Rahul Dravid: 27 ವರ್ಷಗಳ ಹಿಂದಿನ ಸೋಲಿನ ನೆನಪು: ಕೋಪಗೊಂಡ ರಾಹುಲ್ ದ್ರಾವಿಡ್

|

Updated on: Jun 20, 2024 | 11:59 AM

India vs Afghanistan: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ. ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಇನ್ನು ತನ್ನ 2ನೇ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

Rahul Dravid: 27 ವರ್ಷಗಳ ಹಿಂದಿನ ಸೋಲಿನ ನೆನಪು: ಕೋಪಗೊಂಡ ರಾಹುಲ್ ದ್ರಾವಿಡ್
Rahul Dravid
Follow us on

T20 World Cup 2024: ಟಿ20 ವಿಶ್ವಕಪ್​ನಲ್ಲಿ ಗುರುವಾರ (ಜೂ.20) ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು.

ಈ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ರಾಹುಲ್ ದ್ರಾವಿಡ್ ಕೋಪಗೊಂಡಿದ್ದಾರೆ. ಸದಾ ತಾಳ್ಮೆಯಲ್ಲೇ ಕಾಣಿಸಿಕೊಳ್ಳುವ ದ್ರಾವಿಡ್ ಅವರಿಗೆ 27 ವರ್ಷಗಳ ಹಿಂದಿನ ಸೋಲನ್ನು ನೆನಪಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಟೀಮ್ ಇಂಡಿಯಾ ಕೋಚ್ ತುಸು ಖಡಕ್ಕಾಗಿಯೇ ಉತ್ತರ ನೀಡಿದ್ದಾರೆ.

1997 ರಲ್ಲಿ ಬಾರ್ಬಡೋಸ್​ನ ಕೆನ್ಸಿಂಗ್ಟನ್ ಮೈದಾನದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಟೆಸ್ಟ್ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ದ್ರಾವಿಡ್ ಎರಡು ಇನಿಂಗ್ಸ್​ಗಳಲ್ಲಿ ಕ್ರಮವಾಗಿ 78 ಮತ್ತು 2 ರನ್ ಕಲೆಹಾಕಿದ್ದರು. ಇದಾಗ್ಯೂ ಈ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ 38 ರನ್​ಗಳಿಂದ ಸೋಲನುಭವಿಸಿತ್ತು.

ಇದೀಗ ಇದೇ ಮೈದಾನದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗುತ್ತಿದೆ. ಇದೇ ಕಾರಣದಿಂದಾಗಿ ವರದಿಗಾರರೊಬ್ಬರು, ಹಳೆಯ ಸೋಲಿನ ನೆನಪನ್ನು ಮಾಡಿ ಕಿಚಾಯಿಸಲು ಯತ್ನಿಸಿದ್ದಾರೆ.

ವರದಿಗಾರ: “ರಾಹುಲ್, ನೀವು ಆಟಗಾರನಾಗಿ, ಇಲ್ಲಿ ಆಡಿದ್ದೀರಿ. 97ರ ಟೆಸ್ಟ್‌ ನೆನಪಿದೆಯಲ್ಲವೇ?”

ದ್ರಾವಿಡ್: ” ತುಂಬಾ ಧನ್ಯವಾದಗಳು ಗೆಳೆಯ! ನಾನು ಇಲ್ಲಿ ಇತರ ಕೆಲವು ಯೋಗ್ಯ ನೆನಪುಗಳನ್ನು ಹೊಂದಿದ್ದೇನೆ.”

ವರದಿಗಾರ: “ಹಾಗಿದ್ರೆ ಗುರುವಾರ ಹೊಸ ಮತ್ತು ಉತ್ತಮವಾದ ನೆನಪುಗಳನ್ನು ಸೃಷ್ಟಿಸುತ್ತೀರಾ?”

ದ್ರಾವಿಡ್ : “ದೇವರೇ! ನಾನು ಹೊಸದನ್ನು ಮಾಡಲು ಪ್ರಯತ್ನಿಸುತ್ತಿಲ್ಲ!

“ನಾನು ಕೆಲ ವಿಷಯಗಳಿಂದ ಬೇಗನೆ ಹೊರಬರುತ್ತೇನೆ. ಅದು ನನ್ನ ವೈಶಿಷ್ಟ್ಯಗಳಲ್ಲಿ ಒಂದು. ಆ ಬಳಿಕ ಆ ವಿಷಯಗಳನ್ನು ಹಿಂತಿರುಗಿ ನೋಡುವುದಿಲ್ಲ. ನಾನು ಈಗ ಏನು ಮಾಡುತ್ತಿರುವೆ, ಏನು ಮಾಡಲು ಪ್ರಯತ್ನಿಸಬಹುದು ಎಂಬುದನ್ನಷ್ಟೇ ಯೋಚಿಸುತ್ತೇನೆ. 1997 ರಲ್ಲಿ ಅಥವಾ ಆ ಬಳಿಕ ಏನಾಯಿತು ಎಂಬುದರ ಬಗ್ಗೆ ಚಿಂತಿಸುವುದಿಲ್ಲ ಎಂದು ರಾಹುಲ್ ದ್ರಾವಿಡ್ ಖಾರವಾಗಿ ಉತ್ತರಿಸಿದರು.

ಅಫ್ಘಾನಿಸ್ತಾನವನ್ನು ಹಗುರವಾಗಿ ಪರಿಗಣಿಸುವುದಿಲ್ಲ:

ನಾವು ಅಫ್ಘಾನಿಸ್ತಾನ್ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಟಿ20 ಸ್ವರೂಪದಲ್ಲಿ ಅಫ್ಘಾನಿಸ್ತಾನ್ ಅಪಾಯಕಾರಿ ತಂಡವಾಗಿದೆ. ಅವರು ಈ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ: Phil Salt: 6,6,6,6,6: ಹೊಸ ದಾಖಲೆ ಬರೆದ ಫಿಲ್ ಸಾಲ್ಟ್

ಅವರಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಅನುಭವ ಇಲ್ಲದಿರಬಹುದು, ಆದರೆ ಅವರ ಕೆಲವು ಆಟಗಾರರು ನಮ್ಮ ಆಟಗಾರರಿಗಿಂತ ಹೆಚ್ಚು T20 ಲೀಗ್‌ಗಳಲ್ಲಿ ನಿಯಮಿತವಾಗಿ ಆಡಿದ್ದಾರೆ. ಅಲ್ಲದೆ ಐಪಿಎಲ್​ನಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅಫ್ಘಾನಿಸ್ತಾನ್ ತಂಡವನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.