Ranji Trophy 2021-22: ರಣಜಿ ಟ್ರೋಫಿ 2022: ಫೆ. 16 ರಿಂದ ಮಾ. 5 ರವರೆಗೆ 9 ತಾಣಗಳಲ್ಲಿ ಪಂದ್ಯ ಆಯೋಜನೆ

| Updated By: Vinay Bhat

Updated on: Feb 01, 2022 | 10:34 AM

021-22ರ ಸಾಲಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಪಂದ್ಯಗಳಿಗೆ ಫೆಬ್ರವರಿ 16 ಎಂದು ಕ್ವಿಕ್ ಸ್ಟಾರ್ಟ್ ಸಿಗಲಿದೆ. ಎರಡು ವರ್ಷಗಳ ಬಿಡುವಿನ ನಂತರ ನಡೆಯಲಿರುವ ರಣಜಿ ಟೂರ್ನಿಯ ಪಂದ್ಯಗಳು ನಡೆಯುತ್ತಿರುವುದು ವಿಶೇಷ.

Ranji Trophy 2021-22: ರಣಜಿ ಟ್ರೋಫಿ 2022: ಫೆ. 16 ರಿಂದ ಮಾ. 5 ರವರೆಗೆ 9 ತಾಣಗಳಲ್ಲಿ ಪಂದ್ಯ ಆಯೋಜನೆ
Ranji Trophy 2022
Follow us on

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಫೆಬ್ರವರಿ 16 ರಿಂದ ಮಾರ್ಚ್ 5ರ ನಡುವೆ ರಣಜಿ ಟ್ರೋಫಿ 2022 (Ranji Trophy 2022) ನಡೆಸಲು ಸಜ್ಜಾಗಿದೆ. ಈ ಮೂಲಕ ಕೊರೊನಾ ಹಾವಳಿಯಿಂದಾಗಿ ಮುಂದೂಡಲ್ಪಟ್ಟಿದ್ದ 2021-22ರ ಸಾಲಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಪಂದ್ಯಗಳಿಗೆ ಫೆಬ್ರವರಿ 16 ಎಂದು ಕ್ವಿಕ್ ಸ್ಟಾರ್ಟ್ ಸಿಗಲಿದೆ. ಎರಡು ವರ್ಷಗಳ ಬಿಡುವಿನ ನಂತರ ನಡೆಯಲಿರುವ ರಣಜಿ ಟೂರ್ನಿಯ ಪಂದ್ಯಗಳು ನಡೆಯುತ್ತಿರುವುದು ವಿಶೇಷ. ಈ ಹಿಂದೆ ಮಾರ್ಚ್ 2020 ರಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ನಂತರ ಭಾರತದಲ್ಲಿ ಯಾವುದೇ ಪಂದ್ಯಗಳನ್ನು ಆಡಿಲ್ಲ. ಪರಿಷ್ಕೃತ ವೇಳಾಪಟ್ಟಿಯ ಅನ್ವಯ 38 ತಂಡಗಳ ಟೂರ್ನಿಯ ಲೀಗ್ ಹಂತದ ಪಂದ್ಯಗಳು 9 ತಾಣಗಳಾದ ಅಹ್ಮದಾಬಾದ್, ಕೋಲ್ಕತ್ತಾ, ತಿರುವನಂತಪುರ, ಕಟಕ್, ಚೆನ್ನೈ, ಗುವಾಹಟಿ, ಹೈದರಾಬಾದ್, ಬರೋಡ ಮತ್ತು ರಾಜ್‌ಕೋಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ನಾಕೌಟ್ ಪಂದ್ಯಗಳು ಜೂನ್‌ನಲ್ಲಿ ಆಯೀಜಿಸಲಾಗಿದೆ.

ಮೊದಲು ನಿಗದಿ ಮಾಡಿದ ವೇಳಾಪಟ್ಟಿ ಪ್ರಕಾರ ಪ್ರತಿ ತಂಡಕ್ಕೆ ಗುಂಪು ಹಂತದಲ್ಲಿ ಐದು ಪಂದ್ಯಗಳು ಸಿಗುವ ಸಾಧ್ಯತೆ ಇತ್ತು. ಇದನ್ನು ಪರಿಷ್ಕರಿಸಲಾಗಿದ್ದು ಈಗ ಮೂರು ಪಂದ್ಯಗಳನ್ನಷ್ಟೇ ಆಡಲು ಸಾಧ್ಯ. ಫೆಬ್ರವರಿ 16ರಿಂದ 19ರ ವರೆಗೆ ಮೊದಲ ಸುತ್ತು, 23ರಿಂದ 26ರ ವರೆಗೆ ಎರಡನೇ ಸುತ್ತು ಮತ್ತು ಮಾರ್ಚ್‌ 2ರಿಂದ 5ರ ವರೆಗೆ ಮೂರನೇ ಸುತ್ತಿನ ಪಂದ್ಯಗಳು ನಡೆಯಲಿವೆ. ಫೆಬ್ರವರಿ ಎರಡನೇ ವಾರದಲ್ಲಿ ಎಲ್ಲ ತಂಡಗಳ ಆಟಗಾರರು ಬಯೊಬಬಲ್ ಪ್ರವೇಶಿಸಲಿದ್ದಾರೆ. ಕರ್ನಾಟಕ ತಂಡವು ರೈಲ್ವೇಸ್‌, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ ಎದುರು ಗುಂಪು ಹಂತದಲ್ಲಿ ಸೆಣಸಲಿದ್ದು ಎಲ್ಲ ಪಂದ್ಯಗಳನ್ನು ಚೆನ್ನೈನಲ್ಲಿ ಆಡಲಿದೆ.

ಎರಡು ಬಾರಿ ಕೊರೊನಾವೈರಸ್ ಕಾರಣದಿಂದಾಗಿ ರಣಜಿ ಟೂರ್ನಿಯ ಆರಂಭ ಮುಂದೂಡಿಕೆಯಾಗಿದ್ದ ನಂತರ ಜನವರಿಯಲ್ಲಿ ಬಿಸಿಸಿಐ ತನ್ನ ಅಪೆಕ್ಸ್ ಕೌನ್ಸಿಲ್ ಸಭೆ ನಡೆಸಿತು. ಈ ಸಂದರ್ಭದಲ್ಲಿ ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಿವುದಾಗಿ ಘೋಷಿಸಿತ್ತು. ಆದರೆ ಸತತ ಎರಡನೇ ವರ್ಷವೂ ಬಿಸಿಸಿಐ ರಣಜಿ ಟೂರ್ನಿಯನ್ನು ರದ್ದುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವಿಚಾರವಾಗಿ ಸಾಕಷ್ಟು ಟೀಕೆಗಳು ಒತ್ತಡಗಳು ಬಂದವು. ಹೀಗಾಗಿ ಟೂರ್ನಿ ಆಯೋಜಿಸುವ ಅನಿವಾರ್ಯತೆಗೆ ಒಳಗಾಯಿತು ಬಿಸಿಸಿಐ. 2021ರಲ್ಲಿಯೂ ರಣಜಿ ಟೂರ್ನಿಯನ್ನು ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲಾಗಿತ್ತು. ಈ ಕಾರಣದಿಂದಾಗಿ ಆಟಗಾರರಿಗೆ ಪರಿಹಾರ ಧನವನ್ನು ಬಿಸಿಸಿಐ ನೀಡಿತ್ತು.

ಇನ್ನು ಟೂರ್ನಿಯ 2ನೇ ಹಂತದಲ್ಲಿ ಸೂಪರ್ ಲೀಗ್ ಅಥವಾ ಪ್ರಿ ಕ್ವಾರ್ಟರ್​ಫೈನಲ್ಸ್‌ನಿಂದ ನಾಕೌಟ್ ಹಣಾಹಣಿ ಆರಂಭಿಸಲು ಬಿಸಿಸಿಐ ಚಿಂತಿಸಿದೆ. ಸೂಪರ್ ಲೀಗ್ ನಡೆಸಿದರೆ, ಪ್ರತಿ ಎಲೈಟ್ ಗುಂಪಿನ ಅಗ್ರ ತಂಡಗಳು ಮೇಲೇರಲಿವೆ. ಸೂಪರ್ ಲೀಗ್‌ನಲ್ಲಿ ತಲಾ 4 ತಂಡಗಳ 2 ಗುಂಪಿನಲ್ಲಿ ಪಂದ್ಯ ನಡೆದು, ಅಗ್ರ 2 ತಂಡಗಳು ಸೆಮಿೈನಲ್‌ಗೇರಲಿವೆ. ಪ್ರಿ ಕ್ವಾರ್ಟರ್ಸ್‌ ನಡೆಸಿದರೆ, ಪ್ರತಿ ಎಲೈಟ್ ಗುಂಪಿನ ಅಗ್ರ 2 ತಂಡಗಳು ನಾಕೌಟ್ ಹಂತಕ್ಕೇರಲಿವೆ.

Jason Holder: ಭಾರತವನ್ನು ಅವರ ನೆಲದಲ್ಲೇ ಸೋಲಿಸುತ್ತೇವೆ: ಭಾರತದ ಫ್ಲೈಟ್ ಏರುವ ಮುನ್ನ ವಿಂಡೀಸ್ ಆಟಗಾರನ ಮಾತು

IPL 2022: ಭಾರತದಲ್ಲಿ ಈ ಬಾರಿ ವಿಶೇಷವಾಗಿರುತ್ತೆ ಮಿಲಿಯನ್ ಡಾಲರ್ ಟೂರ್ನಿ: ಐಪಿಎಲ್ ಫ್ಯಾನ್ಸ್​ಗೆ ಸಿಹಿ ಸುದ್ದಿ