AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishabh Pant: ಕೋವಿಡ್​ಗೆ ಸೆಡ್ಡು ಹೊಡೆದ ಡೆಲ್ಲಿ: ಪಂದ್ಯ ಮುಗಿದ ಬಳಿಕ ರಿಷಭ್ ಪಂತ್ ಹೇಳಿದ್ದೇನು ನೋಡಿ

DC vs PBKS, IPL 2022: ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್‌ಗಳಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಡೆಲ್ಲಿ ನಾಯಕ ರಿಷಭ್ ಪಂತ್ ಏನು ಹೇಳಿದರು ಕೇಳಿ.

Rishabh Pant: ಕೋವಿಡ್​ಗೆ ಸೆಡ್ಡು ಹೊಡೆದ ಡೆಲ್ಲಿ: ಪಂದ್ಯ ಮುಗಿದ ಬಳಿಕ ರಿಷಭ್ ಪಂತ್ ಹೇಳಿದ್ದೇನು ನೋಡಿ
Rishabh Pant post-match presentation DC vs PBKS
TV9 Web
| Updated By: Vinay Bhat|

Updated on:Apr 21, 2022 | 9:59 AM

Share

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್​​ಗೆ (DC vs PBKS) ಬಹುಮುಖ್ಯವಾಗಿತ್ತು. ಗೆಲುವಿನ ಒತ್ತಡಕ್ಕೆ ಮರಳಬೇಕಾದ ಅನಿವಾರ್ಯತೆ ಒಂದುಕಡೆಯಾದರೆ ಮತ್ತೊಂದೆಡೆ ತಂಡದಲ್ಲಿ ಕೊರೊನಾ ಅಲೆ ಎಬ್ಬಿತ್ತು. ಕೆಲವು ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಡೆಲ್ಲಿ ಪಾಳಯದಲ್ಲಿ ಆತಂಕ ಮಡುಗಟ್ಟಿತ್ತು. ಆದರೆ, ಈ ಎಲ್ಲ ಮಾನಸಿಕ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ರಿಷಭ್ ಪಂತ್ ಪಡೆ ಯಶಸ್ವಿಯಾಗಿದೆ. ಬೌಲರ್‌ಗಳ ಸಂಘಟನಾತ್ಮಕ ದಾಳಿಯ ಜೊತೆಗೆ ಆರಂಭಿಕರಾದ ಡೇವಿಡ್ ವಾರ್ನರ್ (David Warner) ಹಾಗೂ ಪೃಥ್ವಿ ಶಾ ಜೋಡಿಯ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-15ರಲ್ಲಿ ಗೆಲುವಿನ ಲಯಕ್ಕೆ ಮರಳಿತು. ರಿಷಭ್ ಪಂತ್ ಪಡೆ 9 ವಿಕೆಟ್‌ಗಳಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಡೆಲ್ಲಿ ನಾಯಕ ರಿಷಭ್ ಪಂತ್ (Rishabh Pant) ಏನು ಹೇಳಿದರು ಕೇಳಿ.

“ನಮ್ಮ ತಂಡದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಯಾಕೆಂದರೆ ಮತ್ತೊಬ್ಬ ಆಟಗಾರ ಟಿಮ್ ಸೈಫೆರ್ಟ್​ ಅವರಿಗೆ ಕೂಡ ಕೋವಿಡ್ ಪಾಸಿಟಿವ್ ಕಂಡುಬಂತು. ಇದರಿಂದ ನಾವು ಗೊಂದಲ, ಭಯ, ನಾವು ಈಗ ಏನು ಮಾಡಲಿದ್ದೇವೆ ಎಂಬ ಭಾವನೆ ಮೂಡಿತ್ತು. ನಂತರ ನಾವು ತಂಡದ ಸಭೆಯಲ್ಲಿ ಪಾಲ್ಗೊಂಡು ಯಾವ ವಿಚಾರದಲ್ಲಿ ಹೆಚ್ಚು ಗಮನ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದೆವು. ಹೊರ ಜಗತ್ತಿನಿಂದ ಸಾಕಷ್ಟು ಮಾತುಗಳು ಕೇಳಿಬರುತ್ತಿದ್ದರೂ ನಾವು ಪಂದ್ಯದ ಬಗ್ಗೆ ಗಮನ ಹರಿಸಿದೆವು,” ಎಂದು ರಿಷಭ್ ಪಂತ್ ತಂಡದ ಪಾಸಿಟಿವ್ ವಿಚಾರದ ಬಗ್ಗೆ ಹೇಳಿದ್ದಾರೆ.

“ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಅವರನ್ನು ಅವರ ಪಾಡಿಗೆ ಆಡಲು ಬಿಟ್ಟುಬಿಟ್ಟೆ. ಯಾಕೆಂದರೆ ಇಲ್ಲಿ ಪ್ರತಿಯೊಬ್ಬರಿಗೂ ಅವರ ಕೆಲಸ ಏನು ಎಂಬ ಅರಿವಿದೆ. ತಂಡಕ್ಕೆ ಏನು ಕೊಡುಗೆ ನೀಡಬೇಕು ಎಂಬುದು ತಿಳಿದುಕೊಂಡಿದ್ದಾರೆ. ಪ್ರತಿ ಪಂದ್ಯದಿಂದಲು ನಾವು ಕಲಿಯುತ್ತಿದ್ದೇವೆ. ಫಲಿತಾಂಶ ನಮ್ಮ ಕೈಯಲ್ಲಿಲ್ಲ. ಇಲ್ಲಿ ವಿಕೆಟ್ ಚೆನ್ನಾಗಿತ್ತು. ಚೆಂಡು ನಿಂತು ಬರುತ್ತಿದ್ದ ಕಾರಣ ನಾನು ಸ್ಪಿನ್ನರ್​ಗಳಿಗೆ ಹೆಚ್ಚಿನ ಓವರ್ ಹಾಕಲು ಕೊಟ್ಟೆ,” ಎಂಬುದು ಪಂತ್ ಮಾತು.

ಇನ್ನು ಸೋತ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮಾತನಾಡಿ, “ಈ ದಿನವನ್ನು ಮರೆಯುವುದು ತುಂಬಾ ಕಷ್ಟ. ಉತ್ತಮ ಎಂದರೆ ಮುಂದೆ ಸಾಗಿ ಸೋಲಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರುವುದು. ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ ಉತ್ತಮ ಪ್ರದರ್ಶನ ನೀಡಲಿಲ್ಲ. ಈ ದಿನ ಕಳೆದು ನಾವು ಮುಂದೆ ಸಾಗಬೇಕಷ್ಟೆ. ನಾವು ಪಂದ್ಯದ ಆರಂಭದಲ್ಲೇ ಸಾಕಷ್ಟು ವಿಕೆಟ್​ಗಳನ್ನು ಕಳೆದುಕೊಂಡೆವು. ಈ ಪಿಚ್​ನಲ್ಲಿ 180 ರನ್ ಗಳಿಸಿದರೆ ಅದು ಉತ್ತಮ ಟೋಟಲ್. ನಾನು ಈ ಪಂದ್ಯದ ಆರಂಭದಲ್ಲಿ ಕೆಲ ಓವರ್​ಗಳನ್ನು ಸ್ಪಿನ್ನರ್​ಗಳಿಗೆ ನೀಡಿದ್ದರೆ ವರ್ಕ್ ಆಗುತ್ತಿತ್ತು. ನಾನು ಹಾಗೆ ಮಾಡಲಿಲ್ಲ,” ಎಂದು ಸೋಲಿನ ಹೊಣೆ ಹೊತ್ತುಕೊಂಡಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಹಂಚಿಕೊಂಡ ಕುಲ್ದೀಪ್:

ಈ ಪಂದ್ಯದಲ್ಲಿ 4 ಓವರ್​ಗೆ 24 ರನ್ ನೀಡಿ 2 ವಿಕೆಟ್ ಕಿತ್ತ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಆದರೆ, ಪ್ರಶಸ್ತಿ ಸ್ವೀಕರಿಸುವ ವೇಳೆ ನನ್ನ ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅಕ್ಷರ್‌ ಪಟೇಲ್‌ ಜೊತೆಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದರು. “ಅಕ್ಷರ್ ಅದ್ಭುತವಾಗಿ ಬೌಲಿಂಗ್‌ ಮಾಡಿ, ಇನಿಂಗ್ಸ್‌ನ ಮಧ್ಯದ ಓವರ್‌ಗಳಲ್ಲಿ ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ನನ್ನ ಪ್ರಕಾರ ಅಕ್ಷರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಅರ್ಹವಾದ ವ್ಯಕ್ತಿ. ಹೀಗಾಗಿ ಅವರೊಟ್ಟಿಗೆ ಈ ಪ್ರಶಸ್ತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ,” ಎಂದು ಕುಲ್ದೀಪ್ ಹೇಳಿದ್ದಾರೆ.

MI vs CSK: ಐಪಿಎಲ್​​ನಲ್ಲಿಂದು ರೋಚಕ ಕದನ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಎಸ್​​ಕೆ-ಮುಂಬೈ

DC vs PBKS, IPL 2022: 6.3 ಓವರ್​ನಲ್ಲಿ 83 ರನ್: ವಾರ್ನರ್-ಪೃಥ್ವಿ ಶಾ ಸಿಡಿಲಬ್ಬರದ ಬ್ಯಾಟಿಂಗ್ ಹೇಗಿತ್ತು ನೋಡಿ

Published On - 9:58 am, Thu, 21 April 22

ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ