IND vs WI: ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿಗಿಂತಲೂ ಅಶ್ವಿನ್ ಬೆಸ್ಟ್..!

| Updated By: ಝಾಹಿರ್ ಯೂಸುಫ್

Updated on: Jul 11, 2023 | 3:43 PM

India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅಶ್ವಿನ್ 3 ವಿಕೆಟ್ ಕಬಳಿಸಿದರೆ ವಿಶೇಷ ದಾಖಲೆಯೊಂದು ನಿರ್ಮಾಣವಾಗಲಿದೆ.

IND vs WI: ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿಗಿಂತಲೂ ಅಶ್ವಿನ್ ಬೆಸ್ಟ್..!
Follow us on

India vs West Indies: ಭಾರತ-ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿಯು ನಾಳೆಯಿಂದ (ಜುಲೈ 12) ಶುರುವಾಗಲಿದೆ. ಡೊಮಿನಿಕಾದಲ್ಲಿ ನಡೆದ ಈ ಪಂದ್ಯದ ಟೀಮ್ ಇಂಡಿಯಾ ಪರ ಯಾರೆಲ್ಲಾ ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ. ಇದಾಗ್ಯೂ ಪ್ಲೇಯಿಂಗ್ ಇಲೆವೆನ್​ನಲ್ಲಿ ಅನುಭವಿ ಸ್ಪಿನ್ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್​ಗೆ ಸ್ಥಾನ ಸಿಗುವುದು ಖಚಿತ. ಏಕೆಂದರೆ ವಿಂಡೀಸ್ ವಿರುದ್ಧ ಅಶ್ವಿನ್,​ ವಿರಾಟ್ ಕೊಹ್ಲಿಗಿಂತಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

ರವಿಚಂದ್ರನ್ ಅಶ್ವಿನ್ ವೆಸ್ಟ್ ಇಂಡೀಸ್ ವಿರುದ್ಧ ಇದುವರೆಗೆ 11 ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 50.18 ರ ಸರಾಸರಿಯಲ್ಲಿ ಒಟ್ಟು 552 ರನ್​​ ಕಲೆಹಾಕಿದ್ದಾರೆ. ವಿಶೇಷ ಎಂದರೆ ಈ ಭರ್ಜರಿ ಬ್ಯಾಟಿಂಗ್​ ನಡುವೆ ಅಶ್ವಿನ್ ಬ್ಯಾಟ್​ನಿಂದ 4 ಶತಕಗಳು ಕೂಡ ಮೂಡಿ ಬಂದಿವೆ.

ಇದೇ ವೇಳೆ ಕೆರಿಬಿಯನ್ ದೈತ್ಯರ ವಿರುದ್ಧ 14 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಕಲೆಹಾಕಿರುವುದು 822 ರನ್​ಗಳು ಮಾತ್ರ. ಅಂದರೆ ಪ್ರತಿ ಇನಿಂಗ್ಸ್​ನಲ್ಲಿ 43.26 ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಇನ್ನು ಕೊಹ್ಲಿ ವಿಂಡೀಸ್ ವಿರುದ್ಧ ಕೇವಲ 2 ಟೆಸ್ಟ್​ಗಳನ್ನು ಮಾತ್ರ ಬಾರಿಸಿದ್ದಾರೆ.

ಅಂದರೆ ಇಲ್ಲಿ ರನ್ ಸರಾಸರಿಯಲ್ಲೂ, ಶತಕದ ವಿಷಯದಲ್ಲೂ ವಿರಾಟ್ ಕೊಹ್ಲಿಗಿಂತ ಅಶ್ವಿನ್ ಮುಂದಿದ್ದಾರೆ. ಹೀಗಾಗಿಯೇ ರವಿಚಂದ್ರನ್ ಅಶ್ವಿನ್ ಆಲ್​ರೌಂಡರ್ ಸ್ಥಾನದಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವುದು ಖಚಿತ.

ಬೌಲಿಂಗ್​ನಲ್ಲೂ ಮಿಂಚಿಂಗ್:

ವೆಸ್ಟ್ ಇಂಡೀಸ್​ಗೆ ಅಶ್ವಿನ್ ಅವರ ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್​ನದ್ದೂ ಚಿಂತೆ ಕಾಡುತ್ತಿದೆ. ಏಕೆಂದರೆ ವಿಂಡೀಸ್ ವಿರುದ್ಧ 11 ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ 60 ವಿಕೆಟ್​ಗಳನ್ನು ಪಡೆದಿದ್ದಾರೆ. ಹೀಗಾಗಿಯೇ ವೆಸ್ಟ್ ಇಂಡೀಸ್ ವಿರುದ್ಧ ಅಶ್ವಿನ್ ಪರಿಪೂರ್ಣ ಆಲ್​ರೌಂಡರ್​ ಆಗಿ ಮಿಂಚುವುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: IND vs WI: ಟೀಮ್ ಇಂಡಿಯಾದ ಆರಂಭಿಕ ಜೋಡಿ ಯಾರು?

ದಾಖಲೆಯ ಸನಿಹದಲ್ಲಿ ಅಶ್ವಿನ್:

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅಶ್ವಿನ್ 3 ವಿಕೆಟ್ ಕಬಳಿಸಿದರೆ ವಿಶೇಷ ದಾಖಲೆಯೊಂದು ನಿರ್ಮಾಣವಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಅಶ್ವಿನ್​ಗೆ ಕೇವಲ ವಿಕೆಟ್​ಗಳ ಅಗತ್ಯವಿದೆ. ಈ ಮೂಲಕ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ನಂತರ ಈ ಸಾಧನೆ ಮಾಡಿದ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲೇ ಅಶ್ವಿನ್ ಕಡೆಯಿಂದ ವಿಶೇಷ ದಾಖಲೆಯನ್ನು ಕೂಡ ನಿರೀಕ್ಷಿಸಬಹುದು.