Rishabh Pant: ಮಾತೃ ವಿಯೋಗದ ನಡುವೆಯೂ ರಿಷಭ್‌ ಪಂತ್‌ ತಾಯಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ

| Updated By: Vinay Bhat

Updated on: Dec 31, 2022 | 8:10 AM

PM Narendra Modi: ಶುಕ್ರವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ರಿಷಭ್ ಪಂತ್ ಅವರ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.

Rishabh Pant: ಮಾತೃ ವಿಯೋಗದ ನಡುವೆಯೂ ರಿಷಭ್‌ ಪಂತ್‌ ತಾಯಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ
Rishabh Pant and PM Modi
Follow us on

ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಟೀಮ್ ಇಂಡಿಯಾ ಆಟಗಾರ ರಿಷಭ್​ ಪಂತ್ (Rishabh Pant) ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಚಾರಿಸಿದ್ದಾರೆ. ಮಾತೃ ವಿಯೋಗದ ನೋವಿನ ನಡೆವೆಯೂ ಮೋದಿ (PM Modi) ಅವರು, ಪಂತ್​ ಅವರ ತಾಯಿಯೊಂದಿಗೆ ಮಾತನಾಡಿ ಆರೋಗ್ಯದ ಕುರಿತು ಮಾಹಿತಿ ಪಡೆದಿದ್ದಾರೆ. ಶುಕ್ರವಾರ ಸಂಜೆ ರಿಷಭ್ ಪಂತ್ ಅವರ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ. ಟ್ವೀಟ್​ (Tweet) ಕೂಡ ಮಾಡಿರುವ ಪ್ರಧಾನಿ, ”ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅವರ ಅಪಘಾತದಿಂದ ನೊಂದಿದ್ದೇನೆ. ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ,” ಎಂದು ಹೇಳಿದ್ದರು.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಪಂತ್ ಅವರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆ ಮತ್ತು ಈ ಆಘಾತಕಾರಿ ಸಮಯದಿಂದ ಹೊರಬರಲು ಅಗತ್ಯವಿರುವ ಎಲ್ಲ ಸಹಕಾರವನ್ನು ಅವರಿಗೆ ಮಂಡಳಿ ನೀಡಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ರಿಷಭ್‌ ಪಂತ್​ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ವೈದ್ಯಕೀಯ ತಂಡ ನಿಕಟ ಸಂಪರ್ಕದಲ್ಲಿದ್ದು, ಅವರ ಕುಟುಂಬದೊಂದಿಗೂ ಸಹ ಬಿಸಿಸಿಐ ನಿರಂತರ ಸಂಪರ್ಕದಲ್ಲಿದೆ ಎಂದು ಜಯ್​ ಶಾ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಟ್ವೀಟ್​ ಮಾಡಿದ್ದು, ನನ್ನ ಪ್ರಾರ್ಥನೆಯು ಪಂತ್ ಜೊತೆಯಲ್ಲಿದೆ. ಅವರು ಚೇತರಿಕೆಯ ಹಾದಿಯಲ್ಲಿ ಹೋರಾಡುತ್ತಿದ್ದಾರೆ. ನಾವು ಅವರಿಗೆ ಅಗತ್ಯವಿರುವ ಎಲ್ಲ ನೆರವು ನೀಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
ದುಬಾರಿ ಕಾರುಗಳ ಒಡೆಯ ರಿಷಬ್​ ಪಂತ್​ಗೆ ಕಡಿಮೆ ಬೆಲೆಯ ಈ ಕಾರೆಂದರೆ ಬಲು ಅಚ್ಚುಮೆಚ್ಚು!
Rishabh Pant accident: ಹೊರಬಿತ್ತು ರಿಷಬ್ ಪಂತ್ ಎಕ್ಸ್-ರೇ ರಿಪೋರ್ಟ್; ಬಿಸಿಸಿಐ ನೀಡಿದ ಹೇಳಿಕೆಯಲ್ಲೇನಿದೆ?
Rishabh Pant accident: ರಿಷಬ್ ಪಂತ್ ಚೇತರಿಕೆಗಾಗಿ ಪ್ರಾರ್ಥಿಸಿದ ಪಾಕಿಸ್ತಾನ್ ಕ್ರಿಕೆಟಿಗರು
Rishabh Pant accident: ಅಪಘಾತಕ್ಕೀಡಾದ ರಿಷಬ್ ಪಂತ್; ಇನ್​ಸ್ಟಾದಲ್ಲಿ ನಟಿ ಊರ್ವಶಿ ಪೋಸ್ಟ್ ಮಾಡಿದ್ದೇನು ಗೊತ್ತಾ?

ನೋವಿನಲ್ಲಿ ನರಳುತ್ತಿದ್ದ ರಿಷಬ್ ಪಂತ್ ನೆರವಿಗೆ ಬಾರದೆ ಬ್ಯಾಗ್​ನಲ್ಲಿದ ಹಣ ಕದ್ದು ಪರಾರಿಯಾದ ಕ್ರೂರಿಗಳು..!

 

ಪಂತ್, ತಮ್ಮ ಹುಟ್ಟೂರಾದ ಉತ್ತರಾಖಂಡದ ರೂರ್ಕಿಗೆ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಪಂತ್ ಅವರ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಅವರ ತಲೆ, ಬೆನ್ನು ಮತ್ತು ಕಾಲಿಗೆ ತೀವ್ರ ಗಾಯಗಳಾಗಿವೆ. ತಕ್ಷಣವೇ ಅವರನ್ನು ಸಕ್ಷಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಪೀಲೆ ನಿಧನಕ್ಕೆ ಮೋದಿ ಸಂತಾಪ:

ಫುಟ್ಬಾಲ್ ಲೋಕದ ದೇವರು ಪೀಲೆ ಎಂದೇ ಖ್ಯಾತರಾಗಿದ್ದ ಎಡ್ಸನ್​ ಅರಾಂಟೆಸ್​ ಡು ನಸಿಮೆಂಟೊ (82) ಗುರುವಾರ ರಾತ್ರಿ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದರು. ಪೀಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ‘ಪೀಲೆ ಅವರ ನಿಧನವು ಕ್ರೀಡಾ ಜಗತ್ತಿಗೆ ಭರಿಸಲಾಗದ ನಷ್ಟವನ್ನುಂಟು ಮಾಡಿದೆ. ಜಾಗತಿಕ ಫುಟ್‌ಬಾಲ್ ಸೂಪರ್‌ ಸ್ಟಾರ್, ಅವರ ಜನಪ್ರಿಯತೆ ಎಲ್ಲೆಗಳನ್ನು ಮೀರಿದೆ. ಅವರ ಅತ್ಯುತ್ತಮ ಕ್ರೀಡಾ ಪ್ರದರ್ಶನ ಮತ್ತು ಯಶಸ್ಸು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:10 am, Sat, 31 December 22