
ಒಂದೆಡೆ ಟೀಂ ಇಂಡಿಯಾ ಏಷ್ಯಾಕಪ್ನಲ್ಲಿ ಆಡುತ್ತಿದ್ದರೆ, ಮತ್ತೊಂದೆಡೆ ಬಿಸಿಸಿಐ (BCCI) ಹಿರಿಯ ಆಯ್ಕೆ ಸಮಿತಿಯು ಆಸ್ಟ್ರೇಲಿಯಾ ಎ ವಿರುದ್ಧದ (India A vs Australia A) ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಎ ತಂಡವನ್ನು ಪ್ರಕಟಿಸಿದೆ. ಈ ಸರಣಿಯು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 5, 2025 ರವರೆಗೆ ಕಾನ್ಪುರದ ಐತಿಹಾಸಿಕ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿ ಮೊದಲ ಪಂದ್ಯದಲ್ಲಿ ಆರ್ಸಿಬಿ ನಾಯಕ ರಜತ್ ಪಾಟಿದರ್ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ವಾಸ್ತವವಾಗಿ ರಜತ್ ತಮ್ಮ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚಾಂಪಿಯನ್ ಮಾಡಿದ್ದರು. ಇದೀಗ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿಯೂ ಕೇಂದ್ರ ತಂಡದ ನಾಯಕತ್ವವಹಿಸಿರುವ ರಜತ್ ತಂಡವನ್ನು ಚಾಂಪಿಯನ್ ಪಟ್ಟದತ್ತ ಕೊಂಡೊಯ್ದಿದ್ದಾರೆ. ಹೀಗಾಗಿ ರಜತ್ಗೆ ಭಾರತ ಎ ತಂಡದ ನಾಯಕತ್ವ ನೀಡಲು ಬಿಸಿಸಿಐ ತೀರ್ಮಾನಿಸಿದೆ.
ಈ ಸರಣಿಯ ಆರಂಭಿಕ ಪಂದ್ಯಕ್ಕೆ ರಜತ್ ಪಾಟಿದಾರ್ ಅವರನ್ನು ನಾಯಕರನ್ನಾಗಿ ಘೋಷಿಸಲಾಗಿದೆ. ಉಳಿದಂತೆ ಸರಣಿಯ ಕೊನೆಯ 2 ಪಂದ್ಯಗಳಲ್ಲಿ ತಿಲಕ್ ವರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ವಾಸ್ತವವಾಗಿ, ಸರಣಿಯ ಮೊದಲ ಪಂದ್ಯದಲ್ಲಿ ತಿಲಕ್ ವರ್ಮಾ ತಂಡದ ಭಾಗವಾಗಿರುವುದಿಲ್ಲ. ಇದರಿಂದಾಗಿ ರಜತ್ ಪಾಟಿದಾರ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಅಭಿಷೇಕ್ ಶರ್ಮಾ, ಪ್ರಭ್ಸಿಮ್ರಾನ್ ಸಿಂಗ್ ಮತ್ತು ರಿಯಾನ್ ಪರಾಗ್ ಅವರಂತಹ ಸ್ಟಾರ್ ಆಟಗಾರರು ಸಹ ಈ ಸರಣಿಯ ಭಾಗವಾಗಲಿದ್ದಾರೆ.
🚨 𝗡𝗘𝗪𝗦 🚨
India A squad for one-day series against Australia A announced.
All The Details 🔽https://t.co/V8QokLO6zr
— BCCI (@BCCI) September 14, 2025
ಮೊದಲ ಏಕದಿನ ಪಂದ್ಯಕ್ಕೆ ಭಾರತ ಎ ತಂಡ: ರಜತ್ ಪಾಟಿದಾರ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಗೆ, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರ್ಜಪ್ನೀತ್ ಸಿಂಗ್, ಯುಧ್ವೀರ್ ಸಿಂಗ್, ರವಿ ಬಿಷ್ಣೋಯ್, ಅಭಿಷೇಕ್ ಪೊರೆಲ್, ಪ್ರಿಯಾಂಶ್ ಆರ್ಯ, ಸಿಮರ್ಜೀತ್ ಸಿಂಗ್.
ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಿಗೆ ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ರಜತ್ ಪಾಟಿದಾರ್ (ಉಪನಾಯಕ), ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಜ್, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರ್ಜಪ್ನೀತ್ ಸಿಂಗ್, ಯುಧ್ವೀರ್ ಸಿಂಗ್, ರವಿ ಬಿಷ್ಣೋಯ್, ಅಭಿಷೇಕ್ ಪೊರೆಲ್, ಹರ್ಷಿತ್ ರಾಣಾ, ಅರ್ಶ್ದೀಪ್ ಸಿಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:48 pm, Sun, 14 September 25