Raj Bawa: ಬ್ರಿಟಿಷರನ್ನು ಅಟ್ಟಾಡಿಸಿದ ರಾಜ: ಇದುವರೆಗೆ ಯಾವುದೇ ಭಾರತೀಯ ಪ್ಲೇಯರ್ ಮಾಡಿಲ್ಲ ಈ ದಾಖಲೆ
India vs England U19 World Cup Final: ಐಸಿಸಿ ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ರಾಜ್ ಬಾವಾ (Raj Bawa). ಇಂಗ್ಲೆಂಡ್ ತಂಡವನ್ನು ತನ್ನ ಮಾರಕ ಬೌಲಿಂಗ್ ದಾಳಿಯಿಂದ ಅಟ್ಟಾಡಿಸಿದ ರಾಜ್ 9.5 ಓವರ್ನಲ್ಲಿ 1 ಮೇಡರ್ ಜೊತೆಗೆ 31 ರನ್ ನೀಡಿ 5 ವಿಕೆಟ್ ಕಿತ್ತರು.
ಐಸಿಸಿ ಅಂಡರ್ 19 ವಿಶ್ವಕಪ್ನಲ್ಲಿ (ICC U19 World Cup Final) ಭಾರತ ತಂಡ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ, ದಾಖಲೆಯ ಐದನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. 2000, 2008, 2012 ಮತ್ತು 2018ರ ಆವೃತ್ತಿಗಳಲ್ಲಿ ಟ್ರೋಫಿ ಎತ್ತಿ ಹಿಡಿದಿ ಸಾಧನೆ ಮಾಡಿದ್ದ ಭಾರತೀಯ ಕಿರಿಯರು (India Under 19 Team) ತನ್ನ ದಾಖಲೆಯನ್ನು ಈ ಬಾರಿ ಗೆದ್ದು ಮತ್ತಷ್ಟು ಭದ್ರ ಪಡಿಸಿಕೊಂಡಿದೆ. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ರಾಜ್ ಬಾವಾ (Raj Bawa). ಬ್ರಿಟಿಷ್ ಪಡೆಯನ್ನು ತನ್ನ ಮಾರಕ ಬೌಲಿಂಗ್ ದಾಳಿಯಿಂದ ಅಟ್ಟಾಡಿಸಿದ ರಾಜ್ 9.5 ಓವರ್ನಲ್ಲಿ 1 ಮೇಡರ್ ಜೊತೆಗೆ 31 ರನ್ ನೀಡಿ 5 ವಿಕೆಟ್ ಕಿತ್ತರು. ಇದರೊಂದಿಗೆ ವಿಶೇಷ ದಾಖಲೆಯನ್ನೂ ಬರೆದರು. ಐಸಿಸಿ ಟೂರ್ನಿಗಳ ಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಕಿತ್ತ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ರಾಜ್ ಬಾವಾ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರ ದಾಖಲೆ ಸರಿಗಟ್ಟಿದ್ದಾರೆ.
ಹೌದು, ಕೆರಿಬಿಯನ್ನರ ನಾಡಿನಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲಿಗೆ 5 ವಿಕೆಟ್ ಕಿತ್ತು ಎದುರಾಳಿಯನ್ನು ಕೇವಲ 189 ರನ್‌ಗಳಿಗೆ ಆಲ್‌ಔಟ್ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದ ರಾಜ್ ಬಾವಾ, ಬಳಿಕ ಟಾರ್ಗೆಟ್ ಬೆನ್ನಟ್ಟುವ ಸಮಯದಲ್ಲಿ ಭಾರತ ತಂಡದ ಪರ 54 ಎಸೆತಗಳಲ್ಲಿ 2 ಫೋರ್ ಮತ್ತೊಂದು ಸಿಕ್ಸರ್ ಒಳಗೊಂಡ ಅತ್ಯಮೂಲ್ಯ 35 ರನ್‌ಗಳ ಕೊಡುಗೆ ನೀಡಿದರು. ಇದಕ್ಕಾಗಿ ಇವರು ಪಂದ್ಯ ಶ್ರೇಷ್ಠ ಗೌರವಕ್ಕೂ ಭಾಜನರಾದರು. ಜೊತೆಗೆ ವಿಶೇಷ ದಾಖಲೆಯನ್ನೂ ಬರೆದರು.
ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ನಡೆದ ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ 5 ವಿಕೆಟ್‌ಗಳನ್ನು ಕಿತ್ತ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ರಾಜ್ ಸಂಪಾದಿಸಿದ್ದಾರೆ. ನಾಲ್ಕು ವಿಕೆಟ್ ಸಾಧನೆಯ ಪಟ್ಟಿಗೆ ಯಂಗ್ ಇಂಡಿಯಾದ ಮತ್ತೊಬ್ಬ ವೇಗಿ ರವಿ ಕುಮಾರ್ ಕೂಡ ಸೇರಿದ್ದಾರೆ. ಜೊತೆಗೆ ಕಪಿಲ್ ದೇವ್ ಅವರ ದಾಖಲೆ ಸರಿಗಟ್ಟಿದ್ದಾರೆ. ಐಸಿಸಿ ಟೂರ್ನಿಯಲ್ಲಿ ಇನಿಂಗ್ಸ್ ಒಂದರಲ್ಲಿ 5 ವಿಕೆಟ್‌ಗಳ ಸಾಧನೆ ಮತ್ತು ಟೂರ್ನಿಯಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿ ಭಾರತೀಯ ಆಟಗಾರರ ಪಟ್ಟಿಗೆ ರಾಜ್ ಬಾವಾ ಸೇರಿದ್ದಾರೆ. 1983ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ದೇವ್, ಆ ಟೂರ್ನಿಯಲ್ಲಿ ಈ ದಾಖಲೆ ನಿರ್ಮಿಸಿದ್ದರು.
ಪ್ರತಿ ಆಟಗಾರರಿಗೆ 40 ಲಕ್ಷ ರೂ. ಬಹುಮಾನ:
ಭಾರತೀಯ ತಂಡದ ಪ್ರತಿ ಆಟಗಾರರಿಗೆ ತಲಾ 40 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯರ್ಶಿ ಜಯ್ ಶಾ ಘೋಷಿಸಿದ್ದಾರೆ. ಅಂತೆಯೇ ತಂಡದ ಎಲ್ಲ ಬೆಂಬಲ ಸಿಬ್ಬಂದಿಗೆ ತಲಾ 25 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದ್ದಾರೆ. “ಅಂಡರ್-19 ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತೀಯ ತಂಡದ ಪ್ರತಿ ಆಟಗಾರರಿಗೆ ತಲಾ 40 ಲಕ್ಷ ಹಾಗೂ ಬೆಂಬಲ ಸಿಬ್ಬಂದಿಗೆ ತಲಾ 25 ಲಕ್ಷ ಬಹುಮಾನ ಘೋಷಿಸಲು ಅತೀವ ಸಂತಸವಾಗುತ್ತಿದೆ. ನೀವು ಭಾರತ ಹೆಮ್ಮೆಪಡುವಂಥ ಸಾಧನೆ ಮಾಡಿದ್ದೀರಿ” ಎಂದು ಶಾ ಟ್ವೀಟ್ ಮಾಡಿದ್ದಾರೆ.
IND vs WI: ಮೊದಲ ಏಕದಿನಕ್ಕೆ ಇದೆಯೇ ಮಳೆಯ ಕಾಟ?: ಪಿಚ್ ರಿಪೋರ್ಟ್, ಪಂದ್ಯ ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಮಾಹಿತಿ
India Playing XI: ಮೊದಲ ಏಕದಿನ ಪಂದ್ಯದಲ್ಲಿ ಯಾರಿಗೆಲ್ಲ ಅವಕಾಶ?: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ