ಇತ್ತೀಚೆಗೆ ಭಾರತದ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲ್ಲಿಸ್ ಅವರು ಬೆಂಗಳೂರಿಗೆ ಬಂದು ಮೈಸೂರು ಮಸಾಲೆ ದೋಸೆ ಸಖತ್ತಾಗಿದೆ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದರು. ಈ ವಿಷಯ ಭರ್ಜರಿ ವೈರಲ್ ಆಗಿತ್ತು. ಸದ್ಯ ಮತ್ತೆ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲ್ಲಿಸ್ ಸುದ್ದಿಯಲ್ಲಿದ್ದು, ಕ್ರಿಕೆಟ್ ದಂತಹಂಥೆ ರಾಹುಲ್ ದ್ರಾವಿಡ್ರಿಂದ ಕನ್ನಡ ಪಾಠ ಕಲಿತಿದ್ದಾರೆ.
ಸಧ್ಯಕ್ಕೆ ದಕ್ಷಿಣ ಭಾರತದ ಪ್ರವಾಸದಲ್ಲಿರುವ ಅವರು, ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ. ಪ್ರತಿಯೊಬ್ಬ ರಾಜತಾಂತ್ರಿಕ ಅಧಿಕಾರಿಗಳು ದೇಶದ ಪ್ರವಾಸ ಮಾಡುವುದು ಸಾಮಾನ್ಯ. ಆದರೆ ಎಲ್ಲಿಸ್ ಮಾತ್ರ ಬೇರೆಯವರಂತೆ ಕೇವಲ ಪ್ರವಾಸ ಮಾಡದೆ, ಕರ್ನಾಟಕದ ಸಂಸ್ಕೃತಿ, ಆಹಾರ, ಭಾಷೆ ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಕ್ರಿಕೆಟ್ ವಾಲ್ ಎಂದೆ ಖ್ಯಾತಿಯಾದ ರಾಹುಲ್ ದ್ರಾವಿಡ್ರನ್ನು ಭೇಟಿ ಮಾಡಿರುವ ಬ್ರಿಟಿಷ್ ರಾಯಭಾರಿ ರಾಹುಲ್ರಿಂದ ಕನ್ನಡ ಕಲಿಯಲು ಪ್ರಯತ್ನ ಪಟ್ಟಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಅವರು ಟ್ವಿಟ್ಟರ್ನಲ್ಲಿ, ಇಂದು ನಾವು ಬೆಂಗಳೂರಿನಲ್ಲಿ ದಕ್ಷಿಣದಲ್ಲಿದ್ದೇವೆ. ರಾಹುಲ್ ದ್ರಾವಿಡ್ಗಿಂತ ಬೇರೆ ಉತ್ತಮ ಕೋಚ್ ಬೇಕಾ. ಅವರು ನನಗೆ ಕನ್ನಡದಲ್ಲಿ ಹಲವಾರು ಪದಗಳನ್ನು ಕಲಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ, ರಾಹುಲ್ ದ್ರಾವಿಡ್ ಎಲ್ಲೆಸ್ ಅವರಿಗೆ “ಬೇಗ ಓಡು” ಅಂದರೆ ಕನ್ನಡದಲ್ಲಿ ವೇಗವಾಗಿ ಓಡಿ ಎಂಬುದನ್ನ ಕಲಿಸಿದ್ದಾರೆ. ಇದಕ್ಕೆ ಅವರು ಎಲ್ಲಿಸ್, ‘ಬೇಗ ಓಡಿ’ ಒಂದು ರನ್ ಎಂದು ನಗುವಿನ ಚಟಾಕಿ ಹಾರಿಸಿದರು.
Cricket expressions in Indian languages part 2.
Today, we’re down south in Bengaluru.
What better teacher than ‘The Coach’ #RahulDravid, who taught taught me this in #Kannada ಕನ್ನಡ ? pic.twitter.com/tDCtHOcIwa
— Alex Ellis (@AlexWEllis) August 7, 2021
ಎಲ್ಲಿಸ್ ಅವರು ಕರ್ನಾಟಕದ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಹ ಭೇಟಿ ಮಾಡಿ ಕರ್ನಾಟಕದ ಹೊಸ ಸಿಎಂ ಭೇಟಿ ಮಾಡಿದ ಮೊದಲ ರಾಜತಾಂತ್ರಿಕ ಅಧಿಕಾರಿಯಾಗಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯರು ಅತೀ ಹೆಚ್ಚು ಪ್ರೀತಿಸುವ ಟೀಮ್ ಇಂಡಿಯಾ ಪ್ಲೇಯರ್ಸ್ ಇವರಂತೆ: ಈ ಪಟ್ಟಿಯಲ್ಲಿಲ್ಲ ಧೋನಿ, ಕೊಹ್ಲಿ
Tokyo Olympics: ಪದಕಕ್ಕೆ ಮುತ್ತಿಟ್ಟ ಭಾರತೀಯರಿಗೆ ಇಂದು ಸಂಜೆ ಪ್ರಧಾನಿ ಮೋದಿಯಿಂದ ಸನ್ಮಾನ
(Rahul Dravid teaches Kannada to British High Commissioner to India Alex Ellis in Bengaluru)