T20 Cricket: 22 ಸಿಕ್ಸ್, 17 ಫೋರ್: ಟಿ20 ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ವಿಂಡೀಸ್ ದಾಂಡಿಗ

Rahkeem Cornwall: ಟಿ20 ಕ್ರಿಕೆಟ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ರಹಕೀಮ್ ಕಾರ್ನ್‌ವಾಲ್ ಈ ಬಾರಿಯ ಟಿ20 ವಿಶ್ವಕಪ್​ಗಾಗಿ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

T20 Cricket: 22 ಸಿಕ್ಸ್, 17 ಫೋರ್: ಟಿ20 ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ವಿಂಡೀಸ್ ದಾಂಡಿಗ
Rahkeem Cornwall
Updated By: ಝಾಹಿರ್ ಯೂಸುಫ್

Updated on: Oct 06, 2022 | 12:32 PM

ಟಿ20 ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್​ನ ದೈತ್ಯ ಬ್ಯಾಟ್ಸ್​ಮನ್ ರಹಕೀಮ್ ಕಾರ್ನ್‌ವಾಲ್ (Rahkeem Cornwall) ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ಅಟ್ಲಾಂಟಾ ಓಪನ್ ಟೂರ್ನಿಯಲ್ಲಿ ಅಟ್ಲಾಂಟಾ ಫೈರ್ ಹಾಗೂ ಸ್ಕ್ವೇರ್ ಡ್ರೈವ್ ಪ್ಯಾಂಥರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಟ್ಲಾಂಟಾ ಫೈರ್ ಪರ ಆರಂಭಿಕನಾಗಿ ಕಣಕ್ಕಿಳಿದ ರಹಕೀಮ್ ಕಾರ್ನ್‌ವಾಲ್ ಸ್ಪೋಟಕ ಇನಿಂಗ್ಸ್ ಆಡಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಾರ್ನ್​ವಾಲ್ ಪ್ಯಾಂಥರ್ಸ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ವಿಂಡೀಸ್​ ದಾಂಡಿಗನ ಬ್ಯಾಟ್​ನಿಂದ ಬರೋಬ್ಬರಿ 22 ಸಿಕ್ಸ್ ಹಾಗೂ 17 ಫೋರ್​ಗಳು ಮೂಡಿಬಂತು. ಈ ಮೂಲಕ ಕೇವಲ 77 ಎಸೆತಗಳಲ್ಲಿ ಅಜೇಯ 205 ರನ್​ ಚಚ್ಚಿದ್ದರು. ರಹಕೀಮ್ ಕಾರ್ನ್‌ವಾಲ್ ಅವರ ಈ ದ್ವಿಶತಕದ ನೆರವಿನಿಂದ ಅಟ್ಲಾಂಟಾ ಫೈರ್​ ತಂಡವು ನಿಗದಿತ 20 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 326 ರನ್​ ಕಲೆಹಾಕಿತು.

ಇದನ್ನೂ ಓದಿ
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?

327 ರನ್​ಗಳ ಗುರಿಯನ್ನು ಬೆನ್ನತ್ತಿದ ಸ್ಕ್ವೇರ್ ಡ್ರೈವ್ ಪ್ಯಾಂಥರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಅಟ್ಲಾಂಟಾ ಫೈರ್ ತಂಡವು 172 ರನ್​ಗಳ ಬೃಹತ್ ಅಂತರದಿಂದ ಜಯ ಸಾಧಿಸಿತು.

ಟಿ20 ಕ್ರಿಕೆಟ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ರಹಕೀಮ್ ಕಾರ್ನ್‌ವಾಲ್ ಈ ಬಾರಿಯ ಟಿ20 ವಿಶ್ವಕಪ್​ಗಾಗಿ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ದೈತ್ಯ ದೇಹವನ್ನು ಹೊಂದಿರುವ ರಹಕೀಮ್ ಫೀಲ್ಡಿಂಗ್​ನಲ್ಲಿ ಹಿಂದೆ ಉಳಿದಿದ್ದಾರೆ. ಇದಾಗ್ಯೂ ಕೆರಿಬಿಯನ್ ಪ್ರೀಮಿಯರ್ ಲೀಗ್ ಮೂಲಕ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಕಾರ್ನ್​​ವಾಲ್ ಇಡೀ ವಿಶ್ವದ ಗಮನ ಸೆಳೆಯುತ್ತಿದ್ದಾರೆ.

 

Published On - 12:32 pm, Thu, 6 October 22