ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ (Team India) ಇದೀಗ ಎರಡನೇ ಕದನಕ್ಕೆ ಸಜ್ಜಾಗುತ್ತಿದೆ. ಬುಧವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ರೋಹಿತ್ (Rohit Sharma) ಪಡೆ ಗೆದ್ದು ಸರಣಿ ವಶಪಡಿಸಿಕೊಳ್ಳುವ ಪ್ಲಾನ್ನಲ್ಲಿದೆ. ಇದಕ್ಕಾಗಿ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕೂಡ ಆಟಗಾರರ ಜೊತೆ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಭಾರತದ ಬ್ಯಾಟರ್ಗಳಿಗೆ ತಾವೇ ಸತ್ವಃ ಬೌಲಿಂಗ್ ಮಾಡಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದ್ರಾವಿಡ್ ಬೌಲಿಂಗ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದೆ. ಇದರ ಜೊತೆಗೆ ವಿಶೇಷ ಕ್ಯಾಪ್ಷನ್ ಅನ್ನೂ ನೀಡಿದೆ. ಅದೇನೆಂದರೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರ ಜೀವಮಾನ ಸಾಧನೆಯನ್ನು ನೆನೆದು ಬರೆದುಕೊಂಡಿದೆ.
1999ನೇ ಇಸವಿಯ ಫೆ.7 (ನಿನ್ನೆ) ರಂದು ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಪಡೆದಿರುವ ಜಂಬೋ ಖ್ಯಾತಿಯ ಭಾರತೀಯ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಇತಿಹಾಸ ಬರೆದಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇಂಗ್ಲೆಂಡ್‌ನ ಜಿಮ್ ಲೇಕರ್ ಬಳಿಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಹಾಗೂ ಮೊದಲ ಸ್ಪಿನ್ನರ್ ಎಂಬ ವಿಶ್ವ ದಾಖಲೆಗೆ ಭಾಜನವಾದರು. ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ (ಈಗ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನ) ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಸ್ಮರಣೀಯ ಸಾಧನೆ ಮಾಡಿರುವುದು ಇನ್ನು ಹೆಚ್ಚು ವಿಶೇಷ. 26.3 ಓವರ್‌ಗಳನ್ನು ಎಸೆದಿದ್ದ ಅನಿಲ್ ಕುಂಬ್ಳೆ 74 ರನ್ನಿಗೆ 10 ವಿಕೆಟ್ ಪಡೆದು ಜೀವಮಾನ ಶ್ರೇಷ್ಠ ಸಾಧನೆ ಮಾಡಿದರು. ಈ ಮೂಲಕ ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳುವಂತಾಯಿತು.
Celebrating the 23rd anniversary of @anilkumble1074‘s 10-74 ??? #TeamIndia | @Paytm | #INDvWI pic.twitter.com/jQtxQXduHr
— BCCI (@BCCI) February 7, 2022
ಈ ಸಾಧನೆಗೆ ಇದೀಗ 23 ವರ್ಷವಾಗಿದ್ದು ಬಿಸಿಸಿಐ ವಿಶೇಷ ನೆನಪನ್ನು ಹಂಚಿಕೊಂಡಿದೆ. ಟೀಮ್ ಇಂಡಿಯಾ ಬ್ಯಾಟರ್ಗಳಿಗೆ ದ್ರಾವಿಡ್ ಬೌಲಿಂಗ್ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡು ಗೌರವ ಸಲ್ಲಿಸಿದೆ. ಎರಡನೇ ಏಕದಿನ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದ್ದು, ಗೆಲುವಿನ ಲೆಕ್ಕಾಚಾರದಲ್ಲಿದೆ. ಪೊಲಾರ್ಡ್ ಪಡೆ ಕಮ್ಬ್ಯಾಕ್ ಮಾಡಿ ಸರಣಿಯನ್ನು ಜೀವಂತವಾಗಿರಿಸಲು ಹೋರಾಟ ನಡೆಸಿದರೆ ಇತ್ತ ಸರಣಿ ವಶಪಡಿಸಿಕೊಳ್ಳಲು ಭಾರತ ಯೋಜನೆ ರೂಪಿಸಿಕೊಂಡಿದೆ.
ವೈಯಕ್ತಿಕ ಕಾರಣಗಳಿಂದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಸೋಮವಾರ ತಂಡವನ್ನು ಸೇರಿಕೊಂಡಿದ್ದಾರೆ.ಆದರೆ, ಅವರು 3 ದಿನಗಳ ಕ್ವಾರಂಟೈನ್‌ನಲ್ಲಿ ಇರುವುದರಿಂದ ದ್ವಿತೀಯ ಪಂದ್ಯದಲ್ಲೂ ಆಡುವುದು ಅನುಮಾನ. ಇತ್ತ ಮಾಯಾಂಕ್ ಅಗರ್ವಾಲ್ ಅವರ ಕ್ವಾರಂಟೈನ್ ಅವಧಿ ಕೂಡ ಮುಗಿದಿದೆ. ಹಾಗೆಯೇ ನವದೀಪ್ ಸೈನಿ ಕೋವಿಡ್ ಪಾಸಿಟಿವ್‌ನಿಂದ ಚೇತರಿಸಿಕೊಂಡಿದ್ದಾರೆ. ಇವರಿಬ್ಬರೂ ತಂಡವನ್ನು ಸೇರಿಕೊಂಡಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್(ವಿ.ಕೀ), ದೀಪಕ್ ಚಹರ್, ಶಾರ್ದುಲ್ ಠಾಕೂರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಆವೇಶ್ ಖಾನ್, ಇಶಾನ್ ಕಿಶನ್, ಶಾರುಖ್ ಖಾನ್, ಮಯಾಂಕ್ ಅಗರ್ವಾಲ್.
Rohit Sharma: ರೋಹಿತ್ ಶರ್ಮಾ ಒಬ್ಬ ಅಂಜುಬುರುಕ: ಹಿಟ್ಮ್ಯಾನ್ ವಿರುದ್ಧ ಕೆಂಡ ಕಾರುತ್ತಿರುವ ಫ್ಯಾನ್ಸ್
IND vs WI: ಭಾರತ- ವೆಸ್ಟ್ ಇಂಡೀಸ್ ಎರಡನೇ ಏಕದಿನ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ?: ಇಲ್ಲಿದೆ ಮಾಹಿತಿ