W, W, 0, W, W, 0: 2 ಬಾರಿ ಹ್ಯಾಟ್ರಿಕ್ ಮಿಸ್: ರಶೀದ್ ಖಾನ್ ಸ್ಪಿನ್ ಮೋಡಿಗೆ ತತ್ತರಿಸಿದ ಎದುರಾಳಿ ತಂಡ

| Updated By: ಝಾಹಿರ್ ಯೂಸುಫ್

Updated on: Jan 12, 2022 | 6:32 PM

Rashid Khan: ಕ್ರಿಸ್ ಲಿನ್​ನಂತಹ ಬಲಿಷ್ಠ ದಾಂಡಿಗರನ್ನು ಹೊಂದಿದ್ದ ಈ ಪಂದ್ವನ್ನು ಬ್ರಿಸ್ಬೇನ್ ಹೀಟ್ ಈ ಪಂದ್ಯವನ್ನು​ ಗೆಲ್ಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ರಶೀದ್ ಖಾನ್.

W, W, 0, W, W, 0: 2 ಬಾರಿ ಹ್ಯಾಟ್ರಿಕ್ ಮಿಸ್: ರಶೀದ್ ಖಾನ್ ಸ್ಪಿನ್ ಮೋಡಿಗೆ ತತ್ತರಿಸಿದ ಎದುರಾಳಿ ತಂಡ
Rashid Khan
Follow us on

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನ 46ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ಮೋಡಿ ಮಾಡಿದ್ದಾರೆ. ಅದು ಕೂಡ ಎರಡು ಬಾರಿ. ಇದಾಗ್ಯೂ ಹ್ಯಾಟ್ರಿಕ್ ವಿಕೆಟ್ ಉರುಳಿಸಲು ಮಾತ್ರ ವಿಫಲರಾದರು. ಹೌದು, ಅಡಿಲೇಡ್ ಸ್ಟ್ರೈಕರ್ಸ್​ ಹಾಗೂ ಬ್ರಿಸ್ಬೇನ್ ಹೀಟ್ ನಡುವಣ ಪಂದ್ಯದಲ್ಲಿ ಟಾಸ್ ಗೆದ್ದ ಅಡಿಲೇಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಅಡಿಲೇಡ್ ಸ್ಟ್ರೈಕರ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 161 ರನ್​ ಕಲೆಹಾಕಿತು.

ಕ್ರಿಸ್ ಲಿನ್​ನಂತಹ ಬಲಿಷ್ಠ ದಾಂಡಿಗರನ್ನು ಹೊಂದಿದ್ದ ಈ ಪಂದ್ವನ್ನು ಬ್ರಿಸ್ಬೇನ್ ಹೀಟ್ ಈ ಪಂದ್ಯವನ್ನು​ ಗೆಲ್ಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ರಶೀದ್ ಖಾನ್. 8 ಓವರ್​ ವೇಳೆ 62 ರನ್​ಗೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಬ್ರಿಸ್ಬೇನ್ ತಂಡಕ್ಕೆ ರಶೀದ್ ಖಾನ್ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಪವರ್​ಪ್ಲೇ ಬಳಿಕ ಮೊದಲ ಓವರ್​ ಎಸೆದಿದ್ದ ರಶೀದ್ ಖಾನ್ ಒಟ್ಟು 11 ರನ್​ಗಳನ್ನು ನೀಡಿದ್ದರು.

ಆದರೆ 9ನೇ ಓವರ್​ನಲ್ಲಿ ತಮ್ಮ ಮಾಂತ್ರಿಕ ಸ್ಪಿನ್ ಮೋಡಿ ಆರಂಭಿಸಿದ ರಶೀದ್ ಖಾನ್ ಎರಡನೇ ಎಸೆತದಲ್ಲಿ ಹೆಜ್ಲೆಟ್ ಅವರನ್ನು ಔಟ್ ಮಾಡಿದರು. ಮುಂದಿನ ಎಸೆತದಲ್ಲಿ ಜಾಕ್ ಲೆಹ್ಮನ್ ಅವರ ವಿಕೆಟ್ ಪಡೆದರು. ಈ ವೇಳೆ ಹ್ಯಾಟ್ರಿಕ್ ಅವಕಾಶವಿದ್ದರೂ ವಿಕೆಟ್ ಪಡೆಯಲು ಯಶಸ್ವಿಯಾಗಲಿಲ್ಲ.

ಇನ್ನು 13ನೇ ಓವರ್​ ವೇಳೆ ಮತ್ತೆ ದಾಳಿಗಿಳಿದ ರಶೀದ್ ಖಾನ್ ಮೂರನೇ ಎಸೆತದಲ್ಲಿ ವಿಲ್ ಪ್ರೆಸ್‌ವಿಜ್ಕ್ ಅವರನ್ನು ಔಟ್ ಮಾಡಿ ಮೂರನೇ ಯಶಸ್ಸನ್ನು ಪಡೆದರು. ಇನ್ನು ಕೊನೆಯ ಓವರ್​ನ ಎರಡನೇ ಎಸೆತದಲ್ಲಿ ಕುಹೆನ್‌ಮನ್ ಅವರನ್ನು ಔಟ್ ಮಾಡಿದರು. ಮೂರನೇ ಎಸೆತದಲ್ಲಿ ಮುಜೀಬ್ ಅವರ ವಿಕೆಟ್ ಉರುಳಿಸಿ ಐದು ವಿಕೆಟ್‌ಗಳನ್ನು ಪೂರೈಸಿದರು. ಈ ವೇಳೆ ಮತ್ತೊಮ್ಮೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ರಶೀದ್ ಖಾನ್ ಮುಂದಿತ್ತು. ಆದರೆ ಈ ಅವಕಾಶಕ್ಕೆ ಲಿಯಾಮ್ ಗುತ್ರಿ ತಡೆಯಾಗಿ ನಿಂತರು. ಇದಾಗ್ಯೂ ಕೊನೆಯ ಎಸೆತದಲ್ಲಿ ಗುತ್ರಿಯ ವಿಕೆಟ್ ಪಡೆಯುವ ಮೂಲಕ ರಶೀದ್ ಖಾನ್ ಒಟ್ಟು 6 ವಿಕೆಟ್​ಗಳನ್ನು ಕಬಳಿಸಿದರು.

ರಶೀದ್ ಖಾನ್ ಅವರ ಈ ಸ್ಪಿನ್ ಮೋಡಿಯಿಂದ ಬ್ರಿಸ್ಬೇನ್ ತಂಡವು 15 ಓವರ್​ನಲ್ಲಿ ಕೇವಲ 90 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಅಡಿಲೇಡ್ ತಂಡವು 71 ರನ್​ಗಳ ಜಯ ಸಾಧಿಸಿತು. 4 ಓವರ್​ನಲ್ಲಿ 17 ನೀಡಿ 6 ವಿಕೆಟ್ ಉರುಳಿಸುವ ಮೂಲಕ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Rashid Khan claims six to rip through Heat in BBL)