ರಣಜಿ ಟ್ರೋಫಿ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿ ಹೆಸರು..!

|

Updated on: Sep 25, 2024 | 11:54 AM

Ranji Trophy - Virat Kohli: ವಿರಾಟ್ ಕೊಹ್ಲಿ ದೇಶೀಯ ಕ್ರಿಕೆಟ್​ನಲ್ಲಿ ಕಣಕ್ಕಿಳಿದು ಈಗಾಗಲೇ 11 ವರ್ಷಗಳು ಕಳೆದಿವೆ. ರಣಜಿ ಟ್ರೋಫಿಯಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು 2012-13ರ ಸೀಸನ್​ನಲ್ಲಿ. ಅಂದು ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ಕೊಹ್ಲಿ ಎರಡು ಇನಿಂಗ್ಸ್​ಗಳಿಂದ ಒಟ್ಟು 57 ರನ್ ಬಾರಿಸಿದ್ದರು.

ರಣಜಿ ಟ್ರೋಫಿ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿ ಹೆಸರು..!
Virat Kohli
Follow us on

ರಣಜಿ ಟ್ರೋಫಿ 2024-25 ಕ್ಕಾಗಿ ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಪ್ರಕಟಿಸಿರುವ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿಯ ಹೆಸರು ಕಾಣಿಸಿಕೊಂಡಿದೆ. 84 ಆಟಗಾರರನ್ನು ಒಳಗೊಂಡಿರುವ ಈ ಸಂಭವನೀಯ ತಂಡದಲ್ಲಿ ಕೊಹ್ಲಿ ಜೊತೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ನವದೀಪ್ ಸೈನಿ ಅವರ ಹೆಸರು ಕೂಡ ಇದೆ. ಇದಾಗ್ಯೂ ಕಳೆದ ಸೀಸನ್​ನಲ್ಲಿ ದೆಹಲಿ ಪರ ಆಡಿದ್ದ ಅನುಭವಿ ವೇಗಿ ಇಶಾಂತ್ ಶರ್ಮಾ ಅವರಿಗೆ ಸ್ಥಾನ ನೀಡಲಾಗಿಲ್ಲ.

2018ರ ನಂತರ ರಣಜಿ ಟ್ರೋಫಿಗಾಗಿ ದೆಹಲಿಯ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು. ಆಗ, ಡಿಡಿಸಿಎ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಟಗಾರರಾದ ಇಶಾಂತ್ ಶರ್ಮಾ, ಶಿಖರ್ ಧವನ್, ರಿಷಭ್ ಪಂತ್, ಗೌತಮ್ ಗಂಭೀರ್ ಮತ್ತು ನವದೀಪ್ ಸೈನಿ ಹೆಸರುಗಳು ಕಾಣಿಸಿಕೊಂಡಿದ್ದವು.

ಇದೀಗ 6 ವರ್ಷಗಳ ಬಳಿಕ ಮತ್ತೆ ದೆಹಲಿ ತಂಡದ ಸಂಭಾವ್ಯ ಪಟ್ಟಿಯಲ್ಲಿ ಕಿಂಗ್ ಕೊಹ್ಲಿಯ ಹೆಸರು ಕಾಣಿಸಿಕೊಂಡಿರುವುದು ವಿಶೇಷ. ಇತ್ತ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಕೊಹ್ಲಿ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಫ್ರೀಯಾಗಿರಲಿದ್ದಾರೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಅವರು ರಣಜಿ ಪಂದ್ಯಗಳನ್ನಾಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಕೊಹ್ಲಿ ಕೊನೆಯ ಬಾರಿ ರಣಜಿ ಪಂದ್ಯವಾಡಿದ್ದು ಯಾವಾಗ?

ವಿರಾಟ್ ಕೊಹ್ಲಿ ದೇಶೀಯ ಕ್ರಿಕೆಟ್​ನಲ್ಲಿ ಕಣಕ್ಕಿಳಿದು ಈಗಾಗಲೇ 11 ವರ್ಷಗಳು ಕಳೆದಿವೆ. ರಣಜಿ ಟ್ರೋಫಿಯಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು 2012-13ರ ಸೀಸನ್​ನಲ್ಲಿ. ಅಂದು ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ಕೊಹ್ಲಿ ಎರಡು ಇನಿಂಗ್ಸ್​ಗಳಿಂದ ಒಟ್ಟು 57 ರನ್ ಬಾರಿಸಿದ್ದರು. ಈ ವೇಳೆ ದೆಹಲಿ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದು ವೀರೇಂದ್ರ ಸೆಹ್ವಾಗ್ ಎಂಬುದು ವಿಶೇಷ.

ಇದನ್ನೂ ಓದಿ: IPL 2025: RCB ಉಳಿಸಿಕೊಳ್ಳುವ ಅನ್​ಕ್ಯಾಪ್ಡ್​ ಆಟಗಾರ ಯಾರು?

ಇದಾದ ಬಳಿಕ ಟೀಮ್ ಇಂಡಿಯಾದ ಖಾಯಂ ಸದಸ್ಯರಾದ ಕಿಂಗ್ ಕೊಹ್ಲಿ ಮತ್ತೆ ದೇಶೀಯ ಅಂಗಳದಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ಮತ್ತೆ ವಿರಾಟ್ ಕೊಹ್ಲಿಯ ಹೆಸರು ದೆಹಲಿ ಸಂಭಾವ್ಯ ತಂಡದಲ್ಲಿ ಕಾಣಿಸಿಕೊಂಡಿದ್ದು, ಹೀಗಾಗಿ ಮುಂಬರುವ ರಣಜಿ ಟೂರ್ನಿಯಲ್ಲಿ ಅವರು ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.

ದೆಹಲಿ ಸಂಭಾವ್ಯ ರಣಜಿ ತಂಡ:

ವಿರಾಟ್ ಕೊಹ್ಲಿ, ರಿಷಭ್ ಪಂತ್, ಹಿಮ್ಮತ್ ಸಿಂಗ್, ಪ್ರಾಂಶು ವಿಜಯನ್, ಅನಿರುದ್ಧ್ ಚೌಧರಿ, ಕ್ಷಿತಿಜ್ ಶರ್ಮಾ, ವೈಭವ್ ಕಂಡ್ಪಾಲ್, ಸಿದ್ಧಾಂತ್ ಬನ್ಸಾಲ್, ಸಮರ್ಥ್ ಸೇಠ್, ಜಾಂಟಿ ಸಿಧು, ಸಿದ್ಧಾಂತ್ ಶರ್ಮಾ, ತಿಶಾಂತ್ ದಬ್ಲಾ, ನವದೀಪ್ ಸೈನಿ, ಹರ್ಷ್ ತ್ಯಾಗಿ, ಲಕ್ಷಯ್ ಥರೇಜಾ (ವಿಕೆಟ್ ಕೀಪರ್), ಸುಮಿತ್ ಮಥುರ್ , ಶಿವಾಂಕ್ ವಶಿಷ್ಠ್, ಸಲೀಲ್ ಮಲ್ಹೋತ್ರಾ, ಆಯುಷ್ ಬದೋನಿ, ಗಗನ್ ವಾಟ್ಸ್, ರಾಹುಲ್ ಎಸ್ ಡಾಗರ್, ಹೃತಿಕ್ ಶೋಕೀನ್, ಮಯಾಂಕ್ ರಾವತ್, ಅನೂಜ್ ರಾವತ್ (ವಿಕೆಟ್ ಕೀಪರ್), ಸಿಮರ್ಜೀತ್ ಸಿಂಗ್, ಶಿವಂ ಕುಮಾರ್ ತ್ರಿಪಾಠಿ, ಕುಲ್ದೀಪ್ ಯಾದವ್, ಲಲಿತ್ ಯಾದವ್, ಪ್ರಿನ್ಸ್ ಚೌಧರಿ, ಶಿವಂ ಕಿಶೋರ್, ಶಿವಂ ಕಿಶೋರ್ ಗುಪ್ತಾ (ವಿಕೆಟ್ ಕೀಪರ್), ವೈಭವ್ ಶರ್ಮಾ, ಜಿತೇಶ್ ಸಿಂಗ್, ರೋಹಿತ್ ಯಾದವ್, ಸುಮಿತ್ ಕುಮಾರ್, ಅನ್ಮೋಲ್ ಶರ್ಮಾ, ಕೇಶವ್ ದಾಬಾ, ಸನತ್ ಸಾಂಗ್ವಾನ್, ಶುಭಂ ಶರ್ಮಾ (ವಿಕೆಟ್ ಕೀಪರ್), ಆರ್ಯನ್ ಚೌಧರಿ, ಆರ್ಯನ್ ರಾಣಾ, ಭಗವಾನ್ ಸಿಂಗ್, ಪ್ರಣವ್ ರಾಜವಂಶಿ (ವಿಕೆಟ್ ಕೀಪರ್), ಸೌರವ್ ಡಾಗರ್, ಮನಿ ಗ್ರೆವಾಲ್, ಕುನ್ವರ್ ಬಿಧುರಿ, ನಿಖಿಲ್ ಸಾಂಗ್ವಾನ್, ಪುನೀತ್ ಚಹಾಲ್, ಪ್ರಿಯಾಂಶ್ ಆರ್ಯ, ಯಶ್ ಧುಲ್, ಪ್ರಿನ್ಸ್ ಯಾದವ್, ಹರ್ಷಿತ್ ರಾಣಾ, ಮಯಾಂಕ್ ಯಾದವ್, ಸುಯಶ್ ಶರ್ಮಾ, ಅರ್ಪಿತ್ ರಾಣಾ, ದಿವಿಜ್ ಮೆಹ್ರಾ, ಸುಜಲ್ ಸಿಂಗ್, ಹಾರ್ದಿಕ್ ಶರ್ಮಾ, ಹಿಮಾಂಶು ಚೌಹಾಣ್, ಆಯುಷ್ ರಾಜ್, ಧ್ರುವ ಕೌಶಿಕ್, ಅಂಕುರ್ ಕೌಶಿಕ್, ಕ್ರಿಶ್ ಯಾದವ್, ವಂಶ್ ಬೇಡಿ, ಯಶ್ ಸೆಹ್ರಾವತ್, ವಿಕಾಸ್ ಸೋಲಂಕಿ, ರಾಜೇಶ್ ಶರ್ಮಾ, ತೇಜಸ್ವಿ ದಹಿಯಾ (ವಿಕೆಟ್ ಕೀಪರ್), ರೌನಕ್ ವಘೇಲಾ, ಮನ್‌ಪ್ರೀತ್ ಸಿಂಗ್, ರಾಹುಲ್ ಗೆಹ್ಲೋಟ್, ಆರ್ಯನ್ ಸೆಹ್ರಾವತ್, ಶಿವಂ ಶರ್ಮಾ, ಸಿದ್ಧಾರ್ಥ್ ಶರ್ಮಾ, ಪರ್ವ್ ಎಸ್ ಯೋಗೇಶ್ ಸಿಂಗ್, ದೀಪೇಶ್ ಬಲಿಯಾನ್, ಸಾಗರ್ ತನ್ವರ್, ರಿಷಬ್ ರಾಣಾ, ಅಖಿಲ್ ಚೌಧರಿ, ದಿಗ್ವೇಶ್ ರಾಠಿ, ಸಾರ್ಥಕ್ ರಂಜನ್, ಅಜಯ್ ಗುಲಿಯಾ.