IND A vs AUS A: ಪ್ರಿಯಾಂಶ್, ಶ್ರೇಯಸ್ ಶತಕ; ಆಸೀಸ್ ವಿರುದ್ಧ 413 ರನ್ ಚಚ್ಚಿದ ಭಾರತ
Shreyas Iyer Century: ಕಾನ್ಪುರದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧದ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡದ ನಾಯಕ ಶ್ರೇಯಸ್ ಅಯ್ಯರ್ ಭರ್ಜರಿ ಶತಕ ಸಿಡಿಸಿದ್ದಾರೆ. ಕೇವಲ 75 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಇದೇ ಪಂದ್ಯದಲ್ಲಿ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಕೂಡ ಶತಕ ಬಾರಿಸಿದ್ದು, ಈ ಇಬ್ಬರ ಶತಕಗಳ ನೆರವಿನಿಂದ ಭಾರತ ಎ ತಂಡ 413 ರನ್ ಗಳಿಸಿ, ಆಸ್ಟ್ರೇಲಿಯಾ ಎ ತಂಡಕ್ಕೆ ಬೃಹತ್ ಗುರಿ ನೀಡಿದೆ.

ಕಾನ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ಎ ವಿರುದ್ಧದ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ (India A vs Australia A) ತಂಡದ ನಾಯಕತ್ವವಹಿಸಿಕೊಂಡಿರುವ ಶ್ರೇಯಸ್ ಅಯ್ಯರ್ (Shreyas Iyer) ಭರ್ಜರಿ ಶತಕ ಸಿಡಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್ನಲ್ಲಿ ಕೇವಲ 75 ಎಸೆತಗಳನ್ನು ತೆಗೆದುಕೊಂಡ ಶ್ರೇಯಸ್ ಅಯ್ಯರ್ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಕೂಡ ಬಾರಿಸಿದರು. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಶ್ರೇಯಸ್ ಅಯ್ಯರ್ ಶತಕದ ಇನ್ನಿಂಗ್ಸ್ ಆಡಿದರು. ಇನ್ನು ಇದೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ಗೂ ಮುನ್ನ ಆರಂಭಿಕ ಪ್ರಿಯಾಂಶ್ ಆರ್ಯ ಕೂಡ ಶತಕ ಸಿಡಿಸಿದ್ದರು. ಇವರಿಬ್ಬರ ಶತಕದ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ಬರೋಬ್ಬರಿ 413 ರನ್ ಕಲೆಹಾಕಿದೆ.
ಶ್ರೇಯಸ್ ಅಯ್ಯರ್ ಶತಕ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ಪರ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಪ್ರಿಯಾಂಶ್ ಆರ್ಯ 84 ಎಸೆತಗಳಲ್ಲಿ 101 ರನ್ ಗಳಿಸಿದರೆ, ಪ್ರಭ್ಸಿಮ್ರಾನ್ 56 ರನ್ ಗಳಿಸಿದರು. ಆ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ನಾಯಕ ಶ್ರೇಯಸ್ ಅಯ್ಯರ್ ಕಾಂಗರೂ ಬೌಲರ್‌ಗಳನ್ನು ಹೈರಾಣಾಗಿಸಿದರು. ಅಂತಿಮವಾಗಿ ಶ್ರೇಯಸ್ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಹಿತ 84 ಎಸೆತಗಳಲ್ಲಿ 110 ರನ್‌ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದರು.
WELL PLAYED, CAPTAIN SHREYAS IYER 😍
– 110 runs from just 83 balls including 12 fours & 4 sixes at a Strike Rate of 132.53 against Australia A.
He continues to rule the 50 over format. pic.twitter.com/mlPMJoNHCS
— Johns. (@CricCrazyJohns) October 1, 2025
413 ರನ್ ಕಲೆಹಾಕಿದ ಭಾರತ ಎ
ಆಸ್ಟ್ರೇಲಿಯಾ ಎ ವಿರುದ್ಧ ಭಾರತೀಯ ಬ್ಯಾಟ್ಸ್‌ಮನ್‌ಗಳು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಗ್ರ ಐದು ಬ್ಯಾಟ್ಸ್‌ಮನ್‌ಗಳು ಐವತ್ತಕ್ಕೂ ಹೆಚ್ಚು ರನ್ ಗಳಿಸಿದರು. ಪ್ರಿಯಾಂಶ್ ಆರ್ಯ ಕೇವಲ 84 ಎಸೆತಗಳಲ್ಲಿ 101 ರನ್ ಗಳಿಸಿದರೆ, ಪ್ರಭ್ಸಿಮ್ರನ್ 53 ಎಸೆತಗಳಲ್ಲಿ 56 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 83 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 12 ಬೌಂಡರಿಗಳೊಂದಿಗೆ 110 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರೆ, ರಿಯಾನ್ ಪರಾಗ್ 42 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಿತ 67 ರನ್ ಗಳಿಸಿದರು. ಆಯುಷ್ ಬಡೋನಿ ಕೂಡ 27 ಎಸೆತಗಳಲ್ಲಿ 50 ರನ್ ಬಾರಿಸಿದರು.
