ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (DC vs PBKS) ಹಿಂದೆಂದೂ ನೀಡದಂತಹ ಏಟು ಕೊಟ್ಟಿತು. ಮಯಾಂಕ್ ಪಡೆ ಆರಂಭದಲ್ಲಿ ಡೆಲ್ಲಿ ಬೌಲರ್‌ಗಳ ಡೆಡ್ಲಿ ಬೌಲಿಂಗ್ಗೆ ಸರ್ವಪತನ ಕಂಡರೆ ನಂತರ ಪೃಥ್ವಿ ಶಾ (Prithvi Shaw) ಹಾಗೂ ಡೇವಿಡ್ ವಾರ್ನರ್ (David Warner) ಸಿಡಿಲಬ್ಬರದ ಬ್ಯಾಟಿಂಗ್ಗೆ ಸುಸ್ತಾಗಿ ಹೋಯಿತು. ಪಂಜಾಬ್ ಈ ಬಾರಿಯ ಟೂರ್ನಿಯಲ್ಲಿ ನೀಡಿದ ಅತ್ಯಂತ ಕಳಪೆ ಪ್ರದರ್ಶನ ಇದಾಯಿತು. ಇತ್ತ ಗೆಲುವಿಗಾಗಿ ಹಾತೊರೆಯುತ್ತಿದ್ದ ಪಂತ್ ಪಡೆ ಇಂತಹದ್ದೊಂದು ಜಯ ಸಾಧಿಸುತ್ತೆ ಎಂದು ಅಂದುಕೊಂಡಿರಲಿಲ್ಲ. ಕೇವಲ 10 ಓವರ್ನಲ್ಲೇ ಗೆಲುವಿನ ದಡ ಸೇರಿದ ಡೆಲ್ಲಿ 9 ವಿಕೆಟ್ಗಳ ಅಮೋಘ ಜಯ ಕಂಡಿತು. ಇದರೊಂದಿಗೆ ಆಡಿದ ಆರು ಪಂದ್ಯಗಳಲ್ಲಿ ತಲಾ ಮೂರು ಗೆಲುವು ಸೋಲು ಕಂಡು ಆರನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಎಂಟನೇ ಸ್ಥಾನಕ್ಕೆ ಕುಸಿದಿದೆ.
ಡೆಲ್ಲಿ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ನಲ್ಲಿ 115 ರನ್ಗೆನೇ ಆಲೌಟ್ ಆಯಿತು. ಲೋ ಸ್ಕೋರ್ ಆಗಿದ್ದ ಅನೇಕ ಪಂದ್ಯ ಹೈವೋಲ್ಟೇಜ್ ಪಂದ್ಯಗಳಾದ ಉದಾಹರಣೆಗಳಿವೆ. ಆದರೆ, ಈ ಬಾರಿ ಹಾಗಾಗಲಿಲ್ಲ. ಡೆಲ್ಲಿ ಓಪನರ್ಗಳಾದ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ ಮೊದಲ 6 ಓವರ್ಗೂ ಮುನ್ನವೇ ಅಂದರೆ ಪವರ್ ಪ್ಲೇ ಮುಗಿಯುವ ಮೊದಲೆ ತಂಡದ ಗೆಲುವನ್ನು ಖಚಿತ ಪಡಿಸಿಬಿಟ್ಟರು. ಪಂಜಾಬ್ ಬೌಲರ್‌ಗಳ ಮೇಲೆ ದಂಡೆತ್ತಿ ಹೋದ ಈ ಇಬ್ಬರು ಆಟಗಾರರು ಮೊದಲ ವಿಕೆಟ್‌ಗೆ ಕೇವಲ 6.3 ಓವರ್‌ಗಳಲ್ಲಿ 83 ರನ್‌ಗಳ ಜೊತೆಯಾಟ ನೀಡಿ ಬೇರ್ಪಟ್ಟರು.
ಪೃಥ್ವಿ ಶಾ 20 ಎಸೆತಗಳಲ್ಲಿ 41 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಡೇವಿಡ್ ವಾರ್ನರ್ ನಂತರ ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದರು. 30 ಎಸೆತಗಳಲ್ಲಿ 60 ರನ್‌ಗಳಿಸಿ ವಾರ್ನರ್ ಅಜೇಯವಾಗುಳಿದರು. ಸರ್ಫರಾಜ್ ಖಾನ್ 12 ರನ್‌ಗಳಿಸಿ ಅಜೇಯವಾಗುಳಿದರು. ಅಂತಿಮವಾಗಿ ಕೇವಲ 10.3 ಓವರ್‌ಗಳಲ್ಲಿ ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಕೆಲವು ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಡೆಲ್ಲಿ ಪಾಳಯದಲ್ಲಿ ಆತಂಕ ಮಡುಗಟ್ಟಿತ್ತು. ಈ ಎಲ್ಲ ಮಾನಸಿಕ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ರಿಷಭ್ ಪಂತ್ ಪಡೆ ಯಶಸ್ವಿಯಾಗಿದೆ. ಈ ಪಂದ್ಯದ ಹೈಲೇಟ್ಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಂಜಾಬ್ ಉತ್ತಮ ಆರಂಭ ಪಡೆಯುವ ಸಿದ್ಧತೆಯಲ್ಲಿರುವಾಗಲೇ ದಿಢೀರ್ ಕುಸಿತಕ್ಕೆ ಸಿಲುಕಿತು. ಲಲಿತ್ ಯಾದವ್, ಮುಸ್ತಫಿಜುರ್ ರೆಹಮಾನ್, ಅಕ್ಷರ್ ಪಟೇಲ್ ಪವರ್ ಪ್ಲೇ ವೇಳೆ ತಮ್ಮ ಪವರ್ ತೋರ್ಪಡಿಸಿದರು. ಪರಿಣಾಮ, 47 ರನ್ನಿಗೆ 3 ವಿಕೆಟ್ ಉರುಳಿತು. ಪಂಜಾಬ್ ಪರ ವಿಕೆಟ್ ಕೀಪರ್, ಬ್ಯಾಟರ್ ಜಿತೇಶ್ ಶರ್ಮಾ ಗರಿಷ್ಠ 32 ರನ್ (23 ಎಸೆತ, 5 ಬೌಂಡರಿ) ಗಳಿಸಿದರು. ನಾಯಕ ಮಯಂಕ್ ಅಗರವಾಲ್ (25) ತಂಡಕ್ಕೆ ಮರಳಿದರೂ ಪ್ರಭಾವಿ ಎನಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅನುಭವಿ ಶಿಖರ್ ಧವನ್ ಹಾಗೂ ಜಾನಿ ಬೆಸ್ಟೊ ತಲಾ ಒಂಬತ್ತು ರನ್ ಗಳಿಸಿ ಔಟ್ ಆದರು. ಉತ್ತಮ ಬ್ಯಾಟಿಂಗ್ ಲಯದಲ್ಲಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 4 ಓವರ್ಗೆ 24 ರನ್ ನೀಡಿ 2 ವಿಕೆಟ್ ಕಿತ್ತ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಬಾಜಿಕೊಂಡರು.
IPL 2022: ಇಬ್ಬರು ಆಟಗಾರರಿಗೆ ಕೊರೋನಾ: ಮತ್ತೆ ಡೆಲ್ಲಿ ಪಂದ್ಯ ಸ್ಥಳಾಂತರ
Published On - 7:34 am, Thu, 21 April 22