PSL 2023: ಕ್ವೆಟ್ಟಾ ಸ್ಟೇಡಿಯಂ​​ ಬಳಿ ಬಾಂಬ್ ಬ್ಲಾಸ್ಟ್​: ಪಿಎಸ್​ಎಲ್​ ಪಂದ್ಯ ಸ್ಥಗಿತ

| Updated By: ಝಾಹಿರ್ ಯೂಸುಫ್

Updated on: Feb 05, 2023 | 6:53 PM

PSL Exhibition Match: ಪಾಕಿಸ್ತಾನ ಸೂಪರ್ ಲೀಗ್‌ನ 8ನೇ ಸೀಸನ್ ಫೆಬ್ರವರಿ 13 ರಿಂದ ಪ್ರಾರಂಭವಾಗಲಿದೆ. ಹಾಗೆಯೇ ಫೈನಲ್ ಪಂದ್ಯ ಮಾರ್ಚ್ 19 ರಂದು ನಡೆಯಲಿದೆ.

PSL 2023: ಕ್ವೆಟ್ಟಾ ಸ್ಟೇಡಿಯಂ​​ ಬಳಿ ಬಾಂಬ್ ಬ್ಲಾಸ್ಟ್​: ಪಿಎಸ್​ಎಲ್​ ಪಂದ್ಯ ಸ್ಥಗಿತ
PSL Exhibition Match
Follow us on

PSL Exhibition Match: ಪಾಕ್​ನ ಕ್ವೆಟ್ಟಾದ ಬುಗ್ಟಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರದರ್ಶನ ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ. ಕ್ವೆಟ್ಟಾ ಕ್ರೀಡಾಂಗಣದ ಬಳಿ ಬಾಂಬ್ ಸ್ಪೋಟಿಸಲಾಗಿದ್ದು, ತಕ್ಷಣವೇ ಮುನ್ನೆಚ್ಚರಿಕೆ ಕ್ರಮವಾಗಿ ಪೇಶಾವರ್ ಝಲ್ಮಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವಣ ಪಂದ್ಯವನ್ನು ನಿಲ್ಲಿಸಲಾಯಿತು. ಇತ್ತ ಮೈದಾನದ ಪಕ್ಕದಲ್ಲೇ ಬಾಂಬ್ ಸ್ಪೋಟಗೊಂಡ ತಕ್ಷಣವೇ ಉಭಯ ತಂಡಗಳ ಆಟಗಾರರನ್ನು ಸುರಕ್ಷಿತವಾಗಿ ಸ್ಟೇಡಿಯಂನಿಂದ ಹೊರಕ್ಕೆ ಕರೆದೊಯ್ಯಲಾಗಿದೆ.

ಕ್ವೆಟ್ಟಾದ ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಅಲ್ಲದೆ ಈ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಭದ್ರತಾ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದ ಝಲ್ಮಿ ತಂಡದ ನಾಯಕ ಬಾಬರ್ ಆಜಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಇಫ್ತಿಕಾರ್ ಅಹ್ಮದ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಇದನ್ನೂ ಓದಿ
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ಸ್ಪೋಟಕ ಬ್ಯಾಟಿಂಗ್ ಮೂಲಕ ಪೇಶಾವರ್​ ಝಲ್ಮಿ ಬೌಲರ್​​ಗಳ ಬೆಂಡೆತ್ತಿದ ಇಫ್ತಿಕಾರ್ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿಯ ಬ್ಯಾಟಿಂಗ್ ವರಸೆ ಬದಲಿಸಿದ ಹಿರಿಯ ಆಟಗಾರ ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದರು.

ಇದನ್ನೂ ಓದಿ: ICC Rankings 2023: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ಮೂವರು ನಂಬರ್ 1

ಪರಿಣಾಮ 19 ಓವರ್​ಗಳಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಮೊತ್ತ 148 ಕ್ಕೆ ಬಂದು ನಿಂತಿತು. ಇನ್ನು ವಹಾಬ್ ರಿಯಾಝ್ ಎಸೆದ 20ನೇ ಓವರ್​ನಲ್ಲಿ ಇಫ್ತಿಕಾರ್ ಅಹ್ಮದ್ ಬ್ಯಾಕ್ ಟು ಬ್ಯಾಕ್ 6 ಸಿಕ್ಸ್​ಗಳನ್ನು ಸಿಡಿಸಿದರು. ಈ ಮೂಲಕ 36 ರನ್​ ಕಲೆಹಾಕಿ ತಂಡದ ಮೊತ್ತವನ್ನು 184 ಕ್ಕೆ ತಂದು ನಿಲ್ಲಿಸಿದರು.

ಪಾಕಿಸ್ತಾನ್ ಸೂಪರ್ ಲೀಗ್:
ಪಾಕಿಸ್ತಾನ ಸೂಪರ್ ಲೀಗ್‌ನ 8ನೇ ಸೀಸನ್ ಫೆಬ್ರವರಿ 13 ರಿಂದ ಪ್ರಾರಂಭವಾಗಲಿದೆ. ಹಾಗೆಯೇ ಫೈನಲ್ ಪಂದ್ಯ ಮಾರ್ಚ್ 19 ರಂದು ನಡೆಯಲಿದೆ. ಈ ಬಾರಿ ಟೂರ್ನಿಯ ಎಲ್ಲಾ ಪಂದ್ಯಗಳು ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿಯಲ್ಲಿ ಜರುಗಲಿದೆ.

 

Published On - 6:00 pm, Sun, 5 February 23