ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ನ (T20 World Cup 2021) 18ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ (South Africa vs West Indies) ತಂಡಗಳು ಮುಖಾಮುಖಿಯಾಗಿತ್ತು. ಆದರೆ ಈ ಪಂದ್ಯದಲ್ಲಿ ಸೌತ್ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿಕಾಕ್ (Quinton de Kock) ಕಣಕ್ಕಿಳಿದಿರಲಿಲ್ಲ. ಇದಕ್ಕೇನು ಕಾರಣ ಎಂಬುದು ಇದೀಗ ಬಹಿರಂಗವಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ (BLM) ಚಳುವಳಿಗೆ ಬೆಂಬಲ ವ್ಯಕ್ತಪಡಿಸಿ ಎಲ್ಲಾ ತಂಡಗಳು ಮಂಡಿಯೂರಿ ಬೆಂಬಲ ವ್ಯಕ್ತಪಡಿಸುತ್ತಿದೆ. ಆದರೆ ಹೀಗೆ ಮೊಣಕಾಲೂರಲು ಕ್ವಿಂಟನ್ ಡಿಕಾಕ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ ಪಂದ್ಯದಿಂದಲೇ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ಡಿಕಾಕ್ ಆಡಿಲಿಲ್ಲ.
ಕ್ರಿಕೆಟ್ ಸೌತ್ ಆಫ್ರಿಕಾ (CSA) ಎಲ್ಲಾ ಪಂದ್ಯಗಳ ಮೊದಲು ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್‌ಗೆ ಬೆಂಬಲವಾಗಿ ಆಟಗಾರರಿಗೆ ಮಂಡಿಯೂರಲು ನಿರ್ದೇಶಿಸಿದೆ. ಈ ಮೂಲಕ ವರ್ಣಬೇಧದ ವಿರುದ್ದದ ಚಳುವಳಿಗೆ ಬೆಂಬಲ ವ್ಯಕ್ತಪಡಿಸಲು ಸೂಚಿಸಿದೆ. ಇದಾಗ್ಯೂ ಕ್ವಿಂಟನ್ ಡಿಕಾಕ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಬೆಂಬಲಿಸಲು ಹಿಂದೇಟು ಹಾಕಿದ್ದಾರೆ. ಅಷ್ಟೇ ಅಲ್ಲದೆ ಬ್ಲ್ಯಾಕ್ ಲೈವ್ ಮ್ಯಾಟರ್ಸ್ ಬೆಂಬಲ ವ್ಯಕ್ತಪಡಿಸಲ್ಲ ಎಂಬ ಕಾರಣದಿಂದ ತಂಡದಿಂದಲೇ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ.
ಕಳೆದ ವರ್ಷ ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಎನ್ನುವ ವ್ಯಕ್ತಿಯನ್ನು ಅಲ್ಲಿನ ಬಿಳಿ ವರ್ಣದ ಪೊಲೀಸ್ ಒಬ್ಬ ನಡುರಸ್ತೆಯಲ್ಲಿ ಮೊಣಕಾಲಿನಿಂದ ಕುತ್ತಿಗೆ ಅದುಮಿ ಉಸಿರುಗಟ್ಟಿಸಿ ಸಾಯಿಸಿದ್ದರು. ಈ ಘಟನೆಯ ಬಳಿಕ ಕಪ್ಪು ವರ್ಣಿಯರ ಮೇಲೆ ಬಿಳಿ ವರ್ಣದವರ ದೌರ್ಜನ್ಯ ಖಂಡಿಸಿ ವಿಶ್ವದಾದ್ಯಂತ BLM (Black Lives Matter) ಪ್ರತಿಭಟನೆಗಳು ನಡೆದಿದ್ದವು. ಇದಕ್ಕೆ ವಿಶ್ವದಾದ್ಯಂತ ಬೆಂಬಲ ವ್ಯಕ್ತವಾಗಿತ್ತು.
ವರ್ಣಬೇಧದ ವಿರುದ್ದದ ಈ ಚಳುವಳಿಯನ್ನು ಬೆಂಬಲಿಸುವ ಸಲುವಾಗಿ ಈ ಬಾರಿ ಟಿ20 ವಿಶ್ವಕಪ್ನಲ್ಲಿ ಬಹುತೇಕ ತಂಡಗಳು ಪಂದ್ಯಕ್ಕೂ ಮುನ್ನ ಮುಂಡಿಯೂರಿದ್ದಾರೆ. ಪಾಕ್ ವಿರುದ್ದ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಕ್ರಿಕೆಟಿಗರು ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್‌ಗೆ ಮೊಣಕಾಲೂರಿ ಬೆಂಬಲ ಸೂಚಿಸಿದ್ದರು.
ಆದರೆ ವರ್ಣಬೇಧ ತಾರತಮ್ಯಕ್ಕೆ ಹೆಸರುವಾಸಿಯಾಗಿರುವ ದಕ್ಷಿಣ ಆಫ್ರಿಕಾದ ಆಟಗಾರನೇ ಈಗ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್‌ಗೆ ಬೆಂಬಲ ಸೂಚಿಸದಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ, ಟೀಮ್ ಮ್ಯಾನೇಜ್ಮೆಂಟ್ನಿಂದ ವರದಿ ಬಂದ ಬಳಿಕ ಕ್ವಿಂಟನ್ ಡಿಕಾಕ್ ವಿರುದ್ದ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಡಿಕಾಕ್ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ: T20 World Cup 2021: ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್: ವಿಶ್ವಕಪ್ನಿಂದ ಪ್ರಮುಖ ಆಟಗಾರ ಹೊರಕ್ಕೆ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
ಇದನ್ನೂ ಓದಿ: T20 World Cup 2021: 90 ಕೆ.ಜಿ ವಿಕೆಟ್ ಕೀಪರ್: ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಶಹಝಾದ್
(Quinton de Kock opts out of WC match amid CSA knee directive)