ನ್ಯೂಝಿಲೆಂಡ್ ಪರ ಶತಕ ಸಿಡಿಸಿ ಮಿಂಚಿದ ಭಾರತೀಯ
New Zealand U19 vs Nepal U19: 303 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡಕ್ಕೆ ಅರ್ಜುನ್ ಕುಮಲ್ ಉತ್ತಮ ಆರಂಭ ಒದಗಿಸಿದ್ದರು. 104 ಎಸೆತಗಳನ್ನು ಎದುರಿಸಿದ ಕುಮಲ್ 12 ಫೋರ್ಗಳೊಂದಿಗೆ 90 ರನ್ ಬಾರಿಸಿದ್ದರು. ಆದರೆ ಇತರೆ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ನ (U19 World Cup 2024) 7ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈಸ್ಟ್ ಲಂಡನ್ನ ಬಫಲೊ ಪಾರ್ಕ್ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಇನಿಂಗ್ಸ್ ಆರಂಭಿಸಿದ ಟಾಮ್ ಜಾನ್ಸ್ (33) ಹಾಗೂ ಲೂಕ್ ವಾಟ್ಸನ್ (14) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ನೇಹಿತ್ ರೆಡ್ಡಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು.
ಅತ್ಯುತ್ತಮ ಶಾಟ್ಗಳ ಮೂಲಕ ಗಮನ ಸೆಳೆದ ಸ್ನೇಹಿತ್ 125 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 147 ರನ್ ಬಾರಿಸಿದರು. ಮತ್ತೊಂದೆಡೆ ನಾಯಕ ಆಸ್ಕರ್ ಜಾಕ್ಸನ್ 75 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ನ್ಯೂಝಿಲೆಂಡ್ ಅಂಡರ್ 19 ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿತು.
303 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡಕ್ಕೆ ಅರ್ಜುನ್ ಕುಮಲ್ ಉತ್ತಮ ಆರಂಭ ಒದಗಿಸಿದ್ದರು. 104 ಎಸೆತಗಳನ್ನು ಎದುರಿಸಿದ ಕುಮಲ್ 12 ಫೋರ್ಗಳೊಂದಿಗೆ 90 ರನ್ ಬಾರಿಸಿದ್ದರು. ಆದರೆ ಇತರೆ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಂತಿಮವಾಗಿ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 238 ರನ್ಗಳಿಸಿ ನೇಪಾಳ ಅಂಡರ್ 19 ತಂಡವು 64 ರನ್ಗಳಿಂದ ಸೋಲೊಪ್ಪಿಕೊಂಡಿತು.
ಭಾರತೀಯ ಮೂಲದ ಸ್ನೇಹಿತ್:
ನ್ಯೂಝಿಲೆಂಡ್ ಪರ ಆಡುತ್ತಿರುವ ಸ್ನೇಹಿತ್ ರೆಡ್ಡಿ ಆಂಧ್ರಪ್ರದೇಶದ ವಿಜಯವಾಡ ಮೂಲದವರು. ಇವರ ಕುಟುಂಬ ನ್ಯೂಝಿಲೆಂಡ್ನಲ್ಲಿ ನೆಲೆಸಿದ್ದು, ಅದರಂತೆ ಇದೀಗ 17 ವರ್ಷದ ಸ್ನೇಹಿತ್ ಕಿವೀಸ್ ಪರ ಅಂಡರ್-19 ವಿಶ್ವಕಪ್ ಆಡುತ್ತಿದ್ದಾರೆ. ಅಲ್ಲದೆ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿರುವ ಸ್ನೇಹಿತ್ ಮುಂದೊಂದು ದಿನ ನ್ಯೂಝಿಲೆಂಡ್ ಸೀನಿಯರ್ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ನ್ಯೂಝಿಲೆಂಡ್ U19 ಪ್ಲೇಯಿಂಗ್ 11: ಲ್ಯೂಕ್ ವ್ಯಾಟ್ಸನ್ , ಟಾಮ್ ಜೋನ್ಸ್ , ಸ್ನೇಹಿತ್ ರೆಡ್ಡಿ , ಆಲಿವರ್ ತೆವಾಟಿಯಾ , ಆಸ್ಕರ್ ಜಾಕ್ಸನ್ (ನಾಯಕ) , ಲಾಚ್ಲಾನ್ ಸ್ಟಾಕ್ಪೋಲ್ , ಝಾಕ್ ಕಮ್ಮಿಂಗ್ , ಅಲೆಕ್ಸ್ ಥಾಂಪ್ಸನ್ (ವಿಕೆಟ್ ಕೀಪರ್) , ಮ್ಯಾಟ್ ರೋವ್ , ಮೇಸನ್ ಕ್ಲಾರ್ಕ್ , ಇವಾಲ್ಡ್ ಸ್ಕ್ರೂಡರ್.
ಇದನ್ನೂ ಓದಿ: Rishabh Pant: ಟೀಮ್ ಇಂಡಿಯಾ ಜೊತೆ ಕಾಣಿಸಿಕೊಂಡ ರಿಷಭ್ ಪಂತ್
ನೇಪಾಳ U19 ಪ್ಲೇಯಿಂಗ್ 11: ಅರ್ಜುನ್ ಕುಮಾಲ್ , ಆಕಾಶ್ ತ್ರಿಪಾಠಿ , ದೇವ್ ಖಾನಲ್ (ನಾಯಕ) , ಉತ್ತಮ್ ಥಾಪಾ ಮಗರ್ (ವಿಕೆಟ್ ಕೀಪರ್) , ದೀಪಕ್ ಬೋಹರಾ , ದೀಪೇಶ್ ಕಾಂಡೇಲ್ , ದೀಪಕ್ ಬೋಹರಾ , ಗುಲ್ಸನ್ ಝಾ , ಸುಭಾಷ್ ಭಂಡಾರಿ , ತಿಲಕ್ ಭಂಡಾರಿ , ಆಕಾಶ್ ಚಂದ್.