ರಣಜಿ ಟ್ರೋಫಿಯಲ್ಲಿ ಸ್ಪೋಟಕ ಶತಕಗಳ ಸುರಿಮಳೆಯಾಗುತ್ತಿದೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಶಾರೂಖ್ ಖಾನ್. ತಮಿಳುನಾಡು-ದೆಹಲಿ ನಡುವಣ ಪಂದ್ಯದಲ್ಲಿ ಶಾರೂಖ್ ಖಾನ್ ಸ್ಪೋಟಕ ಸೆಂಚುರಿ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ದೆಹಲಿ ನೀಡಿದ 452 ರನ್ಗಳ ಬೃಹತ್ ಗುರಿಗೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ತಮಿಳುನಾಡು ಪರ ಶಾರೂಖ್ ಶತಕ ಬಾರಿಸಿ ಮಿಂಚಿದರು. ವಿಶೇಷ ಎಂದರೆ ಇದು ಇದು ರಣಜಿ ಟ್ರೋಫಿಯಲ್ಲಿ ಶಾರುಖ್ ಖಾನ್ ಬಾರಿಸಿದ ಮೊದಲ ಶತಕವಾಗಿದೆ. ಇದಕ್ಕೂ ಮುನ್ನ ಅವರು ಈ ದೇಶೀಯ ಟೂರ್ನಿಯಲ್ಲಿ ಕೇವಲ 2 ಅರ್ಧಶತಕಗಳನ್ನು ಬಾರಿಸಿದ್ದರು. ಕ್ರೀಸ್ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶಾರೂಖ್ ದೆಹಲಿ ಬೌಲರುಗಳ ಬೆಂಡೆತ್ತಿದರು. ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದ ಶಾರೂಖ್ ಖಾನ್ 89 ಎಸೆತಗಳಲ್ಲಿ ಶತಕ ಪೂರೈಸಿದರು.
ಶಾರುಖ್ ಖಾನ್ ಶತಕಕ್ಕೂ ಮುನ್ನ ತಮಿಳುನಾಡಿನ ಮತ್ತೋರ್ವ ಬ್ಯಾಟ್ಸ್ಮನ್ ಬಾಬಾ ಇಂದ್ರಜಿತ್ ಅವರು ಕೂಡ ಸೆಂಚುರಿ ಸಿಡಿಸಿದ್ದರು. ಇಂದ್ರಜಿತ್ 149 ಎಸೆತಗಳಲ್ಲಿ 117 ರನ್ ಬಾರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 2 ಸಿಕ್ಸರ್‌ಗಳು ಮೂಡಿಬಂದಿತ್ತು. ಇದೀಗ ಮೂರನೇ ದಿನದಾಟ ಮುಂದುವರೆದಿದ್ದು ಶಾರೂಖ್ ಖಾನ್ 148 ಎಸೆತಗಳಲ್ಲಿ 194 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ ಸಿಡಿದದ್ದು ಬರೋಬ್ಬರಿ 20 ಫೋರ್ ಹಾಗೂ 10 ಸಿಕ್ಸರ್‌ಗಳು. ಅಷ್ಟೇ ಅಲ್ಲದೆ ತಮಿಳುನಾಡು ತಂಡವು 7 ವಿಕೆಟ್ ನಷ್ಟಕ್ಕೆ 474 ರನ್ಗಳಿಸಿದೆ.
ದೆಹಲಿಯ ಮೊದಲ ಇನಿಂಗ್ಸ್:
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ ಮೊದಲ ಇನಿಂಗ್ಸ್‌ನಲ್ಲಿ 452 ರನ್ ಗಳಿಸಿತ್ತು. ತಂಡದ ಪರ ಟೀಮ್ ಇಂಡಿಯಾ ಅಂಡರ್-19 ನಾಯಕ ಯಶ್ ಧುಲ್ ಭರ್ಜರಿ ಶತಕ ಸಿಡಿಸಿದ್ದರು. ಇದೀಗ ದೆಹಲಿ ನೀಡಿದ ಕಠಿಣ ಸವಾಲಿಗೆ ತಮಿಳುನಾಡು ತಂಡದ ಭರ್ಜರಿ ಪ್ರತ್ಯುತ್ತರ ನೀಡುತ್ತಿದೆ.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್
(Ranji Trophy: Tamil Nadu Shahrukh Khan is hammering Delhi with 150 in just 113 balls)