Asia cup 2025: ಟೀಂ ಇಂಡಿಯಾವನ್ನು ಹೊಗಳಿದ ಪಾಕ್ ಮಾಜಿ ನಾಯಕ ವಾಸಿಮ್ ಅಕ್ರಮ್
India vs Pakistan Asia Cup 2025: ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ನಿರೀಕ್ಷಿತ ಪಂದ್ಯಕ್ಕೂ ಮುನ್ನ, ಮಾಜಿ ಪಾಕಿಸ್ತಾನಿ ನಾಯಕ ವಾಸಿಂ ಅಕ್ರಮ್ ಭಾರತ ತಂಡದ ಆಟವನ್ನು ಹೊಗಳಿದ್ದಾರೆ. ಅವರು ಭಾರತೀಯ ಆಟಗಾರರ ನಿರ್ಭಯತೆ ಮತ್ತು ದೇಶೀಯ ಟಿ20 ಲೀಗ್‌ನ ಪ್ರಭಾವವನ್ನು ಎತ್ತಿ ತೋರಿಸಿದ್ದಾರೆ. ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಕೌಶಲ್ಯವನ್ನು ಅವರು ವಿಶೇಷವಾಗಿ ಪ್ರಶಂಸಿಸಿದ್ದಾರೆ. ಅಕ್ರಮ್ ಪಾಕಿಸ್ತಾನ ತಂಡದ ಆತ್ಮವಿಶ್ವಾಸದ ಬಗ್ಗೆಯೂ ಮಾತನಾಡಿದ್ದಾರೆ.

ಏಷ್ಯಾಕಪ್‌ನಲ್ಲಿ (Asia Cup 2025) ಭಾರತ ತಂಡವು ತನ್ನ ಎರಡನೇ ಪಂದ್ಯವನ್ನು ಸೆಪ್ಟೆಂಬರ್ 14 ರಂದು ಪಾಕಿಸ್ತಾನ ವಿರುದ್ಧ (India vs Pakistan) ಆಡಲಿದೆ. ಎರಡೂ ತಂಡಗಳು ಈ ಪಂದ್ಯಕ್ಕೆ ಸಜ್ಜಾಗಿವೆ. ಆದರೆ ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮಾಜಿ ನಾಯಕ ವಾಸಿಮ್ ಅಕ್ರಮ್ ಟೀಂ ಇಂಡಿಯಾ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಕ್ರಮ್ ಸೋನಿ ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಾ, ಟೀಂ ಇಂಡಿಯಾವು ಪ್ರಸ್ತುತ ನಿರ್ಭಯವಾಗಿ ಕ್ರಿಕೆಟ್ ಆಡುತ್ತಿದೆ, ಇದರಿಂದಾಗಿ ಅದು ಎದುರಾಳಿ ತಂಡದ ಮೇಲೆ ಪ್ರಾಬಲ್ಯ ಸಾಧಿಸಿದೆ. ಯುಎಇ ವಿರುದ್ಧವೇ ಅದರ ನಿದರ್ಶನವನ್ನು ನಾವು ನೋಡಿದ್ದೇವೆ ಎಂದಿದ್ದಾರೆ. ಇದ ಮಾತ್ರವಲ್ಲದೆ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರನ್ನು ಅಕ್ರಮ್ ಹೊಗಳಿ ಮಾತನಾಡಿದ್ದಾರೆ.
ವಾಸಿಂ ಅಕ್ರಮ್ ಹೇಳಿದ್ದೇನು?
‘ಸೋನಿ ಸ್ಪೋರ್ಟ್ಸ್‌ನಲ್ಲಿ ಮಾತನಾಡಿರುವ ಅಕ್ರಮ್, ‘ಟೀಂ ಇಂಡಿಯಾ ಆಟಗಾರರ ಮನಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ಅವರು ನಿರ್ಭಯವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಇದು ಇದ್ದಕ್ಕಿದ್ದಂತೆ ಸಂಭವಿಸಿಲ್ಲ, ಬದಲಿಗೆ ಒಂದು ಪ್ರಕ್ರಿಯೆಯ ಭಾಗವಾಗಿ ನಡೆಯುತ್ತಿದೆ. ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ನಡೆಯುವ ಟಿ20 ಪಂದ್ಯಗಳು ಅತ್ಯಂತ ಅದ್ಭುತ ರೀತಿಯಲ್ಲಿ ನಡೆಯುತ್ತವೆ. ಆಟಗಾರರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ ಮತ್ತು ಈ ಕ್ರಿಕೆಟಿಗರು ಟೀಂ ಇಂಡಿಯಾಕ್ಕೆ ಬಂದಾಗ ಅವರು ಅದ್ಭುತ ಪ್ರದರ್ಶನ ನೀಡುತ್ತಾರೆ.
Asia cup 2025: ದುಬೈನಲ್ಲಿ ಟಾಸ್ ಸೋತವರು ಪಂದ್ಯ ಸೋಲುವುದು ಖಚಿತ
ಅಭಿಷೇಕ್ ಅವರನ್ನು ಶ್ಲಾಘಿಸಿದ ಅಕ್ರಮ್
ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರನ್ನು ಹೊಗಳಿದ ಅವರು, ‘ಈ ಆಟಗಾರ ಬ್ಯಾಟಿಂಗ್ ಮಾಡುವ ರೀತಿ ಅದ್ಭುತವಾಗಿದೆ. ಟಿ20ಐನಲ್ಲಿ ಅವರ ಸ್ಟ್ರೈಕ್ ರೇಟ್ 190 ಕ್ಕಿಂತ ಹೆಚ್ಚಿದೆ. ಅವರು ವೇಗವಾಗಿ ರನ್ ಗಳಿಸುತ್ತಾರೆ. ಇದಕ್ಕೆ ಕಾರಣ ಐಪಿಎಲ್ ಮತ್ತು ಭಾರತದ ದೇಶೀಯ ಕ್ರಿಕೆಟ್ ಎಂದರು. ಇದೇ ವೇಳೆ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರು, ವಾಸಿಮ್ ಅಕ್ರಮ್ ಬಳಿ, ‘ಪಾಕಿಸ್ತಾನ ತಂಡವು ಭಾರತ ತಂಡದ ವಿರುದ್ಧ ಗೆಲ್ಲುವ ವಿಶ್ವಾಸ ಹೊಂದಿದೆಯೇ ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಾಸಿಂ ಅಕ್ರಮ್, ಪಾಕಿಸ್ತಾನ ತಂಡವು ಈ ಸಮಯದಲ್ಲಿ ಉತ್ತಮ ಕ್ರಿಕೆಟ್ ಆಡುತ್ತಿದೆ. ಈ ತಂಡದ ಆಟಗಾರರು ವೈಯಕ್ತಿಕ ಇತಾಸಕ್ತಿಗಾಗಿ ಆಡುತ್ತಿಲ್ಲ. ಹಾಗೆಯೇ ಆಟಗಾರರು ಸರಾಸರಿಯ ಬಗ್ಗೆಯೂ ಚಿಂತಿಸುವುದಿಲ್ಲ. ಅದಕ್ಕಾಗಿಯೇ ಪಾಕಿಸ್ತಾನ ತಂಡವು ಪ್ರತಿ ಪಂದ್ಯದಲ್ಲೂ ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
