ಅದೇ ಬ್ಯಾಟ್, ಅದೇ ಕಥೆ… ಒಂದಂಕಿ ರನ್​ಗೆ ಔಟಾದ ರೋಹಿತ್ ಶರ್ಮಾ

|

Updated on: Jan 23, 2025 | 10:31 AM

Ranji Trophy 2025 Rohit Sharma: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 5 ಇನಿಂಗ್ಸ್ ಆಡಿದ್ದ ರೋಹಿತ್ ಶರ್ಮಾ ಕಲೆಹಾಕಿದ್ದು ಕೇವಲ 31 ರನ್​ಗಳು ಮಾತ್ರ. ಅಂದರೆ ಕೇವಲ 6.20 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದರು. ಹೀಗಾಗಿಯೇ ಟೀಮ್ ಇಂಡಿಯಾ ಆಟಗಾರರು ರಣಜಿ ಟೂರ್ನಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಅದರಂತೆ ಇದೀಗ ಮುಂಬೈ ಪರ ಕಣಕ್ಕಿಳಿದಿರುವ ರೋಹಿತ್ ಶರ್ಮಾ ಒಂದಂಕಿ ರನ್​ಗೆ ಸುಸ್ತಾಗಿದ್ದಾರೆ.

ಅದೇ ಬ್ಯಾಟ್, ಅದೇ ಕಥೆ... ಒಂದಂಕಿ ರನ್​ಗೆ ಔಟಾದ ರೋಹಿತ್ ಶರ್ಮಾ
Rohit Sharma
Follow us on

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಇದೀಗ ರಣಜಿ ಟೂರ್ನಿಯಲ್ಲೂ ಅದೇ ಕಥೆಯನ್ನು ಮುಂದುವರೆಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರುವ ಹಿಟ್​ಮ್ಯಾನ್ ಕೇವಲ 3 ರನ್​ಗಳಿಸಿ ಔಟಾಗಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ 6 ಓವರ್​ಗಳ ಒಳಗೆ ಪೆವಿಲಿಯನ್ ಸೇರಿದ್ದಾರೆ.

ಔಕಿಬ್ ನಬಿ ಎಸೆತದಲ್ಲಿ ಜೈಸ್ವಾಲ್ (4) ಎಲ್​ಬಿಡಬ್ಲ್ಯೂ ಆಗಿ ಹೊರನಡೆದರೆ, ಇದರ ಬೆನ್ನಲ್ಲೇ ರೋಹಿತ್ ಶರ್ಮಾ (3) ಉಮರ್ ನಝೀರ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 5 ಇನಿಂಗ್ಸ್ ಆಡಿದ್ದ ಹಿಟ್​ಮ್ಯಾನ್ ಕೇವಲ 31 ರನ್​ಗಳು ಮಾತ್ರ ಕಲೆಹಾಕಿದ್ದರು. ಅಂದರೆ ಕೇವಲ 6.20 ಸರಾಸರಿಯಲ್ಲಿ ಮಾತ್ರ ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಇದೀಗ ಫಾರ್ಮ್ ಕಂಡುಕೊಳ್ಳಲು 10 ವರ್ಷಗಳ ಬಳಿಕ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿದಿರುವ ರೋಹಿತ್ ಶರ್ಮಾ ಮೊದಲ ಇನಿಂಗ್ಸ್​ನಲ್ಲಿ 3 ರನ್​ಗಳಿಸಿ ನಿರಾಸೆ ಮೂಡಿಸಿದ್ದಾರೆ. ಇದಾಗ್ಯೂ ಅವರು ದ್ವಿತೀಯ ಇನಿಂಗ್ಸ್​ ಮೂಲಕ ಲಯಕ್ಕೆ ಮರಳಲಿದ್ದಾರಾ ಕಾದು ನೋಡಬೇಕಿದೆ.

ರೋಹಿತ್ ಶರ್ಮಾ ಔಟ್ ವಿಡಿಯೋ:

ಮುಂಬೈ vs ಜಮ್ಮು ಕಾಶ್ಮೀರ:

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಮುಂಬೈ ತಂಡ ಆರು ಓವರ್​ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 12 ರನ್ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಹಾರ್ದಿಕ್ ತಮೋರ್ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಮುಂಬೈ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ರೋಹಿತ್ ಶರ್ಮಾ , ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಹಾರ್ದಿಕ್ ತಮೋರ್ ( ವಿಕೆಟ್ ಕೀಪರ್ ) , ಶಿವಂ ದುಬೆ , ಶಾರ್ದೂಲ್ ಠಾಕೂರ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ಕರ್ಶ್ ಕೊಠಾರಿ.

ಇದನ್ನೂ ಓದಿ: ಟೀಮ್ ಇಂಡಿಯಾ ಆರ್ಭಟಕ್ಕೆ ಪಾಕಿಸ್ತಾನ್ ತಂಡದ ದಾಖಲೆ ಉಡೀಸ್

ಜಮ್ಮು ಕಾಶ್ಮೀರ ಪ್ಲೇಯಿಂಗ್ 11: ಶುಭಂ ಖಜುರಿಯಾ , ವಿವ್ರಾಂತ್ ಶರ್ಮಾ , ಅಬ್ದುಲ್ ಸಮದ್ , ಪರಾಸ್ ಡೋಗ್ರಾ (ನಾಯಕ) , ಕನ್ಹಯ್ಯಾ ವಾಧವನ್ ( ವಿಕೆಟ್ ಕೀಪರ್) , ಔಕಿಬ್ ನಬಿ ದಾರ್ , ಯಾವರ್ ಹಸನ್ , ಯುಧ್ವೀರ್ ಸಿಂಗ್ ಚರಕ್ , ಅಬಿದ್ ಮುಷ್ತಾಕ್ , ಉಮರ್ ನಝೀರ್ ಮಿರ್ , ವಂಶಜ್ ಶರ್ಮಾ