DC vs PBKS, IPL 2022: 6.3 ಓವರ್​ನಲ್ಲಿ 83 ರನ್: ವಾರ್ನರ್-ಪೃಥ್ವಿ ಶಾ ಸಿಡಿಲಬ್ಬರದ ಬ್ಯಾಟಿಂಗ್ ಹೇಗಿತ್ತು ನೋಡಿ

David Warner-Prithvi Shaw: ಮಯಾಂಕ್ ಪಡೆ ಆರಂಭದಲ್ಲಿ ಡೆಲ್ಲಿ ಬೌಲರ್​​ಗಳ ಡೆಡ್ಲಿ ಬೌಲಿಂಗ್​ಗೆ ಸರ್ವಪತನ ಕಂಡರೆ ನಂತರ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಸುಸ್ತಾಗಿ ಹೋಯಿತು. ಪಂಜಾಬ್ ಈ ಬಾರಿಯ ಟೂರ್ನಿಯಲ್ಲಿ ನೀಡಿದ ಅತ್ಯಂತ ಕಳಪೆ ಪ್ರದರ್ಶನ ಇದಾಯಿತು.

DC vs PBKS, IPL 2022: 6.3 ಓವರ್​ನಲ್ಲಿ 83 ರನ್: ವಾರ್ನರ್-ಪೃಥ್ವಿ ಶಾ ಸಿಡಿಲಬ್ಬರದ ಬ್ಯಾಟಿಂಗ್ ಹೇಗಿತ್ತು ನೋಡಿ
Warner and Prithvi Shaw DC vs PBKS
Follow us
TV9 Web
| Updated By: Vinay Bhat

Updated on:Apr 21, 2022 | 7:36 AM

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (DC vs PBKS) ಹಿಂದೆಂದೂ ನೀಡದಂತಹ ಏಟು ಕೊಟ್ಟಿತು. ಮಯಾಂಕ್ ಪಡೆ ಆರಂಭದಲ್ಲಿ ಡೆಲ್ಲಿ ಬೌಲರ್​​ಗಳ ಡೆಡ್ಲಿ ಬೌಲಿಂಗ್​ಗೆ ಸರ್ವಪತನ ಕಂಡರೆ ನಂತರ ಪೃಥ್ವಿ ಶಾ (Prithvi Shaw) ಹಾಗೂ ಡೇವಿಡ್ ವಾರ್ನರ್ (David Warner) ಸಿಡಿಲಬ್ಬರದ ಬ್ಯಾಟಿಂಗ್​ಗೆ ಸುಸ್ತಾಗಿ ಹೋಯಿತು. ಪಂಜಾಬ್ ಈ ಬಾರಿಯ ಟೂರ್ನಿಯಲ್ಲಿ ನೀಡಿದ ಅತ್ಯಂತ ಕಳಪೆ ಪ್ರದರ್ಶನ ಇದಾಯಿತು. ಇತ್ತ ಗೆಲುವಿಗಾಗಿ ಹಾತೊರೆಯುತ್ತಿದ್ದ ಪಂತ್ ಪಡೆ ಇಂತಹದ್ದೊಂದು ಜಯ ಸಾಧಿಸುತ್ತೆ ಎಂದು ಅಂದುಕೊಂಡಿರಲಿಲ್ಲ. ಕೇವಲ 10 ಓವರ್​​ನಲ್ಲೇ ಗೆಲುವಿನ ದಡ ಸೇರಿದ ಡೆಲ್ಲಿ 9 ವಿಕೆಟ್​ಗಳ ಅಮೋಘ ಜಯ ಕಂಡಿತು. ಇದರೊಂದಿಗೆ ಆಡಿದ ಆರು ಪಂದ್ಯಗಳಲ್ಲಿ ತಲಾ ಮೂರು ಗೆಲುವು ಸೋಲು ಕಂಡು ಆರನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್​ ಎಂಟನೇ ಸ್ಥಾನಕ್ಕೆ ಕುಸಿದಿದೆ.

ಡೆಲ್ಲಿ ಬೌಲರ್​ಗಳ ಸಂಘಟಿತ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್​ ತಂಡ ನಿಗದಿತ 20 ಓವರ್​​​ನಲ್ಲಿ 115 ರನ್​ಗೆನೇ ಆಲೌಟ್ ಆಯಿತು. ಲೋ ಸ್ಕೋರ್ ಆಗಿದ್ದ ಅನೇಕ ಪಂದ್ಯ ಹೈವೋಲ್ಟೇಜ್ ಪಂದ್ಯಗಳಾದ ಉದಾಹರಣೆಗಳಿವೆ. ಆದರೆ, ಈ ಬಾರಿ ಹಾಗಾಗಲಿಲ್ಲ. ಡೆಲ್ಲಿ ಓಪನರ್​ಗಳಾದ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ ಮೊದಲ 6 ಓವರ್​ಗೂ ಮುನ್ನವೇ ಅಂದರೆ ಪವರ್ ಪ್ಲೇ ಮುಗಿಯುವ ಮೊದಲೆ ತಂಡದ ಗೆಲುವನ್ನು ಖಚಿತ ಪಡಿಸಿಬಿಟ್ಟರು. ಪಂಜಾಬ್ ಬೌಲರ್‌ಗಳ ಮೇಲೆ ದಂಡೆತ್ತಿ ಹೋದ ಈ ಇಬ್ಬರು ಆಟಗಾರರು ಮೊದಲ ವಿಕೆಟ್‌ಗೆ ಕೇವಲ 6.3 ಓವರ್‌ಗಳಲ್ಲಿ 83 ರನ್‌ಗಳ ಜೊತೆಯಾಟ ನೀಡಿ ಬೇರ್ಪಟ್ಟರು.

ಪೃಥ್ವಿ ಶಾ 20 ಎಸೆತಗಳಲ್ಲಿ 41 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಡೇವಿಡ್ ವಾರ್ನರ್ ನಂತರ ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದರು. 30 ಎಸೆತಗಳಲ್ಲಿ 60 ರನ್‌ಗಳಿಸಿ ವಾರ್ನರ್ ಅಜೇಯವಾಗುಳಿದರು. ಸರ್ಫರಾಜ್ ಖಾನ್ 12 ರನ್‌ಗಳಿಸಿ ಅಜೇಯವಾಗುಳಿದರು. ಅಂತಿಮವಾಗಿ ಕೇವಲ 10.3 ಓವರ್‌ಗಳಲ್ಲಿ ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಕೆಲವು ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಡೆಲ್ಲಿ ಪಾಳಯದಲ್ಲಿ ಆತಂಕ ಮಡುಗಟ್ಟಿತ್ತು. ಈ ಎಲ್ಲ ಮಾನಸಿಕ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ರಿಷಭ್ ಪಂತ್ ಪಡೆ ಯಶಸ್ವಿಯಾಗಿದೆ. ಈ ಪಂದ್ಯದ ಹೈಲೇಟ್ಸ್​ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಂಜಾಬ್ ಉತ್ತಮ ಆರಂಭ ಪಡೆಯುವ ಸಿದ್ಧತೆಯಲ್ಲಿರುವಾಗಲೇ ದಿಢೀರ್‌ ಕುಸಿತಕ್ಕೆ ಸಿಲುಕಿತು. ಲಲಿತ್‌ ಯಾದವ್‌, ಮುಸ್ತಫಿಜುರ್‌ ರೆಹಮಾನ್‌, ಅಕ್ಷರ್‌ ಪಟೇಲ್‌ ಪವರ್‌ ಪ್ಲೇ ವೇಳೆ ತಮ್ಮ ಪವರ್‌ ತೋರ್ಪಡಿಸಿದರು. ಪರಿಣಾಮ, 47 ರನ್ನಿಗೆ 3 ವಿಕೆಟ್‌ ಉರುಳಿತು. ಪಂಜಾಬ್ ಪರ ವಿಕೆಟ್ ಕೀಪರ್, ಬ್ಯಾಟರ್ ಜಿತೇಶ್ ಶರ್ಮಾ ಗರಿಷ್ಠ 32 ರನ್ (23 ಎಸೆತ, 5 ಬೌಂಡರಿ) ಗಳಿಸಿದರು. ನಾಯಕ ಮಯಂಕ್ ಅಗರವಾಲ್ (25) ತಂಡಕ್ಕೆ ಮರಳಿದರೂ ಪ್ರಭಾವಿ ಎನಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅನುಭವಿ ಶಿಖರ್ ಧವನ್ ಹಾಗೂ ಜಾನಿ ಬೆಸ್ಟೊ ತಲಾ ಒಂಬತ್ತು ರನ್ ಗಳಿಸಿ ಔಟ್ ಆದರು. ಉತ್ತಮ ಬ್ಯಾಟಿಂಗ್ ಲಯದಲ್ಲಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 4 ಓವರ್​ಗೆ 24 ರನ್ ನೀಡಿ 2 ವಿಕೆಟ್ ಕಿತ್ತ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಬಾಜಿಕೊಂಡರು.

IPL 2022: ಇಬ್ಬರು ಆಟಗಾರರಿಗೆ ಕೊರೋನಾ: ಮತ್ತೆ ಡೆಲ್ಲಿ​ ಪಂದ್ಯ ಸ್ಥಳಾಂತರ

Published On - 7:34 am, Thu, 21 April 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ