Ranji Trophy 2024: ಮೂವರ ಶತಕ: ಬೃಹತ್ ಮೊತ್ತ ಪೇರಿಸಿದ ಕರ್ನಾಟಕ

| Updated By: ಝಾಹಿರ್ ಯೂಸುಫ್

Updated on: Jan 22, 2024 | 9:59 AM

179 ಎಸೆತಗಳನ್ನು ಎದುರಿಸಿದ ಮಯಾಂಕ್ ಅಗರ್ವಾಲ್ 10 ಫೋರ್​ಗಳೊಂದಿಗೆ 114 ರನ್​ ಬಾರಿಸಿದರು. ಆ ಬಳಿಕ ಬಂದ ದೇವದತ್ ಪಡಿಕ್ಕಲ್ 143 ಎಸೆತಗಳಲ್ಲಿ 13 ಫೋರ್​ಗಳೊಂದಿಗೆ 103 ರನ್ ಸಿಡಿಸಿದರು. ಇನ್ನು 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಿಕಿನ್ ಜೋಸ್ 215 ಎಸೆತಗಳಲ್ಲಿ 6 ಫೋರ್​ಗಳೊಂದಿಗೆ 107 ರನ್​ ಗಳಿಸಿದರು.

Ranji Trophy 2024: ಮೂವರ ಶತಕ: ಬೃಹತ್ ಮೊತ್ತ ಪೇರಿಸಿದ ಕರ್ನಾಟಕ
Mayank Agarwal
Follow us on

ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ (Ranji Trophy 2024) ಪಂದ್ಯದಲ್ಲಿ ಗೋವಾ ವಿರುದ್ಧ ಕರ್ನಾಟಕ ತಂಡ (Karnataka Team) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗೋವಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಗೋವಾ ತಂಡವು 321 ರನ್ ಪೇರಿಸಿ ಆಲೌಟ್ ಆದರು. ಕರ್ನಾಟಕ ಪರ ವಾಸುಕಿ ಕೌಶಿಕ್, ಎಂ ವೆಂಕಟೇಶ್ ಹಾಗೂ ರೋಹಿತ್ ಕುಮಾರ್ ತಲಾ 3 ವಿಕೆಟ್ ಕಬಳಿಸಿದರು.

ಇದಾದ ಬಳಿಕ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು. 179 ಎಸೆತಗಳನ್ನು ಎದುರಿಸಿದ ಮಯಾಂಕ್ 10 ಫೋರ್​ಗಳೊಂದಿಗೆ 114 ರನ್​ ಬಾರಿಸಿದರು. ಈ ಮೂಲಕ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

ಆ ಬಳಿಕ ಬಂದ ದೇವದತ್ ಪಡಿಕ್ಕಲ್ 143 ಎಸೆತಗಳಲ್ಲಿ 13 ಫೋರ್​ಗಳೊಂದಿಗೆ 103 ರನ್ ಸಿಡಿಸಿದರು. ಇನ್ನು 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಿಕಿನ್ ಜೋಸ್ 215 ಎಸೆತಗಳಲ್ಲಿ 6 ಫೋರ್​ಗಳೊಂದಿಗೆ 107 ರನ್​ ಬಾರಿಸಿದರು. ಈ ಮೂವರ ಶತಕದ ನೆರವಿನಿಂದ ಕರ್ನಾಟಕ ತಂಡವು 9 ವಿಕೆಟ್ ನಷ್ಟಕ್ಕೆ 498 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು.

177 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿರುವ ಗೋವಾ ತಂಡವು 27 ಓವರ್​ಗಳ ಮುಕ್ತಾಯದ ವೇಳೆಗೆ 93 ರನ್​ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಸದ್ಯ ನಾಲ್ಕನೇ ದಿನದಾಟ ಚಾಲ್ತಿಯಲ್ಲಿದ್ದು, ಇಂದು ಗೋವಾ ತಂಡವನ್ನು ಆಲೌಟ್ ಮಾಡಿದರೆ ಅಲ್ಪ ಗುರಿಯೊಂದಿಗೆ ಈ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶ ಕರ್ನಾಟಕ ಮುಂದಿರಲಿದೆ.

ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ನಿಕಿನ್ ಜೋಸ್ , ಮನೀಶ್ ಪಾಂಡೆ , ಶುಭಾಂಗ್ ಹೆಗ್ಡೆ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಡಿ. ನಿಶ್ಚಲ್ , ರೋಹಿತ್ ಕುಮಾರ್ , ವಾಸುಕಿ ಕೌಶಿಕ್ , ವಿಜಯ್ ಕುಮಾರ್ ವೈಶಾಕ್ , ಮುರಳೀಧರ ವೆಂಕಟೇಶ್.

ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ

ಗೋವಾ ಪ್ಲೇಯಿಂಗ್ 11: ಇಶಾನ್ ಗಡೇಕರ್ , ಸುಯಶ್ ಪ್ರಭುದೇಸಾಯಿ , ಕೃಷ್ಣಮೂರ್ತಿ ಸಿದ್ಧಾರ್ಥ್ (ವಿಕೆಟ್ ಕೀಪರ್) , ಸ್ನೇಹಲ್ ಕೌಥಂಕರ್ , ದರ್ಶನ್ ಮಿಸಾಲ್ (ನಾಯಕ) , ದೀಪರಾಜ್ ಗಾಂವ್ಕರ್ , ಅರ್ಜುನ್ ತೆಂಡೂಲ್ಕರ್ , ಮೋಹಿತ್ ರೆಡ್ಕರ್ , ಹೆರಾಂಬ್ ಪರಬ್ , ಸಮರ್ ಶ್ರವಣ್ ದುಭಾಷಿ , ಫೆಲಿಕ್ಸ್ ಅಲೆಮಾವೋ.

 

Published On - 9:59 am, Mon, 22 January 24