Ranji Trophy 2022: ಈ ಬಾರಿ ರಣಜಿ ಆಡುವ ಆಟಗಾರರಿಗೆ ಬಿಸಿಸಿಐ ನೀಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ?: ಇಲ್ಲಿದೆ ನೋಡಿ

ಮೂಲಗಳ ಪ್ರಕಾರ, 2022ರ ರಣಜಿ ಟ್ರೋಫಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರನಿಗೆ 2 ಲಕ್ಷದಿಂದ ರಿಂದ 2.5 ಲಕ್ಷ ರೂ. ವರೆಗೆ ಪಂದ್ಯದ ಸಂಭಾವನೆಯನ್ನು ನೀಡುವ ಬಿಸಿಸಿಐ ಮುಂದಾಗಿದೆ.

Ranji Trophy 2022: ಈ ಬಾರಿ ರಣಜಿ ಆಡುವ ಆಟಗಾರರಿಗೆ ಬಿಸಿಸಿಐ ನೀಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ?: ಇಲ್ಲಿದೆ ನೋಡಿ
Ranji Trophy 2022 BCCI]

ಭಾರದಲ್ಲಿ ಕೊರೊನಾ ವೈರಸ್‌ (Corona virus) ಅಲೆ ಮಿತಿ ಮೀರಿದ ಪರಿಣಾಮ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2020ರ ರಣಜಿ ಟ್ರೋಫಿ ಟೂರ್ನಿಯನ್ನು ರದ್ದುಗೊಳಿಸಿತ್ತು. ಸದ್ಯ ಮುಂದಿನ 2022ರ ಆವೃತ್ತಿಯ ರಣಜಿ ಟ್ರೋಫಿ (Ranji Trophy 2022) ಟೂರ್ನಿಯು ಜನವರಿ 5 ರಿಂದ ಆರಂಭವಾಗಲಿದೆ. ಕೊರೊನಾ ಹಿನ್ನಲೆಯಲ್ಲಿ ಬಿಸಿಸಿಐ ಸಾಕಷ್ಟು ಮುಂಜಾಗ್ರತೆ ಕ್ರಮಗಳೊಂದಿಗೆ ಟೂರ್ನಿಯನ್ನು ಆಯೋಜಿಸಲು ನಿರ್ಧಾರ ಮಾಡಿದೆ. ಕಠಿಣ ಕ್ವಾರಂಟೈನ್, ಸಹಾಯಕ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೆಲವು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಇದರ ಜೊತೆಗೆ ಬಿಸಿಸಿಐ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿಯುವ ಆಟಗಾರರ ಸಂಭಾವನೆಯನ್ನೂ ಫೈನಲ್ ಲಿಸ್ಟ್ ಮಾಡಿದೆ.

ಮೂಲಗಳ ಪ್ರಕಾರ, 2022ರ ರಣಜಿ ಟ್ರೋಫಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರನಿಗೆ 2 ಲಕ್ಷದಿಂದ ರಿಂದ 2.5 ಲಕ್ಷ ರೂ. ವರೆಗೆ ಪಂದ್ಯದ ಸಂಭಾವನೆಯನ್ನು ನೀಡುವ ಬಿಸಿಸಿಐ ಮುಂದಾಗಿದೆ. ಅಷ್ಟೇ ಅಲ್ಲದೆ ಕಳೆದ ವರ್ಷ ಕೊರೊನಾ ಕಾರಣದಿಂದ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿಯಲು ಸಾಧ್ಯವಾಗದ ಆಟಗಾರರಿಗೆ ಕನಿಷ್ಠ ಶೇ. 50 ರಷ್ಟು ಪರಿಹಾರ ನೀಡುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ.

ಈ ಮೊದಲು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ನವೆಂಬರ್ 16ರಿಂದ ಫೆಬ್ರವರಿ 19ರವರೆಗೆ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿತ್ತು. ಆದರೆ ರಣಜಿ ಟೂರ್ನಿಗೂ ಮುಂಚೆ ಸೀಮಿತ ಓವರ್‌ಗಳ ಸರಣಿಯನ್ನು ಆಯೋಜಿಸಲು ಚಿಂತನೆ ನಡೆಸಿ ಬಿಸಿಸಿಐ ಅಂತಿಮವಾಗಿ ತೀರ್ಮಾನಿಸಿತು. ಹೀಗಾಗಿ ಜನವರಿ 05ರಿಂದ ಮಾರ್ಚ್‌ 20ರವರೆಗೆ ರಣಜಿ ಕ್ರಿಕೆಟ್ ಟೂರ್ನಿ ನಡೆಯಲಿದೆ.

ಇದೇ ವರ್ಷ ಅಕ್ಟೋಬರ್‌ 27 ರಿಂದ ಮಹಿಳೆಯರ 19 ವಯೋಮಿತಿ ಟೂರ್ನಿ ಟೂರ್ನಿ ಆರಂಭವಾಗಲಿವೆ. ನವೆಂಬರ್‌ 4 ರಿಂದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಚಾಂಪಿಯನ್‌ಷಿಪ್‌ ಟೂರ್ನಿಯೊಂದಿಗೆ ಭಾರತದ ಪುರುಷರ ದೇಶಿ ಕ್ರಿಕೆಟ್‌ ಟೂರ್ನಿ ಆರಂಭವಾಗಲಿದೆ. ಇದಾದ ಬಳಿಕ ಡಿಸೆಂಬರ್‌ 8 ರಿಂದ ವಿಜಯ್‌ ಹಝಾರೆ ಟ್ರೋಫಿ ಏಕದಿನ ಚಾಂಪಿಯನ್​ಶಿಪ್‌ ನಡೆಸಲು ತೀರ್ಮಾನಿಸಲಾಗಿದೆ.

ಕೋವಿಡ್ 19 ಪಿಡುಗಿನಿಂದಾಗಿ ದೇಶಿ ಕ್ರಿಕೆಟ್‌ ಟೂರ್ನಿ ಆಯೋಜಿಸಲು ಬಿಸಿಸಿಐ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ದೇಶಿ ಟೂರ್ನಿಯನ್ನು ಆಯೋಜಿಸಲು ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕೋವಿಡ್‌-19 ಮುಂಜಾಗ್ರತಾ ಕ್ರಮವಾಗಿ ದೇಶಿ ಕ್ರಿಕೆಟ್‌ ಆವೃತ್ತಿಯಲ್ಲಿ ಪ್ರತಿಯೊಂದು ತಂಡವೂ ಕನಿಷ್ಠ 20 ಆಟಗಾರರು ಹಾಗೂ 10 ಮಂದಿ ಸಹಾಯಕ ಸಿಬ್ಬಂದಿಯನ್ನು ಹೊಂದಿರಬೇಕೆಂದು ತಿಳಿಸಿದೆ. ತಂಡದ ಫಿಜಿಯೋಥೆರಪಿಸ್ಟ್‌ ನಿಂದ ಪ್ರತ್ಯೇಕವಾಗಿರುವ ವೈದ್ಯರು, 10 ಮಂದಿ ಸಹಾಯಕ ಸಿಬ್ಬಂದಿಯಲ್ಲಿ ಒಬ್ಬರಾಗಿರುತ್ತಾರೆ.

India vs England: ‘ಇದು ಟೆಸ್ಟ್ ಕ್ರಿಕೆಟ್ ಅಂತ್ಯದ ಆರಂಭ’: 5ನೇ ಟೆಸ್ಟ್ ರದ್ದಾಗಿದ್ದಕ್ಕೆ ಇನ್ನೂ ನಿಂತಿಲ್ಲ ಆಂಗ್ಲರ ಟೀಕೆಗಳು

Emma Raducanu: 18 ವರ್ಷದ ಮುದ್ದು ಮುಖದ ಚೆಲುವೆ ಗ್ರ್ಯಾನ್ ಸ್ಲಾಮ್ ಚಾಂಪಿಯನ್: ಇತಿಹಾಸ ರಚಿಸಿದ ಎಮ್ಮಾ ರಾಡುಕಾನು

(Ranji Trophy 2022 Here is The match fees in Ranji Trophy for each player)

Click on your DTH Provider to Add TV9 Kannada