IND vs SA 1st ODI: ಭಾರತ-ಸೌತ್ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯ ಮತ್ತಷ್ಟು ವಿಳಂಬ..!
India vs South Africa 1st Odi: ಈ ಪಂದ್ಯದಲ್ಲಿ ಬದಲಿ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾ ಟಿ20 ವಿಶ್ವಕಪ್ಗಾಗಿ ತೆರಳಿದ್ದು, ಹೀಗಾಗಿ ಬಿಸಿಸಿಐ ಶಿಖರ್ ಧವನ್ ನಾಯಕತ್ವದ ಬದಲಿ ಭಾರತ ತಂಡವನ್ನು ಈ ಸರಣಿಗಾಗಿ ಆಯ್ಕೆ ಮಾಡಲಾಗಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಟಿ20 ಪಂದ್ಯ ಮುಕ್ತಾಯಗೊಂಡಿದೆ. ಇದೀಗ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಲಕ್ನೋದ ಅಟಲ್ ಬಿಹಾರಿ ವಾಜಪೈ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯವು ಇದೀಗ ವರುಣನ ಅಡ್ಡಿಯ ಕಾರಣ ವಿಳಂಬವಾಗಿದೆ. ನಿಗದಿಯಂತೆ ಪಂದ್ಯವು 1.30 ಕ್ಕೆ ಶುರುವಾಗಬೇಕಿತ್ತು. ಆದರೀಗ ಮಳೆಯ ಕಾರಣ ಟಾಸ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಸದ್ಯ ಮಳೆ ಕಡಿಮೆಯಾದರೂ ಪಿಚ್ನಿಂದ ಕವರ್ಗಳನ್ನು ಸರಿಸಲಾಗಿಲ್ಲ. ಹೀಗಾಗಿ ಪಂದ್ಯವು 2 ಗಂಟೆಯ ನಂತರ ಶುರುವಾಗುವ ಸಾಧ್ಯತೆಯಿದೆ.
ಲಕ್ನೋದಲ್ಲಿ ನಿನ್ನೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಪಿಚ್ ಭಾಗದಲ್ಲಿ ಕವರ್ ಮಾಡಲಾಗಿದ್ದು, ಇದೀಗ ಮಳೆಯ ಕಡಿಮೆಯಾಗಿದೆ. ಅದರಂತೆ ಇದೀಗ ಪಂದ್ಯ ಆಯೋಜನೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗಾಗಿ ಅರ್ಧ ಘಂಟೆ ತಡವಾಗಿ ಪಂದ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.
ಇನ್ನು ಲಕ್ನೋದಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಇದ್ದು, ಮೋಡ ಕವಿದ ವಾತಾವರಣವನ್ನು ಒಳಗೊಂಡಿದೆ. ಗುರುವಾರ ಮಳೆ ಪ್ರಮಾಣ ಶೇ 95ರಷ್ಟಿರುವ ಕಾರಣ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪಂದ್ಯ ನಡುವೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಬದಲಿ ಟೀಮ್ ಇಂಡಿಯಾ:
ಈ ಪಂದ್ಯದಲ್ಲಿ ಬದಲಿ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾ ಟಿ20 ವಿಶ್ವಕಪ್ಗಾಗಿ ತೆರಳಿದ್ದು, ಹೀಗಾಗಿ ಬಿಸಿಸಿಐ ಶಿಖರ್ ಧವನ್ ನಾಯಕತ್ವದ ಬದಲಿ ಭಾರತ ತಂಡವನ್ನು ಈ ಸರಣಿಗಾಗಿ ಆಯ್ಕೆ ಮಾಡಲಾಗಿದೆ. ಅದರಂತೆ ಧವನ್ ತಂಡದ ಸಾರಥ್ಯವಹಿಸಿದರೆ, ಶ್ರೇಯಸ್ ಅಯ್ಯರ್ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಭಾರತ ಏಕದಿನ ತಂಡ: ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ (ಉಪ ನಾಯಕ), ರಜತ್ ಪಾಟಿದಾರ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕುಲದೀಪ್ ಯಾದವ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ರಾಹುಲ್ ತ್ರಿಪಾಠಿ, ಮುಖೇಶ್ ಕುಮಾರ್, ಋತುರಾಜ್ ಗಾಯಕ್ವಾಡ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್.
ಭಾರತ-ಸೌತ್ ಆಫ್ರಿಕಾ ಏಕದಿನ ಸರಣಿಯ ವೇಳಾಪಟ್ಟಿ:
- ಅಕ್ಟೋಬರ್ 6- ಮೊದಲ ಏಕದಿನ ಪಂದ್ಯ (ಲಕ್ನೋ)
- ಅಕ್ಟೋಬರ್ 9- 2ನೇ ಏಕದಿನ ಪಂದ್ಯ (ರಾಂಚಿ)
- ಅಕ್ಟೋಬರ್ 11- 3ನೇ ಏಕದಿನ ಪಂದ್ಯ (ದೆಹಲಿ)
Published On - 1:27 pm, Thu, 6 October 22




