Prasidh Krishna: ಭರ್ಜರಿ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧ್ ಕೃಷ್ಣ

| Updated By: ಝಾಹಿರ್ ಯೂಸುಫ್

Updated on: Feb 10, 2022 | 2:29 PM

India vs West Indies: ಟೀಮ್ ಇಂಡಿಯಾ ಬೌಲರುಗಳ ಪರಾಕ್ರಮದ ಮುಂದೆ ವೆಸ್ಟ್ ಇಂಡೀಸ್ ಆಟಗಾರರು ಕ್ರೀಸ್ ಕಚ್ಚಿ ನಿಲ್ಲಲಾಗಲಿಲ್ಲ. ಅದರಂತೆ 193 ರನ್​ಗೆ ಆಲೌಟ್ ಆಗುವ ಮೂಲಕ 44 ರನ್​ಗಳಿಂದ ಸೋಲನುಭವಿಸಿತು.

Prasidh Krishna: ಭರ್ಜರಿ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧ್ ಕೃಷ್ಣ
prasidh krishna
Follow us on

ವೆಸ್ಟ್ ಇಂಡೀಸ್ (India vs West Indies 2nd Odi) ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಕೆಎಲ್ ರಾಹುಲ್ (KL Rahul) ಮಿಂಚಿದ್ರೆ, ಬೌಲಿಂಗ್​ನಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna)  ಪರಾಕ್ರಮ ಮೆರೆದಿದ್ದರು. ಅದರಲ್ಲೂ 238 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್​ನಲ್ಲಿ ರನ್​ಗಳಿಸಲು ಪರದಾಡಿತು. ಆರಂಭದಲ್ಲೇ 2 ವಿಕೆಟ್ ಉರುಳಿಸಿದ ಪ್ರಸಿದ್ಧ್ ಆ ಬಳಿಕ ಮತ್ತೆರಡು ವಿಕೆಟ್ ಕಬಳಿಸಿದರು. ಅದರಂತೆ 9 ಓವರ್​ಗಳನ್ನು ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು. ಆದರೆ ಈ ವೇಳೆ ನೀಡಿದ್ದು ಕೇವಲ 12 ರನ್​ ಮಾತ್ರ.

ವೆಸ್ಟ್ ಇಂಡೀಸ್ ವಿರುದ್ದ ಇಷ್ಟೊಂದು ಕಡಿಮೆ ರನ್ ನೀಡಿ ಟೀಮ್ ಇಂಡಿಯಾದ ಯಾವುದೇ ವೇಗದ ಬೌಲರ್ 4 ವಿಕೆಟ್ ಪಡೆದಿಲ್ಲ ಎಂಬುದು ವಿಶೇಷ. ಇದು ಒಂದು ದಾಖಲೆಯಾದರೆ, ಅತೀ ಕಡಿಮೆ ರನ್​ ನೀಡಿ 4 ಮತ್ತು ಅದಕ್ಕಿಂತ ಹೆಚ್ಚು ವಿಕೆಟ್​ ಪಡೆದ ಟೀಮ್ ಇಂಡಿಯಾ ಮೂರನೇ ವೇಗಿ ಎಂಬ ದಾಖಲೆಯನ್ನೂ ಕೂಡ ಪ್ರಸಿದ್ಧ್ ಕೃಷ್ಣ ನಿರ್ಮಿಸಿದ್ದಾರೆ.

ಈ ದಾಖಲೆಯ ಪಟ್ಟಿಯಲ್ಲಿ ಕನ್ನಡಿಗ ಸ್ಟುವರ್ಟ್ ಬಿನ್ನಿ ಅಗ್ರಸ್ಥಾನದಲ್ಲಿದ್ದಾರೆ. ಬಿನ್ನಿ 2014 ರಲ್ಲಿ ಬಾಂಗ್ಲಾದೇಶದ ವಿರುದ್ದ 4 ರನ್ ನೀಡಿ 6 ವಿಕೆಟ್ ಕಬಳಿಸಿ ಈ ದಾಖಲೆ ಬರೆದಿದ್ದರು. ಹಾಗೆಯೇ ಭುವನೇಶ್ವರ್ ಕುಮಾರ್ ಶ್ರೀಲಂಕಾ ವಿರುದ್ದ 8 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇದೀಗ ಪ್ರಸಿದ್ದ್ ಕೃಷ್ಣ 12 ರನ್​ ನೀಡಿ 4 ವಿಕೆಟ್ ಕಬಳಿಸುವ ಮೂಲಕ ವಿಶೇಷ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ದ ಅತೀ ಕಡಿಮೆ ರನ್​ ನೀಡಿ 4 ವಿಕೆಟ್ ಪಡೆದ ಟೀಮ್ ಇಂಡಿಯಾ ವೇಗದ ಬೌಲರ್ ಎಂಬ ದಾಖಲೆಯನ್ನೂ ಕೂಡ ನಿರ್ಮಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಸೂರ್ಯ ಕುಮಾರ್ ಯಾದವ್ ಅವರ 64 ರನ್ ಹಾಗೂ ಕೆಎಲ್ ರಾಹುಲ್ ಅವರ 49 ರನ್​ಗಳ ನೆರವಿನಿಂದ 50 ಓವರ್​ಗಳಲ್ಲಿ 237 ರನ್​ಗಳಿಸಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್​ಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆರಂಭದಲ್ಲೇ ಆಘಾತ ನೀಡಿದ್ದರು. ತಂಡದ ಮೊತ್ತ 50 ರನ್​ ಆಗುವಷ್ಟರಲ್ಲಿ ಮೂರು ವಿಕೆಟ್ ಉರುಳಿಸಿದ ಟೀಮ್ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಬ್ರೂಕ್ಸ್ 44 ರನ್​ ಬಾರಿಸಿ ತಂಡಕ್ಕೆ ಆಸರೆಯಾದರು. ಈ ಹಂತದಲ್ಲಿ ದಾಳಿಗಿಳಿದ ದೀಪಕ್ ಹೂಡಾ ಬ್ರೂಕ್ಸ್ ವಿಕೆಟ್ ಪಡೆದರು.

ಆ ಬಳಿಕ ಟೀಮ್ ಇಂಡಿಯಾ ಬೌಲರುಗಳ ಪರಾಕ್ರಮದ ಮುಂದೆ ವೆಸ್ಟ್ ಇಂಡೀಸ್ ಆಟಗಾರರು ಕ್ರೀಸ್ ಕಚ್ಚಿ ನಿಲ್ಲಲಾಗಲಿಲ್ಲ. ಅದರಂತೆ 193 ರನ್​ಗೆ ಆಲೌಟ್ ಆಗುವ ಮೂಲಕ 44 ರನ್​ಗಳಿಂದ ಸೋಲನುಭವಿಸಿತು. ಟೀಮ್ ಇಂಡಿಯಾ ಪರ ಪ್ರಸಿದ್ಧ್ ಕೃಷ್ಣ 9 ಓವರ್​ಗಳಲ್ಲಿ ಕೇವಲ 12 ರನ್​ ನೀಡಿ 4 ವಿಕೆಟ್ ಉರುಳಿಸಿ ಮಿಂಚಿದರು. ಇನ್ನು ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರೆ, ಸಿರಾಜ್ ಹಾಗೂ ಉಳಿದ ಬೌಲರುಗಳು ತಲಾ ಒಂದೊಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ. ಇನ್ನು ಈ ಸರಣಿಯ ಕೊನೆಯ ಪಂದ್ಯವು ಫೆಬ್ರವರಿ 11 ರಂದು ನಡೆಯಲಿದೆ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

(prasidh krishna record cheapest 4 wicket haul for indian pacers in odis)