೂಗು! ಲೋಕಲ್ ಬ್ಲ್ಯೂ ಬಾಯ್ ಹಾರ್ದಿಕ್ ಪಾಂಡ್ಯ ತನ್ನ ತಲೆಯ ಮೇಲೆ ಕಪ್ ಇಟ್ಟುಕೊಂಡು ನಗುತ್ತಾ ಹೊರಬಂದರು. ಆಟಗಾರರನ್ನು ಈಗಾಗಲೇ ಕಿಕ್ಕಿರಿದು ತುಂಬಿರುವ ವಾಂಖೇಡೆ ಕ್ರೀಡಾಂಗಣದಲ್ಲಿ ಸತ್ಕರಿಸಲಾಗುವುದು ಮತ್ತು ಅಲ್ಲಿಂದ ಓಪನ್ ಟಾಪ್ ಬಸ್ಸಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ವಿಕ್ಟರಿ ಪರೇಡ್ ನಡೆಸಲಾಗುವುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ