AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಭಾರತದಲ್ಲಿ ಈ ಬಾರಿ ವಿಶೇಷವಾಗಿರುತ್ತೆ ಮಿಲಿಯನ್ ಡಾಲರ್ ಟೂರ್ನಿ: ಐಪಿಎಲ್ ಫ್ಯಾನ್ಸ್​ಗೆ ಸಿಹಿ ಸುದ್ದಿ

ಐಪಿಎಲ್​ 2022ರ ಎಲ್ಲ ಲೀಗ್ ಪಂದ್ಯಗಳು ಮಹಾರಾಷ್ಟ್ರದಲ್ಲಿ ನಡೆದರೆ ಪ್ಲೇ ಆಫ್ ಪಂದ್ಯಗಳು ಅಹ್ಮದಾಬಾದ್​ನಲ್ಲಿ ಜರುಗಲಿದೆ. ಸದ್ಯ ಮಹರಾರಾಷ್ಟ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಐಪಿಎಲ್ ವೇಳೆ ಕೊರೊನಾ ಸಂಖ್ಯೆ ಇಳಿಮುಖವಾಗಿದ್ದರೆ ಶೇ. 25 ರಷ್ಟು ಜನರಿಗೆ ಪಂದ್ಯ ವೀಕ್ಷಿಸಲು ಅನಮತಿ ನೀಡುತ್ತೇವೆ ಎಂದು ಹೇಳಿದ್ದಾರೆ.

IPL 2022: ಭಾರತದಲ್ಲಿ ಈ ಬಾರಿ ವಿಶೇಷವಾಗಿರುತ್ತೆ ಮಿಲಿಯನ್ ಡಾಲರ್ ಟೂರ್ನಿ: ಐಪಿಎಲ್ ಫ್ಯಾನ್ಸ್​ಗೆ ಸಿಹಿ ಸುದ್ದಿ
IPL 2022
TV9 Web
| Updated By: Vinay Bhat|

Updated on: Feb 01, 2022 | 8:47 AM

Share

ಮಿಲಿಯನ್ ಡಾಲರ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (Indian Premier League) ಫೀವರ್ ಅದಾಗಲೇ ಶುರುವಾಗಿದೆ. ಇದೇ ಫೆಬ್ರವರಿ 12 ಮತ್ತು 13 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತಿ ದೊಡ್ಡ ಮೆಗಾ ಆಕ್ಷನ್ ನಡೆಯಲಿದೆ. ಈ ಬಾರಿ ಭಾರತದಲ್ಲೇ ಐಪಿಎಲ್ 2022 (IPL 2022) ನಡೆಸಬೇಕು ಎಂದು ಪಟ್ಟು ಹಿಡಿದಿರುವ ಬಿಸಿಸಿಐ ಹಲವು ಸವಾಲುಗಳು ಎದುರಿಸಲು ತಯಾರಾಗಿದೆ. ಎಲ್ಲ ಪಂದ್ಯಗಳು ಮುಂಬೈನಲ್ಲಿ ಮತ್ತು ಅಹ್ಮದಾಬಾದ್​ನಲ್ಲಿ ಮಾತ್ರ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಐಪಿಎಲ್ ಪ್ರಿಯರಿಗೆ ಸಿಕ್ಕಿದೆ. ಅದೇನೆಂದರೆ ಈ ಬಾರಿಯ ಐಪಿಎಲ್ ವೀಕ್ಷಣೆಗೆ ಶೇ. 25 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಐಪಿಎಲ್​ನ ಎಲ್ಲ ಲೀಗ್ ಪಂದ್ಯಗಳು ಮಹಾರಾಷ್ಟ್ರದಲ್ಲಿ ನಡೆದರೆ ಪ್ಲೇ ಆಫ್ ಪಂದ್ಯಗಳು ಅಹ್ಮದಾಬಾದ್​ನಲ್ಲಿ ಜರುಗಲಿದೆ. ಸದ್ಯ ಮಹರಾರಾಷ್ಟ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಐಪಿಎಲ್ ವೇಳೆ ಕೊರೊನಾ (Corona) ಸಂಖ್ಯೆ ಇಳಿಮುಖವಾಗಿದ್ದರೆ ಶೇ. 25 ರಷ್ಟು ಜನರಿಗೆ ಪಂದ್ಯ ವೀಕ್ಷಿಸಲು ಅನಮತಿ ನೀಡುತ್ತೇವೆ ಎಂದು ಹೇಳಿದ್ದಾರೆ.

ಅಲ್ಲದೆ ಮುಂಬೈ ಕ್ರೀಡಾಂಗಣದ ಆಸುಪಾಸಿನಲ್ಲೇ ಆಟಗಾರರಿಗೆ ಕ್ವಾರಂಟೈನ್ ಆಗಲು ಫೈವ್ ಸ್ಟಾರ್ ಹೊಟೇಲ್​ಗಳು ಕೂಡ ವ್ಯವಸ್ಥೆ ಆಗಲಿದೆ. ಹೀಗಾಗಿ ಐಪಿಎಲ್ 2022ರ ಎಲ್ಲ ಲೀಗ್ ಪಂದ್ಯಗಳು ಮುಂಬೈನಲ್ಲೇ ನಡೆಯಲಿದೆಯಂತೆ. ಫೆಬ್ರವರಿಯಲ್ಲಿ ನಡೆಯಲಿರುವ ಮೆಗಾ ಹರಾಜಿನ ಬಳಿಕ ಬಿಸಿಸಿಐ ಈ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸಲಿದೆ ಎಂದು ವರದಿಯಾಗಿದೆ.

2021ರ ಟೂರ್ನಿಯನ್ನು ಭಾರತದಲ್ಲೇ ಆರಂಭಿಸಿದ್ದರೂ ಬಯೋಬಬಲ್‌ನಲ್ಲಿ ಕೋವಿಡ್‌ ಪತ್ತೆಯಾದ ಕಾರಣ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ಬಳಿಕ ಶಾರ್ಜಾ, ದುಬೈ, ಅಬುಧಾಬಿಯಲ್ಲಿ ಪಂದ್ಯಾವಳಿ ಪೂರ್ತಿಗೊಳಿಸಲಾಗಿತ್ತು. ಆದರೆ 10 ತಂಡಗಳು ಪಾಲ್ಗೊಳ್ಳುವ 15ನೇ ಆವೃತ್ತಿಯ ಐಪಿಎಲ್‌ ವಿದೇಶಗಳಲ್ಲಿ ನಡೆಸುವ ಬದಲು ಭಾರತದಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಕೂಡಾ ಭಾರತದಲ್ಲೇ ಟೂರ್ನಿ ನಡೆಸುತ್ತೇವೆಂದು ಹಲವು ಬಾರಿ ಹೇಳಿಕೆ ನೀಡಿದ್ದಾರೆ.

ಮುಂಬೈನಲ್ಲಿ 3 ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಗಳಿವೆ. ವಾಂಖೇಡೆ, ಬ್ರಾಬೋನ್‌ ಹಾಗೂ ಡಿ.ವೈ.ಪಾಟೀಲ್‌ ಕ್ರೀಡಾಂಗಣಗಳು ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸಬಹುದು. ಅಗತ್ಯವಿದ್ದರೆ ಪುಣೆ ಸ್ಟೇಡಿಯಂನಲ್ಲೂ ಕೆಲ ಪಂದ್ಯಗಳನ್ನು ನಡೆಸಬಹುದು. ಮುಂಬೈನಿಂದ ಪುಣೆಗೆ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಬಹುದು. ಅಲ್ಲದೇ 10 ತಂಡಗಳಿಗೆ ಉಳಿದುಕೊಳ್ಳಲು ಹೋಟೆಲ್‌ಗಳ ಕೊರತೆಯೂ ಇಲ್ಲ. ಹೀಗಾಗಿ ಬಿಸಿಸಿಐ ಮುಂಬೈನಲ್ಲಿ ಆಯೋಜಿಸಬಹುದು ಎನ್ನಲಾಗುತ್ತಿದೆ.

ದಕ್ಷಿಣ ಆಫ್ರಿಕಾ ಮತ್ತೊಂದು ಆಯ್ಕೆಯಾಗಿದೆ. ಆದರೆ, ಪ್ರಸ್ತುತ ಅದನ್ನು ಆಯ್ಕೆಯಾಗಿ ನಾವು ಆಲೋಚಿಸುತ್ತಿಲ್ಲ. ಅದು ಕೊನೆಯ ಆಯ್ಕೆಯಷ್ಟೇ. ಆದರೆ, ಪ್ರೇಕ್ಷಕರ ಪ್ರವೇಶ ಕುರಿತಂತೆ ಈಗಲೇ ಸುಲಭವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಟೂರ್ನಮೆಂಟ್ ಹತ್ತಿರವಾಗುತ್ತಿದ್ದಂತೆ ನಾವು ಅದರ ಕಡೆಗೆ ಗಮನ ಹರಿಸಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು 2022ರ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯು ಏಪ್ರಿಲ್ 02ರಿಂದ ಆರಂಭವಾಗಲಿದೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಇದೀಗ ಬಿಸಿಸಿಐ ಈ ಮೊದಲು ತೀರ್ಮಾನಿಸಿದ ದಿನಾಂಕಕ್ಕಿಂತ ಒಂದು ವಾರ ಮುಂಚಿತವಾಗಿ ಅಂದರೆ ಮಾರ್ಚ್‌ 27ರಿಂದ ಐಪಿಎಲ್‌ ಆಯೋಜಿಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಟೂರ್ನಿಯು ಮಾರ್ಚ್‌ ಕೊನೆಯಲ್ಲಿ ಆರಂಭವಾದರೆ, ಮೇ ಕೊನೆಯ ವಾರದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಲಾಗಿದೆ. ಆದರೆ, ಇದು ಅಧಿಕೃತ ಮಾಹಿತಿಯಲ್ಲ.

India vs West Indies: ಅಹ್ಮದಾಬಾದ್​ಗೆ ತಲುಪಿದ ಟೀಮ್ ಇಂಡಿಯಾ ಆಟಗಾರರು: ಕ್ವಾರಂಟೈನ್​ನಲ್ಲಿ ರೋಹಿತ್ ಪಡೆ

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ