INDU19 vs AUSU19: ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಸೋತ ಭಾರತಕ್ಕೆ ಸಿಕ್ಕ ಹಣವೆಷ್ಟು ಗೊತ್ತೇ?
Under-19 World Cup Winner Prize Money: ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ತನ್ನ ನಾಲ್ಕನೇ ವಿಶ್ವಕಪ್ ಅನ್ನು ಗೆದ್ದುಕೊಂಡಿದೆ. ಭಾರತವನ್ನು 79 ರನ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ 14 ವರ್ಷಗಳ ನಂತರ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಿತು. ಹಾಗಾದರೆ, ಅಂಡರ್-19 ವಿಶ್ವಕಪ್ ಗೆದ್ದ ಹಾಗೂ ರನ್ನರ್ ಅಪ್ ಆದ ತಂಡಕ್ಕೆ ಸಿಕ್ಕ ಮೊತ್ತವೆಷ್ಟು ನೋಡಿ.

8 ತಿಂಗಳೊಳಗೆ ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಭಾರತದ ಕನಸನ್ನು ಆಸ್ಟ್ರೇಲಿಯಾ (India vs Australia) ನುಚ್ಚುನೂರು ಮಾಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ನಂತರ ಇದೀಗ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಕೂಡ ಆಸ್ಟ್ರೇಲಿಯಾ ತಂಡ ಭಾರತವನ್ನು 79 ರನ್‌ಗಳಿಂದ ಸೋಲಿಸಿದೆ. ಶನಿವಾರ ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಭಾರಿ ಅಂತರದಿಂದ ಸೋಲಿಸಿ ಉದಯ್ ಸಹರಾನ್ ನಾಯಕತ್ವದಲ್ಲಿ ಅಮೋಘ ಆಟವಾಡುತ್ತಿದ್ದ ಟೀಮ್ ಇಂಡಿಯಾಕ್ಕೆ ಶಾಕ್ ನೀಡಿತು.
ಭಾರತವನ್ನು 79 ರನ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ 14 ವರ್ಷಗಳ ನಂತರ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 253 ರನ್ ಗಳಿಸಿತ್ತು, ಇದಕ್ಕೆ ಉತ್ತರವಾಗಿ ಭಾರತ ತಂಡ 174 ರನ್‌ಗಳಿಗೆ ಆಲೌಟ್ ಆಯಿತು. ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಇದು ಮೊದಲ ಸೋಲು, ಈ ಸೋಲು ಕೂಡ ಫೈನಲ್ ಪಂದ್ಯದಲ್ಲಿ ಬಂತು ಎಂದು ದುರಾದೃಷ್ಟಕರ.
ಭಾರತದ ವಿಶ್ವಕಪ್ ಕನಸಿಗೆ ಕೊಳ್ಳಿ ಇಟ್ಟ ಭಾರತ ಮೂಲದ ಹರ್ಜಾಸ್ ಸಿಂಗ್..!
ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ಹಾಗೂ ಸೋತ ತಂಡಕ್ಕೆ ಬಹುಮಾನ ನೀಡಲಾಗುತ್ತದೆ. ಅದರಂರೆ 2024ರ ಅಂಡರ್-19 ವಿಶ್ವಕಪ್ ಟೂರ್ನಿಯ ಒಟ್ಟಾರೆ ಬಹುಮಾನದ ಮೊತ್ತ 1.5 ಮಿಲಿಯನ್ ಡಾಲರ್ ಆಗಿದೆ. ಇದನ್ನು ಭಾರತದ ಕರೆನ್ಸಿಗೆ ವರ್ಗಾಯಿಸಿದರೆ ಅದು 12.50 ಕೋಟಿಗೂ ಹೆಚ್ಚು. ಹಾಗಂತ ಇಲ್ಲಿ ವಿಜೇತ ತಂಡ ಈ ಎಲ್ಲ ಮೊತ್ತವನ್ನು ನೀಡಲಾಗುವುದಿಲ್ಲ. ಇದರಲ್ಲಿ ಶೇ. 40 ರಿಂದ 50 ರಷ್ಟು ಪಾಲು ಮಾತ್ರ ಆಸ್ಟ್ರೇಲಿಯಾ ತಂಡಕ್ಕೆ ಸಿಗಲಿದೆ. ಅಂತೆಯೆ ರನ್ನರ್ಅಪ್ ಆದ ಭಾರತ ತಂಡಕ್ಕೆ 20-30ರಷ್ಟು ಪಾಲು ಸಿಗುತ್ತದೆ. ಸೆಮಿಫೈನಲ್ನಲ್ಲಿ ಸೋತ ತಂಡಗಳಿಗೂ ಬಹುಮಾನವಿದೆ.
ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಸಂಪೂರ್ಣ ಕಳಪೆಯಾಗಿತ್ತು. ಮೂರನೇ ಓವರ್‌ನಲ್ಲಿ ಮೊದಲ ವಿಕೆಟ್ ಪತನಗೊಂಡ ನಂತರ ಸರಾಗವಾಗಿ ವಿಕೆಟ್ ಕಳೆದುಕೊಂಡು ಸಾಗಿತು. ಆದರ್ಶ್ ಸಿಂಗ್ ಮಾತ್ರ 47 ರನ್ ಗಳಿಸಿ ಭಾರತದ ಪರ ಅಗ್ರ ಬ್ಯಾಟ್ಸ್‌ಮನ್ ಎನಿಸಿಕೊಂಡರು. ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂವರು ಬ್ಯಾಟ್ಸ್‌ಮನ್‌ಗಳಾದ ಉದಯ್ ಸಹರಾನ್, ಮುಶೀರ್ ಖಾನ್ ಮತ್ತು ಸಚಿನ್ ಧಾಸಾ ಅಂತಿಮ ಪಂದ್ಯದಲ್ಲಿ ವಿಫಲರಾದರು. ಇದು ಟೀಮ್ ಇಂಡಿಯಾದ ವಿಶ್ವಕಪ್ ಗೆಲ್ಲುವ ಕನಸಿಗೆ ದೊಡ್ಡ ಹಿನ್ನಡೆಯಾಯಿತು. ಭಾರತ ತಂಡ 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲೌಟ್ ಆಗಿ, 79 ರನ್‌ಗಳಿಂದ ಸೋಲು ಕಂಡಿತು.
ಆರ್ಸಿಬಿ ಬೌಲರ್ಗೆ ಅತೀ ಉದ್ಧದ ಸಿಕ್ಸರ್ ಸಿಡಿಸಿದ ಆರ್ಸಿಬಿ ಬ್ಯಾಟರ್..! ನೀವೇ ನೋಡಿ
ಆಸ್ಟ್ರೇಲಿಯಾ ಪರ ಸ್ಯಾಮ್ ಕೊಂಟಾಸ್ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದ ಪರಿಣಾಮ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ಸ್ಕೋರ್ ಮಾಡಿತು. ಅಗ್ರ-6 ಬ್ಯಾಟ್ಸ್‌ಮನ್‌ಗಳ ಪೈಕಿ 4 ಬ್ಯಾಟ್ಸ್‌ಮನ್‌ಗಳು 40 ಕ್ಕಿಂತ ಹೆಚ್ಚು ರನ್ ಗಳಿಸಿದರು. ಹರ್ಜಸ್ ಸಿಂಗ್ (55), ಹ್ಯಾರಿ ಡಿಕ್ಸನ್ (42), ಹಗ್ ವೈಬ್ಜೆನ್ (48), ಆಲಿವರ್ ಪೀಕ್ 46 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 am, Mon, 12 February 24
