Ranji Trophy 2024: ಅತ್ಯಲ್ಪ ಮೊತ್ತಕ್ಕೆ ಕರ್ನಾಟಕ ತಂಡ ಆಲೌಟ್

Tamil Nadu vs Karnataka: ತಮಿಳುನಾಡು ವಿರುದ್ಧದ ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕರ್ನಾಟಕ ತಂಡದ ಯುವ ಆಟಗಾರ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. 218 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 6 ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ 151 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

Ranji Trophy 2024: ಅತ್ಯಲ್ಪ ಮೊತ್ತಕ್ಕೆ ಕರ್ನಾಟಕ ತಂಡ ಆಲೌಟ್
Tamil Nadu vs Karnataka
Edited By:

Updated on: Feb 12, 2024 | 7:24 AM

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ತಮಿಳುನಾಡು ನಡುವಣ ರಣಜಿ ಪಂದ್ಯವು (Ranji Trophy 2024) ರಣರೋಚಕದತ್ತ ಸಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಪರ ದೇವದತ್ ಪಡಿಕ್ಕಲ್ (151) ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದ ನೆರವಿನಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್​ನಲ್ಲಿ 366 ರನ್ ಪೇರಿಸಿತು.

ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ತಮಿಳುನಾಡು ತಂಡವು ಕರ್ನಾಟಕ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 151 ರನ್​ಗಳಿಗೆ ಆಲೌಟ್ ಆಯಿತು. ಕರ್ನಾಟಕ ಪರ ವಿಜಯಕುಮಾರ್ ವೈಶಾಕ್ 4 ವಿಕೆಟ್ ಕಬಳಿಸಿದರೆ, ಶಶಿಕುಮಾರ್ 3 ವಿಕೆಟ್ ಪಡೆದು ಮಿಂಚಿದರು.

215 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕರಾದ ರವಿಕುಮಾರ್ ಸಮರ್ಥ್ (2) ಹಾಗೂ ಮಯಾಂಕ್ ಅಗರ್ವಾಲ್ (11) ಬೇಗನೆ ನಿರ್ಗಮಿಸಿದರು. ಇನ್ನು ದೇವದತ್ ಪಡಿಕ್ಕಲ್ 36 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.

ಅನುಭವಿ ಆಟಗಾರ ಮನೀಶ್ ಪಾಂಡೆ ಕೇವಲ 14 ರನ್​ಗಳಿಸಲಷ್ಟೇ ಶಕ್ತರಾದರು. ಪರಿಣಾಮ 88 ರನ್​ಗಳಿಸುವಷ್ಟರಲ್ಲಿ ಕರ್ನಾಟಕ ತಂಡವು 5 ವಿಕೆಟ್ ಕಳೆದುಕೊಂಡಿತು. ಅತ್ತ ಪಂದ್ಯದ ಮೇಲೆ ಹಿಡಿತ ಸಾಧಿಸಿದ ತಮಿಳುನಾಡು ಬೌಲರ್​ಗಳು ಕರ್ನಾಟಕ ತಂಡವನ್ನು ಕೇವಲ 139 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ತಮಿಳುನಾಡು ಅತ್ಯುತ್ತಮ ದಾಳಿ ಸಂಘಟಿಸಿದ ಅಜಿತ್ ರಾಮ್ 19.4 ಓವರ್​ಗಳಲ್ಲಿ ಕೇವಲ 61 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.

ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ ತಮಿಳುನಾಡು ತಂಡ 355 ರನ್​ಗಳ ಗುರಿ ಪಡೆದಿದೆ. ಅಲ್ಲದೆ 3ನೇ ದಿನದಾಟದ ಅಂತ್ಯಕ್ಕೆ  1 ವಿಕೆಟ್ ನಷ್ಟಕ್ಕೆ 36 ರನ್ ಕಲೆಹಾಕಿದೆ. ಇನ್ನು 2 ದಿನದಾಟಗಳು ಬಾಕಿಯಿದ್ದು ತಮಿಳುನಾಡು ತಂಡಕ್ಕೆ 319 ರನ್​ಗಳ ಅವಶ್ಯಕತೆಯಿದ್ದರೆ, ಕರ್ನಾಟಕ ತಂಡದ ಗೆಲುವಿಗೆ 9 ವಿಕೆಟ್​ಗಳ ಅಗತ್ಯತೆಯಿದೆ.

ತಮಿಳುನಾಡು ಪ್ಲೇಯಿಂಗ್ 11: ಸುರೇಶ್ ಲೋಕೇಶ್ವರ್ , ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್) , ಪ್ರದೋಶ್ ಪೌಲ್ , ಬಾಬಾ ಇಂದ್ರಜಿತ್ , ವಿಜಯ್ ಶಂಕರ್ , ವಿಮಲ್ ಖುಮಾರ್ , ಬೂಪತಿ ಕುಮಾರ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ (ನಾಯಕ) , ಎಸ್ ಅಜಿತ್ ರಾಮ್ , ಎಂ ಮುಹಮ್ಮದ್ , ಸಂದೀಪ್ ವಾರಿಯರ್.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿಯ ರಿಎಂಟ್ರಿ ಯಾವಾಗ? ಇಲ್ಲಿದೆ ಮಾಹಿತಿ

ಕರ್ನಾಟಕ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ನಿಕಿನ್ ಜೋಸ್ , ಮನೀಶ್ ಪಾಂಡೆ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಹಾರ್ದಿಕ್ ರಾಜ್ , ಕಿಶನ್ ಬೇಡರೆ , ಶಶಿ ಕುಮಾರ್ ಕೆ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.