IND vs ENG: ದ್ವಿಶತಕದ ಕ್ಲಬ್ ಸೇರಿದ ಇಂಗ್ಲೆಂಡ್

Updated on: Jan 23, 2025 | 11:53 AM

India vs England, 1st T20I: ಟೀಮ್ ಇಂಡಿಯಾ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಮ್ಯಾಚ್​ನಲ್ಲೇ ಇಂಗ್ಲೆಂಡ್ ಮುಗ್ಗರಿಸಿದೆ. ಇದರೊಂದಿಗೆ ವಿಶೇಷ ಮೈಲುಗಲ್ಲಿನ ಪಂದ್ಯದಲ್ಲಿ ಗೆಲ್ಲಲು ಹೊರಟಿದ್ದ ಆಂಗ್ಲ ಪಡೆಗೆ ಭಾರೀ ನಿರಾಸೆಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 132 ರನ್​ ಕಲೆಹಾಕಿದರೆ, ಈ ಗುರಿಯನ್ನು ಟೀಮ್ ಇಂಡಿಯಾ 12.5 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

1 / 5
ಕೊಲ್ಕತ್ತಾದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದೊಂದಿಗೆ ಇಂಗ್ಲೆಂಡ್ ತಂಡವು ವಿಶೇಷ ಮೈಲುಗಲ್ಲನ್ನು ಮುಟ್ಟಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಇಂಗ್ಲೆಂಡ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 200 ಪಂದ್ಯಗಳನ್ನಾಡಿದ ವಿಶೇಷ ಸಾಧನೆ ಮಾಡಿದೆ.

2 / 5
ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ 7ನೇ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದಕ್ಕೂ ಮುನ್ನ ಪಾಕಿಸ್ತಾನ್, ಭಾರತ, ನ್ಯೂಝಿಲೆಂಡ್, ವೆಸ್ಟ್ ಇಂಡೀಸ್​, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಮಾತ್ರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 200 ಪಂದ್ಯಗಳನ್ನಾಡಿತ್ತು. ಇದೀಗ ಈ ಪಟ್ಟಿಗೆ ಇಂಗ್ಲೆಂಡ್ ಕೂಡ ಎಂಟ್ರಿ ಕೊಟ್ಟಿದೆ.

3 / 5
ಆಂಗ್ಲರ ಪಡೆ ಈವರೆಗೆ ಆಡಿದ 200 ಟಿ20 ಪಂದ್ಯಗಳಲ್ಲಿ 104 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನು ಸೋತಿರುವುದು ಕೇವಲ 86 ಪಂದ್ಯಗಳಲ್ಲಿ ಮಾತ್ರ. ಇನ್ನೆರಡು ಪಂದ್ಯಗಳು ಟೈ ಆದರೆ, ಉಳಿದ 8 ಮ್ಯಾಚ್​ಗಳು ಕಾರಣಾಂತರಗಳಿಂದ ರದ್ದಾಗಿದೆ.

4 / 5
ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿದೆ. ಪಾಕ್ ಪಡೆ ಈವರೆಗೆ 253 ಪಂದ್ಯಗಳನ್ನಾಡಿದ್ದು, ಈ ವೇಳೆ 144 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನು 98 ಪಂದ್ಯಗಳಲ್ಲಿ ಸೋತರೆ, 3 ಮ್ಯಾಚ್​ಗಳು ಟೈನಲ್ಲಿ ಅಂತ್ಯ ಕಂಡಿದೆ. ಹಾಗೆಯೇ 7 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿವೆ.

5 / 5
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ತಂಡಗಳ ಪಟ್ಟಿಯಲ್ಲಿ ಭಾರತ ದ್ವಿತೀಯ ಸ್ಥಾನದಲ್ಲಿದೆ. ಟೀಮ್ ಇಂಡಿಯಾ ಈವರೆಗೆ 243 ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದು, ಈ ವೇಳೆ 161 ಜಯ, 70 ಸೋಲುಗಳನ್ನು ಕಂಡಿದೆ. ಇನ್ನು 6 ಮ್ಯಾಚ್​ಗಳು ಕಾರಣಾಂತರಗಳಿಂದ ರದ್ದಾದರೆ, 5 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿವೆ.