VIDEO: ಮೈದಾನದಲ್ಲಿ ಮ್ಯಾಜಿಕ್: ವಿಕೆಟ್ ಪಡೆದು ರಂಜಿಸಿದ ಸ್ಪಿನ್ ಜಾದೂಗಾರ

Paarl Royals vs MI Cape Town: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾರ್ಲ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. ಇದನ್ನು ಬೆನ್ನತ್ತಿದ ಎಂಐ ಕೇಪ್​ಟೌನ್ ತಂಡವು 18.2 ಓವರ್​ಗಳಲ್ಲಿ 103 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾರ್ಲ್ ರಾಯಲ್ಸ್ ತಂಡ 59 ರನ್​ಗಳ ಭರ್ಜರಿ ಜಯ ಸಾಧಿಸಿತು.

VIDEO: ಮೈದಾನದಲ್ಲಿ ಮ್ಯಾಜಿಕ್: ವಿಕೆಟ್ ಪಡೆದು ರಂಜಿಸಿದ ಸ್ಪಿನ್ ಜಾದೂಗಾರ
Tabraiz Shamsi
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 22, 2024 | 8:21 AM

ಸೌತ್ ಆಫ್ರಿಕಾ ಟಿ20 ಲೀಗ್ (SA20) ​ ಹಲವು ಕಾರಣಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ. ಒಂದೆಡೆ ಅದ್ಭುತ ಬ್ಯಾಟಿಂಗ್​ಗೆ ಪಂದ್ಯಗಳು ಸಾಕ್ಷಿಯಾದರೆ, ಮತ್ತೊಂದೆಡೆ ಬೌಲರ್​ಗಳ ಪರಾಕ್ರಮ ಮೆರೆಯುತ್ತಿದ್ದಾರೆ. ಇನ್ನೊಂದೆಡೆ ಫೀಲ್ಡರ್​ಗಳು ಅತ್ಯದ್ಭುತ ಕ್ಯಾಚ್​ಗಳ ಮೂಲಕ ಪ್ರೇಕ್ಷಕರನ್ನು ನಿಬ್ಬೆರಗಾಗಿಸುತ್ತಿದ್ದಾರೆ. ಇದೀಗ ಮೈದಾನದಲ್ಲೇ ಮ್ಯಾಜಿಕ್ ತೋರಿಸುವ ಮೂಲಕ ತಬ್ರೇಝ್ ಶಂಸಿ ಕೂಡ ರಂಗ ಪ್ರವೇಶಿಸಿದ್ದಾರೆ.

ಬೋಲ್ಯಾಂಡ್​ ಪಾರ್ಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾರ್ಲ್ ರಾಯಲ್ಸ್ ಹಾಗೂ ಎಂಐ ಕೇಪ್​ಟೌನ್ ತಂಡಗಳು ಮುಖಾಮುಖಿಯಾಗಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾರ್ಲ್​ ರಾಯಲ್ಸ್ ತಂಡವು ಎಂಐ ಕೇಪ್​ಟೌನ್ ತಂಡಕ್ಕೆ 164 ರನ್​ಗಳ ಗುರಿ ನೀಡಿತ್ತು.

ಈ ಗುರಿಯನ್ನು ಬೆನ್ನತ್ತಿದ ಕೇಪ್​ಟೌನ್ ಪಡೆಗೆ ಆರಂಭಿಕ ಆಘಾತ ನೀಡುವಲ್ಲಿ ರಾಯಲ್ಸ್ ಯಶಸ್ವಿಯಾಗಿತ್ತು. ಅಲ್ಲದೆ ಕೇವಲ 52 ಎಸೆತಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಎಂಐ ಕೇಪ್​ಟೌನ್ ತಂಡಕ್ಕೆ 14ನೇ ಓವರ್​ನಲ್ಲಿ ತಬ್ರೇಝ್ ಶಂಸಿ ಬ್ಯಾಕ್ ಟು ಬ್ಯಾಕ್ ಶಾಕ್ ನೀಡಿದರು. 4ನೇ ಎಸೆತಗಳಲ್ಲಿ ಸ್ಯಾಮ್ ಕರನ್ ವಿಕೆಟ್ ಕಬಳಿಸಿದ ಶಂಸಿ, 6ನೇ ಎಸೆತದಲ್ಲಿ ಡೇಂಜರಸ್ ಕೀರನ್ ಪೊಲಾರ್ಡ್​ರನ್ನು ಶೂನ್ಯಕ್ಕೆ ಔಟ್ ಮಾಡಿದರು.

ವಿಶೇಷ ಎಂದರೆ ಈ ಎರಡು ವಿಕೆಟ್​​ಗಳನ್ನು ಕಬಳಿಸಿದ ಬಳಿಕ ತಬ್ರೇಝ್ ಶಂಸಿ ತಮ್ಮ ಕೈಚಳಕ ತೋರಿಸಿದ್ದಾರೆ. ಅದು ಕೂಡ ಮೈದಾನದಲ್ಲೇ ಮ್ಯಾಜಿಕ್ ಮಾಡುವ ಮೂಲಕ ಎಂಬುದು ವಿಶೇಷ.

ಸ್ಯಾಮ್ ಕರನ್ ವಿಕೆಟ್ ಸಿಗುತ್ತಿದ್ದಂತೆ ಸಂಭ್ರಮಿಸಿದ ಶಂಸಿ ತಮ್ಮ ಕೈಯಲ್ಲಿದ್ದ ಬಟ್ಟೆ ಬಣ್ಣವನ್ನು ಬದಲಿಸಿ ಪ್ರೇಕ್ಷಕರನ್ನು ರಂಜಿಸಿದರು. ಇದೀಗ ತಬ್ರೇಝ್ ಶಂಸಿ ಅವರ ಮ್ಯಾಜಿಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೆದ್ದು ಬೀಗಿದ ರಾಯಲ್ಸ್​:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾರ್ಲ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. ಇದನ್ನು ಬೆನ್ನತ್ತಿದ ಎಂಐ ಕೇಪ್​ಟೌನ್ ತಂಡವು 18.2 ಓವರ್​ಗಳಲ್ಲಿ 103 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾರ್ಲ್ ರಾಯಲ್ಸ್ ತಂಡ 59 ರನ್​ಗಳ ಭರ್ಜರಿ ಜಯ ಸಾಧಿಸಿತು.

ಪಾರ್ಲ್ ರಾಯಲ್ಸ್ ಪ್ಲೇಯಿಂಗ್ 11: ಜೇಸನ್ ರಾಯ್ , ಜೋಸ್ ಬಟ್ಲರ್ (ವಿಕೆಟ್ ಕೀಪರ್) , ವಿಹಾನ್ ಲುಬ್ಬೆ , ಡೇವಿಡ್ ಮಿಲ್ಲರ್ (ನಾಯಕ) , ಮಿಚೆಲ್ ವ್ಯಾನ್ ಬ್ಯೂರೆನ್ , ಫ್ಯಾಬಿಯನ್ ಅಲೆನ್ , ಆಂಡಿಲ್ ಫೆಹ್ಲುಕ್ವಾಯೊ , ಜೋರ್ನ್ ಫಾರ್ಚುಯಿನ್ , ಲುಂಗಿ ಎನ್ಗಿಡಿ , ತಬ್ರೇಝ್ ಶಂಸಿ, ಒಬೆಡ್ ಮೆಕಾಯ್.

ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ

ಎಂಐ ಕೇಪ್​ಟೌನ್ ಪ್ಲೇಯಿಂಗ್ 11: ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ , ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ಡೆವಾಲ್ಡ್ ಬ್ರೆವಿಸ್ , ಲಿಯಾಮ್ ಲಿವಿಂಗ್​ಸ್ಟೋನ್ , ಸ್ಯಾಮ್ ಕರನ್ , ಕಾನರ್ ಎಸ್ಟರ್ಹ್ಯೂಜೆನ್ , ಕೀರಾನ್ ಪೊಲಾರ್ಡ್ (ನಾಯಕ) , ಜಾರ್ಜ್ ಲಿಂಡೆ , ಕಗಿಸೊ ರಬಾಡಾ , ಥಾಮಸ್ ಕಬರ್ , ನುವಾನ್ ತುಷಾರಾ.

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ