Rahul Dravid: ಗುರು ದ್ರಾವಿಡ್ಗೆ ನಾಳೆಯೇ ಕೊನೆಯ ಪಂದ್ಯ; ವಿದಾಯಕ್ಕೂ ಮುನ್ನ ‘ದಿ ವಾಲ್’ ಹೇಳಿದ್ದೇನು? ವಿಡಿಯೋ ನೋಡಿ
Rahul Dravid: ಟೀಂ ಇಂಡಿಯಾಗೆ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಕೊನೆಯ ಟೂರ್ನಿ ಇದಾಗಿದೆ. ಈ ವಿಶ್ವಕಪ್ ಬಳಿಕ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಹೀಗಿರುವಾಗ ವಿಶ್ವಕಪ್ ಗೆದ್ದು ದ್ರಾವಿಡ್ಗೆ ವಿದಾಯ ಹೇಳಬೇಕು ಎಂಬ ಕೂಗು ಜೋರಾಗಿದೆ. ಕೋಟ್ಯಂತರ ಭಾರತೀಯ ಅಭಿಮಾನಿಗಳಿಗಾಗಿ ಹಾಗೂ ರಾಹುಲ್ ದ್ರಾವಿಡ್‌ಗಾಗಿ ಟೀಂ ಇಂಡಿಯಾ ಈ ವಿಶ್ವಕಪ್ ಗೆಲ್ಲಬೇಕು ಎಂಬುದು ಹಲವು ದಿಗ್ಗಜರ ಅಭಿಪ್ರಾಯವಾಗಿದೆ.
ಏಳು ತಿಂಗಳ ಕಾಯುವಿಕೆಯ ನಂತರ ಟೀಂ ಇಂಡಿಯಾ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗುವ ಅವಕಾಶವನ್ನು ಪಡೆದುಕೊಂಡಿದೆ. 19 ನವೆಂಬರ್ 2023 ರಂದು ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸೋಲಿನ ನಂತರ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಚಾಂಪಿಯನ್ ಆಗುವ ಸನಿಹದಲ್ಲಿದೆ. ಏಕದಿನ ವಿಶ್ವಕಪ್‌ನಂತೆ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದು, ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್‌ಗೆ ತಲುಪಿದೆ. ಇದೀಗ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಆದರೆ ಈ ಫೈನಲ್ ಪಂದ್ಯಕ್ಕೂ ಮುನ್ನ ಮುಖ್ಯ ಕೋಚ್ ಆಗಿ ಕೊನೆಯ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಗುರು ರಾಹುಲ್ ದ್ರಾವಿಡ್, ತಮ್ಮ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಉತ್ತಮ ಕಲಿಕೆಯ ಅನುಭವ; ದ್ರಾವಿಡ್
ಟೀಂ ಇಂಡಿಯಾದ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ರಾಹುಲ್ ದ್ರಾವಿಡ್ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ರಾಹುಲ್ ದ್ರಾವಿಡ್ ತಮ್ಮ ಪ್ರಯಾಣದ ಬಗ್ಗೆ ಹಲವು ದೊಡ್ಡ ವಿಷಯಗಳನ್ನು ಹೇಳಿದ್ದಾರೆ. ‘ನಾನು ಅದನ್ನು ನಿಜವಾಗಿಯೂ ಆನಂದಿಸಿದೆ, ಇದು ನನಗೆ ಉತ್ತಮ ಕಲಿಕೆಯ ಅನುಭವವಾಗಿದೆ. ನನ್ನ ಹೊರತಾಗಿ, ನನ್ನ ಕುಟುಂಬವೂ ಕಳೆದ 2.5 ವರ್ಷಗಳಲ್ಲಿ ಭಾರತ ತಂಡದ ಭಾಗವಾಗಿ ಪ್ರಯಾಣ ಮಾಡಿದೆ ಎಂದಿದ್ದಾರೆ.
🗣️🗣️“𝐅𝐨𝐧𝐝𝐞𝐬𝐭 𝐦𝐞𝐦𝐨𝐫𝐢𝐞𝐬 𝐰𝐢𝐥𝐥 𝐛𝐞 𝐭𝐡𝐞 𝐜𝐨𝐧𝐧𝐞𝐜𝐭𝐢𝐨𝐧𝐬 𝐈 𝐡𝐚𝐯𝐞 𝐛𝐮𝐢𝐥𝐭”
An eventful coaching journey in the words of #TeamIndia Head Coach Rahul Dravid, who highlights the moments created beyond the cricketing field ✨👏
𝘾𝙤𝙢𝙞𝙣𝙜 𝙎𝙤𝙤𝙣 on… pic.twitter.com/iiSb3LxgZ1
— BCCI (@BCCI) June 28, 2024
ಟೀಂ ಇಂಡಿಯಾಗೆ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಕೊನೆಯ ಟೂರ್ನಿ ಇದಾಗಿದೆ. ಈ ವಿಶ್ವಕಪ್ ಬಳಿಕ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಹೀಗಿರುವಾಗ ವಿಶ್ವಕಪ್ ಗೆದ್ದು ದ್ರಾವಿಡ್ಗೆ ವಿದಾಯ ಹೇಳಬೇಕು ಎಂಬ ಕೂಗು ಜೋರಾಗಿದೆ. ಕೋಟ್ಯಂತರ ಭಾರತೀಯ ಅಭಿಮಾನಿಗಳಿಗಾಗಿ ಹಾಗೂ ರಾಹುಲ್ ದ್ರಾವಿಡ್‌ಗಾಗಿ ಟೀಂ ಇಂಡಿಯಾ ಈ ವಿಶ್ವಕಪ್ ಗೆಲ್ಲಬೇಕು ಎಂಬುದು ಹಲವು ದಿಗ್ಗಜರ ಅಭಿಪ್ರಾಯವಾಗಿದೆ.
ದ್ರಾವಿಡ್ ಅಧಿಕಾರಾವಧಿ ಹೀಗಿತ್ತು
ನವೆಂಬರ್ 2021 ರಲ್ಲಿ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯನ್ನು ವಹಿಸಿಕೊಂಡರು. ಆದರೆ, ಇದುವರೆಗೆ ಅವರ ಕೋಚ್ ಅಡಿಯಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಟೀಂ ಇಂಡಿಯಾ 2022 ರಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್, 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಏಕದಿನ ವಿಶ್ವಕಪ್‌ನ ಫೈನಲ್ ತಲುಪಿತು. ಆದರೆ ಈ ಎಲ್ಲಾ ಪಂದ್ಯಗಳಲ್ಲು ಸೋಲನ್ನು ಎದುರಿಸಬೇಕಾಯಿತು. ವಿಶ್ವಕಪ್ ಬಳಿಕ ಭಾರತ ತಂಡ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸದಲ್ಲಿ ವಿವಿಎಸ್ ಲಕ್ಷ್ಮಣ್ ಭಾರತದ ಕೋಚ್ ಆಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದಾದ ಬಳಿಕ ಗೌತಮ್ ಗಂಭೀರ್ ಖಾಯಂ ಕೋಚ್ ಹುದ್ದೆ ವಹಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ