Suryakumar Yadav: ನಂಬರ್ 1 ಸ್ಥಾನಕ್ಕೇರಿದ ಕೆಲವೇ ಗಂಟೆಗಳಲ್ಲಿ 2ನೇ ಸ್ಥಾನಕ್ಕೆ ಕುಸಿದ ಸೂರ್ಯಕುಮಾರ್ ಯಾದವ್..!
ICC T20 rankings: ವಿಶೇಷ ಎಂದರೆ ಅಕ್ಟೋಬರ್ 23 ರಂದು ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡಿದರೆ ರಿಜ್ವಾನ್ ಅವರನ್ನು ಹಿಂದಿಕ್ಕುವುದರಲ್ಲಿ ಅನುಮಾನವೇ ಇಲ್ಲ.

ಟೀಮ್ ಇಂಡಿಯಾದ (Team India) ಸ್ಪೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಐಸಿಸಿಯ ನೂತನ T20 ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಬುಧವಾರ ಐಸಿಸಿ ಬಿಡುಗಡೆ ಮಾಡಿದ ಹೊಸ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊಹಮ್ಮದ್ ರಿಜ್ವಾನ್ ಅಗ್ರಸ್ಥಾನ ಅಲಂಕರಿಸಿದರೆ, ಸೂರ್ಯಕುಮಾರ್ ಯಾದವ್ 2ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ವಿಶೇಷ ಎಂದರೆ ಇದಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ನಂಬರ್ 1 ಸ್ಥಾನ ಅಲಂಕರಿಸಿದ್ದರು. ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಬಾರಿಸಿ ಮಿಂಚಿದ್ದ ಸೂರ್ಯ, ರಿಜ್ವಾನ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು. ಅತ್ತ ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ20 ವಿಫಲರಾಗಿದ್ದ ಮೊಹಮ್ಮದ್ ರಿಜ್ವಾನ್ 2ನೇ ಸ್ಥಾನಕ್ಕೆ ಕುಸಿದಿದ್ದರು.
ಅದರಂತೆ 854 ಅಂಕ ಪಡೆದ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಪಡೆದರೂ ಐಸಿಸಿ ನೂತನ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸುವ ಮುನ್ನವೇ ಒಂದು ಸ್ಥಾನ ಕುಸಿತ ಕಂಡರು. ಅಂದರೆ ಸೌತ್ ಆಫ್ರಿಕಾ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ವಿಫಲರಾಗುವ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿ ಅಂಕಗಳನ್ನು ಕಳೆದುಕೊಂಡಿದ್ದರು. ಹೀಗಾಗಿ ಇದೀಗ ಮತ್ತೆ 2ನೇ ಸ್ಥಾನಕ್ಕೆ ಇಳಿದಿದ್ದಾರೆ.
ಇದಾಗ್ಯೂ ಅಗ್ರಸ್ಥಾನದಲ್ಲಿರುವ ಮೊಹಮ್ಮದ್ ರಿಜ್ವಾನ್ ಹಾಗೂ ಸೂರ್ಯಕುಮಾರ್ ಯಾದವ್ ನಡುವಣ ಪಾಯಿಂಟ್ಸ್ಗಳ ಅಂತರ ಕೇವಲ 16 ಮಾತ್ರ. ಅಂದರೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಭರ್ಜರಿ ಪ್ರದರ್ಶನ ನೀಡಿದರೆ ನಂಬರ್ 1 ಸ್ಥಾನಕ್ಕೇರಬಹುದು.
ವಿಶೇಷ ಎಂದರೆ ಅಕ್ಟೋಬರ್ 23 ರಂದು ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡಿದರೆ ರಿಜ್ವಾನ್ ಅವರನ್ನು ಹಿಂದಿಕ್ಕುವುದರಲ್ಲಿ ಅನುಮಾನವೇ ಇಲ್ಲ. ಹಾಗೆಯೇ ಅದೇ ಪಂದ್ಯದಲ್ಲಿ ರಿಜ್ಚಾನ್ ಒಂದಂಕಿ ಮೊತ್ತಕ್ಕೆ ಔಟಾದರೆ ಅದು ಸೂರ್ಯಕುಮಾರ್ ಯಾದವ್ಗೆ ಪ್ಲಸ್ ಪಾಯಿಂಟ್ ಆಗಲಿದೆ. ಒಟ್ಟಿನಲ್ಲಿ ಭಾರತ-ಪಾಕಿಸ್ತಾನ್ ನಡುವಣ ಕಾದಾಟದ ನಡುವೆ ಮೊಹಮ್ಮದ್ ರಿಜ್ವಾನ್ ಹಾಗೂ ಸೂರ್ಯಕುಮಾರ್ ಯಾದವ್ ನಡುವಣ ನಂಬರ್ 1 ಸ್ಥಾನಕ್ಕಾಗಿ ಪೈಪೋಟಿ ಕೂಡ ಕಂಡು ಬರಲಿರುವುದು ವಿಶೇಷ.
ಐಸಿಸಿ ಟಿ20 ಶ್ರೇಯಾಂಕ ಪಟ್ಟಿ:
- – ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್) – 854 ರೇಟಿಂಗ್
- – ಸೂರ್ಯಕುಮಾರ್ ಯಾದವ್ (ಭಾರತ) – 838 ರೇಟಿಂಗ್
- – ಬಾಬರ್ ಆಜಂ (ಪಾಕಿಸ್ತಾನ್) – 801 ರೇಟಿಂಗ್
- – ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ) – 777 ರೇಟಿಂಗ್
- – ಡೇವಿಡ್ ಮಲಾನ್ (ಇಂಗ್ಲೆಂಡ್) – 733 ರೇಟಿಂಗ್
- – ಆರೋನ್ ಫಿಂಚ್ (ಆಸ್ಟ್ರೇಲಿಯಾ) – 707 ರೇಟಿಂಗ್
- – ಡೆವೊನ್ ಕಾನ್ವೆ (ನ್ಯೂಜಿಲೆಂಡ್) – 683 ರೇಟಿಂಗ್
- – ಪಾತುಂ ನಿಸಂಕಾ (ಶ್ರೀಲಂಕಾ) – 677 ರೇಟಿಂಗ್
- – ಮೊಹಮ್ಮದ್ ವಾಸಿಂ (ಯುಎಇ) – 636 ರೇಟಿಂಗ್
- – ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)




