
ಆಸ್ಟ್ರೇಲಿಯಾ ಎ ವಿರುದ್ಧದ ನಡೆದಿದ್ದ 2 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದ್ದ ಭಾರತ ಎ ತಂಡ (India A vs Australia A) ಇದೀಗ ಅನಧಿಕೃತ ಏಕದಿನ ಸರಣಿಯನ್ನು ಆಡುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಎ ಪರ ಆರಂಭಿಕರಾಗಿ ಕಣಕ್ಕಿಳಿದಿರುವ ಪ್ರಿಯಾಂಶ್ ಆರ್ಯ (Priyansh Arya) ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಶತಕ ಬಾರಿಸಿದ್ದಾರೆ. ಪ್ರಿಯಾಂಶ್ ಆರ್ಯ ಕಾನ್ಪುರದಲ್ಲಿ ನಡೆಯುತ್ತಿರುವ ಅನಧಿಕೃತ ಏಕದಿನ ಪಂದ್ಯದಲ್ಲಿ ಕೇವಲ 82 ಎಸೆತಗಳಲ್ಲಿ ಶತಕ ಸಿಡಿಸಿದರು. ಪ್ರಿಯಾಂಶ್ ಆರ್ಯ ಅವರನ್ನು ಮೊದಲ ಬಾರಿಗೆ ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿದ್ದು ಮೊದಲ ಪಂದ್ಯದಲ್ಲೇ ಶತಕ ಗಳಿಸುವ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಆದಾಗ್ಯೂ, ಪ್ರಿಯಾಂಶ್ ಆರ್ಯ ಶತಕ ಗಳಿಸಿದ ಸ್ವಲ್ಪ ಸಮಯದ ನಂತರವೇ ಔಟಾದರು. ಪ್ರಿಯಾಂಶ್ 84 ಎಸೆತಗಳಲ್ಲಿ 5 ಸಿಕ್ಸರ್‌ಗಳು ಮತ್ತು 11 ಬೌಂಡರಿಗಳ ಸಹಿತ 101 ರನ್ ಗಳಿಸಿ ಔಟಾದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಪ್ರಿಯಾಂಶ್ ಆರ್ಯ ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪ್ರಭ್ಸಿಮ್ರಾನ್ ಸಿಂಗ್ ಮೊದಲ ವಿಕೆಟ್‌ಗೆ 135 ರನ್‌ಗಳ ಜೊತೆಯಾಟ ನಡೆಸಿದರು. ಪ್ರಭ್ಸಿಮ್ರಾನ್ 53 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 56 ರನ್ ಗಳಿಸಿದರು. ಇತ್ತ ಪ್ರಿಯಾಂಶ್ 60 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರೆ, ಆ ಬಳಿಕ ಮುಂದಿನ 22 ಎಸೆತಗಳಲ್ಲಿ 51 ರನ್ ಚಚ್ಚಿದರು.
ED ಇಕ್ಕಳದಲ್ಲಿ ಯುವರಾಜ್, ಧವನ್, ಉತ್ತಪ್ಪ, ರೈನಾ ವಿಲವಿಲ; ಕೋಟ್ಯಾಂತರ ಮೌಲ್ಯದ ಆಸ್ತಿ ಮುಟ್ಟುಗೋಲು
ಪ್ರಿಯಾಂಶ್ ಆರ್ಯ ಇತ್ತೀಚೆಗೆ ಯುವರಾಜ್ ಸಿಂಗ್ ಅವರೊಂದಿಗೆ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ. ಆಸ್ಟ್ರೇಲಿಯಾ ಎ ಸರಣಿಗೂ ಮೊದಲು ಪ್ರಿಯಾಂಶ್ ಆರ್ಯ, ಯುವರಾಜ್ ಸಿಂಗ್ ಅವರೊಂದಿಗೆ ಸಮಯ ಕಳೆದಿದ್ದರು. ಯುವರಾಜ್ ಸಿಂಗ್ ಅವರ ಶಿಷ್ಯ ಅಭಿಷೇಕ್ ಶರ್ಮಾ, ಇತ್ತೀಚೆಗೆ ಏಷ್ಯಾಕಪ್‌ನಲ್ಲಿ ಅಬ್ಬರಿಸಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಭಿಷೇಕ್ ರೀತಿಯೇ ಪ್ರಿಯಾಂಶ್ ಆರ್ಯ ಯಾವಾಗ ಟೀಂ ಇಂಡಿಯಾವನ್ನು ಸೇರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Wed, 1 October 25