ಒನ್​ ಡೇ ಕಪ್ ಟೂರ್ನಿಯಿಂದ ಪೃಥ್ವಿ ಶಾ ಔಟ್

| Updated By: ಝಾಹಿರ್ ಯೂಸುಫ್

Updated on: Aug 16, 2023 | 6:41 PM

Prithvi Shaw: ಟೀಮ್ ಇಂಡಿಯಾ ಪರ 5 ಟೆಸ್ಟ್ ಪಂದ್ಯಗಳನ್ನಾಡಿರುವ ಪೃಥ್ವಿ ಶಾ 1 ಶತಕ ಹಾಗೂ 2 ಅರ್ಧಶತಕಗಳೊಂದಿಗೆ ಒಟ್ಟು 339 ರನ್​ ಕಲೆಹಾಕಿದ್ದಾರೆ. ಹಾಗೆಯೇ 6 ಏಕದಿನ ಪಂದ್ಯಗಳಲ್ಲಿ ಒಟ್ಟು 189 ರನ್ ಬಾರಿಸಿದ್ದಾರೆ.  2021 ರ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಯುವ ದಾಂಡಿಗ ಕಳಪೆ ಫಾರ್ಮ್ ಸಮಸ್ಯೆಯನ್ನು ಎದುರಿಸಿದ್ದರು.

ಒನ್​ ಡೇ ಕಪ್ ಟೂರ್ನಿಯಿಂದ ಪೃಥ್ವಿ ಶಾ ಔಟ್
Prithvi Shaw
Follow us on

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಒನ್​ ಡೇ ಕಪ್ ಟೂರ್ನಿಯಿಂದ ಪೃಥ್ವಿ ಶಾ (Prithvi Shaw) ಹೊರಬಿದ್ದಿದ್ದಾರೆ. ಡರ್ಹಾಮ್ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು, ಹೀಗಾಗಿ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇದಕ್ಕೂ ಮುನ್ನ ನಾರ್ಥಾಂಪ್ಟನ್‌ಶೈರ್ 4 ಪಂದ್ಯಗಳನ್ನಾಡಿದ್ದ ಪೃಥ್ವಿ 1 ದ್ವಿಶತಕ ಹಾಗೂ 1 ಶತಕದೊಂದಿಗೆ ಅಬ್ಬರಿಸಿದ್ದರು.

ಇಂಗ್ಲೆಂಡ್ ಪಿಚ್​ನಲ್ಲಿ ಅಬ್ಬರದ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದಿದ್ದ ಯುವ ಆಟಗಾರ ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೀಗ ಗಾಯದ ಕಾರಣ ಅರ್ಧದಲ್ಲೇ ಟೂರ್ನಿಯಿಂದ ಹೊರನಡೆಯಬೇಕಾಗಿ ಬಂದಿದೆ.

ಪೃಥ್ವಿ ಶಾ ಅಲ್ಪಾವಧಿಯಲ್ಲಿ ನಮ್ಮ ಮೇಲೆ ದೊಡ್ಡ ಪ್ರಭಾವ ಬೀರಿದ್ದಾರೆ. ಈ ಸ್ಪರ್ಧೆಯ ಉಳಿದ ಭಾಗದಲ್ಲಿ ಅವರು ನಮ್ಮೊಂದಿಗೆ ಇರದಿರುವುದು ದೊಡ್ಡ ಹಿನ್ನಡೆ ಎಂದು ನಾರ್ಥಾಂಪ್ಟನ್‌ಶೈರ್ ಮುಖ್ಯ ತರಬೇತುದಾರ ಜಾನ್ ಸ್ಯಾಡ್ಲರ್ ತಿಳಿಸಿದ್ದಾರೆ.

ಆಂಗ್ಲರ ನಾಡಲ್ಲಿ ಅಬ್ಬರಿಸಿದ ಯುವ ದಾಂಡಿಗ:

ನಾರ್ಥಾಂಪ್ಟನ್‌ಶೈರ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದ್ದರು. ಅದರಲ್ಲೂ ಸೋಮರ್​ಸೆಟ್ ವಿರುದ್ಧದ ಪಂದ್ಯದಲ್ಲಿ ಕೇವಲ 153 ಎಸೆತಗಳಲ್ಲಿ 28 ಬೌಂಡರಿ ಹಾಗೂ 11 ಸಿಕ್ಸರ್‌ಗಳ 244 ರನ್‌ ಬಾರಿಸಿದ್ದರು. ಇದು ನಾರ್ಥಾಂಪ್ಟನ್‌ಶೈರ್‌ ಪರ ಬ್ಯಾಟರ್​ರೊಬ್ಬರು ಕಲೆಹಾಕಿದ ಗರಿಷ್ಠ ಸ್ಕೋರ್ ದಾಖಲೆಯಾಗಿದೆ.

ಹಾಗೆಯೇ ಡರ್ಹಾಮ್ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ಕೇವಲ 76 ಬಾಲ್​ಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 15 ಫೋರ್​ಗಳೊಂದಿಗೆ ಅಜೇಯ 125 ರನ್​ ಚಚ್ಚಿದರು. ಈ ಮೂಲಕ ಲೀಸ್ಟ್​ ಎ ಕ್ರಿಕೆಟ್​ನಲ್ಲಿ 3 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದರು.
ಇನ್ನು ಈ ಬಾರಿಯ ಒನ್​ ಡೇ ಕಪ್​ನಲ್ಲಿ ಕೇವಲ 4 ಇನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿರುವ ಪೃಥ್ವಿ ಶಾ ಒಟ್ಟು 429 ರನ್ ಕಲೆಹಾಕಿದ್ದಾರೆ. ಈ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದೀಗ ಕೇವಲ 4 ಪಂದ್ಯಗಳೊಂದಿಗೆ ಈ ಬಾರಿಯ ಒನ್ ಡೇ ಕಪ್ ಟೂರ್ನಿಗೆ ಪೃಥ್ವಿ ಶಾ ವಿದಾಯ ಹೇಳಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ನಲ್ಲಿ ವೈದ್ಯಕೀಯ ತಜ್ಞರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಪೃಥ್ವಿ ಶಾ ಅಂಕಿ ಅಂಶಗಳು:

ಟೀಮ್ ಇಂಡಿಯಾ ಪರ 5 ಟೆಸ್ಟ್ ಪಂದ್ಯಗಳನ್ನಾಡಿರುವ ಪೃಥ್ವಿ ಶಾ 1 ಶತಕ ಹಾಗೂ 2 ಅರ್ಧಶತಕಗಳೊಂದಿಗೆ ಒಟ್ಟು 339 ರನ್​ ಕಲೆಹಾಕಿದ್ದಾರೆ. ಹಾಗೆಯೇ 6 ಏಕದಿನ ಪಂದ್ಯಗಳಲ್ಲಿ ಒಟ್ಟು 189 ರನ್ ಬಾರಿಸಿದ್ದಾರೆ.  2021 ರ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಯುವ ದಾಂಡಿಗ ಕಳಪೆ ಫಾರ್ಮ್ ಸಮಸ್ಯೆಯನ್ನು ಎದುರಿಸಿದ್ದರು.

ಇದನ್ನೂ ಓದಿ: ಭಾರತ ವಿಶ್ವಕಪ್ ತಂಡದಿಂದ 7 ಆಟಗಾರರು ಔಟ್..!

ಈ ಬಾರಿಯ ಒನ್ ಡೇ ಕಪ್ ಟೂರ್ನಿಯ ಮೂಲಕ ಮತ್ತೆ ಹಳೆಯ ಖದರ್​ ತೋರಿಸಲಾರಂಭಿಸಿದ್ದ ಪೃಥ್ವಿ ತಮ್ಮ ಲಯಕ್ಕೆ ಮರಳಿದ್ದರು. ದುರಾದೃಷ್ಟವಶಾತ್, ಭರ್ಜರಿ ಫಾರ್ಮ್​ಗೆ ಮರಳುತ್ತಿದ್ದಂತೆ ಗಾಯಗೊಂಡು ಇದೀಗ ಮತ್ತೆ ಮೈದಾನದಿಂದ ಹೊರಗುಳಿಯಬೇಕಾಗಿ ಬಂದಿದೆ.