PSL 2023: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಅತ್ಯುತ್ತಮ ರಿಟರ್ನ್ ಕ್ಯಾಚ್ ಹಿಡಿಯುವ ಮೂಲಕ ಕೀರನ್ ಪೊಲಾರ್ಡ್ (Kieron Pollard) ಎಲ್ಲರ ಗಮನ ಸೆಳೆದಿದ್ದಾರೆ. ಮುಲ್ತಾನ್ ಸುಲ್ತಾನ್ಸ್ (Multan Sultans) ಹಾಗೂ ಲಾಹೋರ್ ಕಲಂದರ್ಸ್ (Lahore Qalandars) ನಡುವಣ ಈ ಪಂದ್ಯದಲ್ಲಿ ಟಾಸ್ ಗೆದ್ದ ಶಾಹೀನ್ ಅಫ್ರಿದಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಲಾಹೋರ್ ಕಲಂದರ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಅದರಲ್ಲೂ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಬ್ದುಲ್ಲಾ ಶೆಫೀಕ್ 35 ಎಸೆತಗಳಲ್ಲಿ 48 ರನ್ ಬಾರಿಸಿದ್ದರು. ಇನ್ನೇನು ಅರ್ಧಶತಕ ಬಾರಿಸಲಿದ್ದಾರೆ ಎನ್ನುವಷ್ಟರಲ್ಲಿ ಕೀರನ್ ಪೊಲಾರ್ಡ್ ಹಿಡಿದ ಅತ್ಯದ್ಭುತ ಕ್ಯಾಚ್ಗೆ ಬಲಿಯಾಗಬೇಕಾಯಿತು.
13ನೇ ಓವರ್ ಬೌಲಿಂಗ್ ಮಾಡಿದ ಪೊಲಾರ್ಡ್ ಅವರ 4ನೇ ಎಸೆತವನ್ನು ಶೆಫೀಕ್ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಲು ಯತ್ನಿಸಿದ್ದರು. ಆದರೆ ನೇರವಾಗಿ ಬಂದ ಚೆಂಡನ್ನು ಕ್ಷಣಾರ್ಧದಲ್ಲೇ ಕೈಯಲ್ಲಿ ಬಂಧಿಸುವ ಮೂಲಕ ಪೊಲಾರ್ಡ್ ಕ್ಯಾಚ್ ಹಿಡಿದರು. ಈ ಅದ್ಭುತ ಕ್ಯಾಚ್ ಬೆನ್ನಲ್ಲೇ ಶೆಫೀಕ್ಗೆ ಪೆವಿಲಿಯನ್ ಕಡೆಗೆ ಹಿಂತಿರುಗುವಂತೆ ಸನ್ನೆ ಮಾಡಿ ಕೆಣಕುವ ಪ್ರಯತ್ನ ಮಾಡಿದರು. ಇದೀಗ ಕೀರನ್ ಪೊಲಾರ್ಡ್ ಅವರ ಈ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Kieron Pollard giving Abdullah Shafique directions ↗️
(via @thePSLt20) | #LQvMSpic.twitter.com/9MbfIqkG6e
— ESPNcricinfo (@ESPNcricinfo) March 4, 2023
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಾಹೋರ್ ಕಲಂದರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು.
181 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಮುಲ್ತಾನ್ ಸುಲ್ತಾನ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕೀರನ್ ಪೊಲಾರ್ಡ್ 28 ಎಸೆತಗಳಲ್ಲಿ 39 ರನ್ ಬಾರಿಸಿ ಔಟಾದರು. ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ಗಳಿಸಿ ಮುಲ್ತಾನ್ ಸುಲ್ತಾನ್ಸ್ ತಂಡವು 21 ರನ್ಗಳಿಂದ ಸೋಲೊಪ್ಪಿಕೊಂಡಿತು.
ಲಾಹೋರ್ ಕಲಂದರ್ಸ್ ಪ್ಲೇಯಿಂಗ್ 11: ಫಖರ್ ಜಮಾನ್ , ಮಿರ್ಜಾ ತಾಹಿರ್ ಬೇಗ್ , ಅಬ್ದುಲ್ಲಾ ಶೆಫೀಕ್ , ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್) , ಹುಸೇನ್ ತಲಾತ್ , ಸಿಕಂದರ್ ರಾಝ , ಡೇವಿಡ್ ವೀಝ , ರಶೀದ್ ಖಾನ್ , ಶಾಹೀನ್ ಅಫ್ರಿದಿ (ನಾಯಕ) , ಹ್ಯಾರಿಸ್ ರೌಫ್ , ಜಮಾನ್ ಖಾನ್.
ಇದನ್ನೂ ಓದಿ: Ravindra Jadeja: 500 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ರವೀಂದ್ರ ಜಡೇಜಾ
ಮುಲ್ತಾನ್ ಸುಲ್ತಾನ್ಸ್ ಪ್ಲೇಯಿಂಗ್ 11: ಮೊಹಮ್ಮದ್ ರಿಜ್ವಾನ್ (ನಾಯಕ) , ಶಾನ್ ಮಸೂದ್ , ರಿಲೀ ರೊಸ್ಸೊ , ಡೇವಿಡ್ ಮಿಲ್ಲರ್ , ಕೀರನ್ ಪೊಲಾರ್ಡ್ , ಖುಷ್ದಿಲ್ ಶಾ , ಅನ್ವರ್ ಅಲಿ , ಉಸಾಮಾ ಮಿರ್ , ಅಬ್ಬಾಸ್ ಅಫ್ರಿದಿ , ಸಮೀನ್ ಗುಲ್ , ಇಹ್ಸಾನುಲ್ಲಾ.