Rashid Khan: ಸೋತರೂ ವಿಶ್ವ ದಾಖಲೆ ನಿರ್ಮಿಸಿದ ಸ್ಪಿನ್ ಮಾಂತ್ರಿಕ ರಶೀದ್ ಖಾನ್
T20 Cricket Record: ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೋ ಹೆಸರಿನಲ್ಲಿತ್ತು. ಬ್ರಾವೋ 364 ಪಂದ್ಯಗಳಲ್ಲಿ 400 ವಿಕೆಟ್ ಪಡೆದಿದ್ದರು.

ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ದ ಸೋಲುವ ಮೂಲಕ ಅಫ್ಘಾನಿಸ್ತಾನ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ರಶೀದ್ ಖಾನ್ ಕೇವಲ 27 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಈ ವಿಕೆಟ್ನೊಂದಿಗೆ ಇದೀಗ ಟಿ20 ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದ ವಿಶ್ವದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅತೀ ವೇಗವಾಗಿ ಟಿ20ಯಲ್ಲಿ 400 ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೋ ಹೆಸರಿನಲ್ಲಿತ್ತು. ಬ್ರಾವೋ 364 ಪಂದ್ಯಗಳಲ್ಲಿ 400 ವಿಕೆಟ್ ಪಡೆದಿದ್ದರು. ಇದೀಗ ಕೇವಲ 289 ಪಂದ್ಯಗಳಲ್ಲಿ 400 ವಿಕೆಟ್ ಉರುಳಿಸುವ ಮೂಲಕ ರಶೀದ್ ಖಾನ್ ಬ್ರಾವೋ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇನ್ನು ಈ ದಾಖಲೆಯೊಂದಿಗೆ ರಶೀದ್ ಖಾನ್ ಈ ಸಾಧನೆ ಮಾಡಿದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಡ್ವೇನ್ ಬ್ರಾವೋ (553), ಸುನಿಲ್ ನರೈನ್ (425) ಮತ್ತು ಇಮ್ರಾನ್ ತಾಹಿರ್ (420) ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಈ ಎಲೈಟ್ ಪಟ್ಟಿಗೆ ರಶೀದ್ ಖಾನ್ ಎಂಟ್ರಿ ಕೊಟ್ಟಿದ್ದಾರೆ.
23 ವರ್ಷದ ರಶೀದ್ ಖಾನ್ ಒಂದಷ್ಟು ಅಫ್ಘಾನಿಸ್ತಾನ್ ಪರ ಟಿ20 ಕ್ರಿಕೆಟ್ ಹಾಗೂ ಟಿ20 ಲೀಗ್ನಲ್ಲಿ ಕಾಣಿಸಿಕೊಳ್ಳಲಿದ್ದು, ಹೀಗಾಗಿ ಬ್ರಾವೋ ಅವರ ವಿಶ್ವ ದಾಖಲೆ ಮುರಿಯುವ ಸಾಧ್ಯತೆಯಿದೆ. ಸದ್ಯ ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ 553 ವಿಕೆಟ್ ಉರುಳಿಸುವ ಮೂಲಕ ಬ್ರಾವೋ ಅಗ್ರಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಕೇವಲ 20 ಹಾಗೂ 25 ವಿಕೆಟ್ಗಳ ಮೂಲಕ ನರೈನ್ ಹಾಗೂ ತಾಹಿರ್ ರಶೀದ್ ಖಾನ್ ಮುಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲರ ದಾಖಲೆಯನ್ನು ಮುರಿದು ಮಾಂತ್ರಿಕ ಸ್ಪಿನ್ನರ್ ರಶೀದ್ ಖಾನ್ ಹೊಸ ಇತಿಹಾಸ ನಿರ್ಮಿಸಿದರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(Rashid Khan becomes fastest bowler to pick 400 T20 wickets)
