AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia cup 2025: ದುಬೈನಲ್ಲಿ ಟಾಸ್ ಸೋತವರು ಪಂದ್ಯ ಸೋಲುವುದು ಖಚಿತ

India vs Pakistan Asia Cup 2025: ದುಬೈನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನದ ಏಷ್ಯಾಕಪ್ ಪಂದ್ಯದಲ್ಲಿ ಟಾಸ್ ಗೆಲ್ಲುವುದು ಅತ್ಯಂತ ಮುಖ್ಯ. ದುಬೈನ ಪಿಚ್‌ನಲ್ಲಿ ಗುರಿ ಬೆನ್ನಟ್ಟುವುದು ಸುಲಭವಾಗಿದೆ ಎಂಬುದು ಇತಿಹಾಸ ಸಾಕ್ಷಿಯಾಗಿದೆ. ಹಿಂದಿನ ಪಂದ್ಯಗಳಲ್ಲಿ ಗುರಿ ಬೆನ್ನಟ್ಟಿದ ತಂಡಗಳು ಹೆಚ್ಚಾಗಿ ಗೆದ್ದಿವೆ. ಆದ್ದರಿಂದ, ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡುವುದು ಒಳ್ಳೆಯ ತಂತ್ರವಾಗಿದೆ. ಈ ಪಂದ್ಯದ ಫಲಿತಾಂಶ ಟಾಸ್‌ನ ಮೇಲೆ ಅವಲಂಬಿತವಾಗಿದೆ.

Asia cup 2025: ದುಬೈನಲ್ಲಿ ಟಾಸ್ ಸೋತವರು ಪಂದ್ಯ ಸೋಲುವುದು ಖಚಿತ
suryakumar yadav
ಪೃಥ್ವಿಶಂಕರ
|

Updated on: Sep 14, 2025 | 5:23 PM

Share

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಏಷ್ಯಾಕಪ್ (Asia Cup 2025) ಪಂದ್ಯಕ್ಕೆ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯವಹಿಸುತ್ತಿದೆ. ಈ ಪಂದ್ಯದಲ್ಲಿ ಜಯ ಗಳಿಸುವ ತಂಡಕ್ಕೆ ಸೂಪರ್ 4 ಸುತ್ತಿಗೆ ಟಿಕೆಟ್ ಖಚಿತವಾಗಲಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿನ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿವೆ. ಈ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಆದಾಗ್ಯೂ ದುಬೈ ಮೈದಾನದಲ್ಲಿ ಪಂದ್ಯ ಗೆಲ್ಲಬೇಕೆಂದರೆ ಟಾಸ್ ಗೆಲ್ಲುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಟಾಸ್ ಗೆದ್ದ ತಂಡವು ದುಬೈನಲ್ಲಿ ಪ್ರಾಬಲ್ಯ ಸಾಧಿಸುತ್ತದೆ. ದುಬೈನಲ್ಲಿ ಈ ಎರಡೂ ತಂಡಗಳ ನಡುವಿನ ಟಿ20 ಪಂದ್ಯದ ಇತಿಹಾಸವು ಕೂಡ ಇದನ್ನೇ ಹೇಳುತ್ತದೆ.

ಟಾಸ್ ಗೆದ್ದವರಿಗೆ ಮೇಲುಗೈ

ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇಲ್ಲಿಯವರೆಗೆ 3 ಟಿ20 ಪಂದ್ಯಗಳು ನಡೆದಿದ್ದು, ಮೂರರಲ್ಲಿಯೂ ಗುರಿಯನ್ನು ಬೆನ್ನಟ್ಟಿದ ತಂಡ ಗೆದ್ದಿದೆ. 2022 ರಲ್ಲಿ ನಡೆದ ಏಷ್ಯಾಕಪ್‌ನಲ್ಲಿ, ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದಿತು. ಮುಂದಿನ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು. 2021 ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ, ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಇದರರ್ಥ ದುಬೈನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು ಯಾವಾಗಲೂ ಸೋಲಿಗೆ ಕೊರಳೊಡ್ಡಿದೆ. ಇದೇ ಕಾರಣದಿಂದ 2025 ರ ಏಷ್ಯಾಕಪ್‌ನಲ್ಲಿ ಯಾವುದೇ ತಂಡ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದೆ. ಅಂದಹಾಗೆ, ಇದು ಏಷ್ಯಾಕಪ್ ಬಗ್ಗೆ ಮಾತ್ರವಲ್ಲ, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಕೊನೆಯ 8 ಪಂದ್ಯಗಳಲ್ಲಿ, ಕಳೆದ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಚೇಸಿಂಗ್ ತಂಡವೇ ಗೆದ್ದಿದೆ.

IND vs PAK: ಭಾರತ- ಪಾಕ್ ತಂಡಗಳ ನಡುವಿನ ಈ 4 ವಿವಾದಗಳು ನಿಮಗೆ ನೆನಪಿವೆಯಾ?

ದುಬೈನಲ್ಲಿ ಗುರಿ ಬೆನ್ನಟ್ಟುವುದು ಸುಲಭ

ದುಬೈನಲ್ಲಿ ಚೇಸಿಂಗ್ ಮಾಡುವುದು ಏಕೆ ಸುಲಭ, ಇದು ಒಂದು ದೊಡ್ಡ ಪ್ರಶ್ನೆಯಾಗಿದೆ. ದುಬೈ ಪಿಚ್ ಆರಂಭದಲ್ಲಿ ಸ್ವಲ್ಪ ನಿಧಾನವಾಗಿರುತ್ತದೆ, ಇದರಿಂದಾಗಿ ಚೆಂಡು ನಿಂತು ಬರುತ್ತದೆ. ಇದರಿಂದಾಗಿ ಬ್ಯಾಟ್ಸ್‌ಮನ್‌ಗಳಿಗೆ ಬಿಗ್ ಶಾಟ್‌ಗಳನ್ನು ಆಡುವುದು ಸುಲಭವಲ್ಲ. ನಂತರ, ಹವಾಮಾನ ತಣ್ಣಗಾಗುತ್ತಿದ್ದಂತೆ, ಪಿಚ್ ವೇಗವಾಗುತ್ತದೆ ಮತ್ತು ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ, ಶಾಟ್‌ಗಳನ್ನು ಆಡಲು ಸುಲಭವಾಗುತ್ತದೆ. ಹೀಗಾಗಿ ಈ ಪಂದ್ಯದಲ್ಲಿ ಯಾರು ಟಾಸ್ ಗೆಲ್ಲುತ್ತಾರೋ ಅವರು ಅರ್ಧ ಪಂದ್ಯ ಗೆದ್ದಂತೆ ಎಂದರೆ ತಪ್ಪಾಗಲಾರದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು