ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ಇಲ್ಲಿದೆ ವಿಹಂಗಮ ನೋಟ

ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ಇಲ್ಲಿದೆ ವಿಹಂಗಮ ನೋಟ

ಗಂಗಾಧರ​ ಬ. ಸಾಬೋಜಿ
|

Updated on:Jul 04, 2024 | 7:01 PM

ಭಾರತ ತಂಡದ ಈ ವಿಜಯಯಾತ್ರೆಗೆ ಸಾಕ್ಷಿಯಾಗಲು ಮುಂಬೈನ ಏರ್​ಪೋರ್ಟ್​ನಿಂದ ವಾಂಖೆಡೆ ಸ್ಟೇಡಿಯಂವರೆಗೆ ರಸ್ತೆಯ ಎರಡೂ ಬದಿಯಲ್ಲಿ ಲಕ್ಷಾಂತರ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿದ್ದಾರೆ. ಮುಂಬೈನ ನಾರಿಮನ್‌ ಪಾಯಿಂಟ್‌ಗೆ ಬಸ್‌ನಲ್ಲಿ ಆಟಗಾರರು ತೆರಳುತ್ತಿದ್ದು, ರಸ್ತೆಯ ಎರಡೂ ಬದಿಯಲ್ಲಿ ಲಕ್ಷಾಂತರ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಕೆಲ ಹೊತ್ತಿನಲ್ಲೇ ವಿಜಯೋತ್ಸವದ ಮೆರವಣಿಗೆ ಆರಂಭವಾಗಲಿದೆ.

ಮುಂಬೈ, ಜುಲೈ 04: ಟಿ20 ವಿಶ್ವಕಪ್ (T20 World Cup) ಗೆದ್ದು ತಾಯ್ನಾಡಿಗೆ ಬಂದಿರುವ ಟೀಮ್ ಇಂಡಿಯಾಗೆ ಅಭೂತಪೂರ್ವ ಸ್ವಾಗತ ದೊರೆಯಲಿದೆ. ಸದ್ಯ ಮುಂಬೈ ಏರ್‌ಪೋರ್ಟ್‌ನಿಂದ ಹೊರಬಂದ ಟೀಂ ಇಂಡಿಯಾದ ಆಟಗಾರರು ಬಸ್‌ನಲ್ಲಿ ಕುಳಿತಿದ್ದಾರೆ. ಕೆಲ ಹೊತ್ತಿನಲ್ಲೇ ಮುಂಬೈನಲ್ಲಿ ವಿಜಯೋತ್ಸವದ ಮೆರವಣಿಗೆ ಆರಂಭವಾಗಲಿದೆ. ಭಾರತ ತಂಡದ ಈ ವಿಜಯಯಾತ್ರೆಗೆ ಸಾಕ್ಷಿಯಾಗಲು ಮುಂಬೈನ ಏರ್​ಪೋರ್ಟ್​ನಿಂದ ವಾಂಖೆಡೆ ಸ್ಟೇಡಿಯಂವರೆಗೆ ರಸ್ತೆಯ ಎರಡೂ ಬದಿಯಲ್ಲಿ ಲಕ್ಷಾಂತರ ಅಭಿಮಾನಿಗಳು (Massive Crowd) ಕಿಕ್ಕಿರಿದು ಜಮಾಯಿಸಿದ್ದಾರೆ. ರೋಹಿತ್​ ಶರ್ಮಾ, ವಿರಾಟ್​ ಕೋಹ್ಲಿ ಸೇರಿದಂತೆ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 04, 2024 06:58 PM