Rashid Khan: ಪಾಕ್ ಆಟಗಾರನ ಜೊತೆ ಕನ್ನಡ ಹಾಡಿಗೆ ಹೆಜ್ಜೆಹಾಕಿದ ರಶೀದ್ ಖಾನ್

| Updated By: ಝಾಹಿರ್ ಯೂಸುಫ್

Updated on: Feb 01, 2022 | 2:28 PM

ಟೀಮ್ ಇಂಡಿಯಾ ಆಟಗಾರರಾದ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ಪುಷ್ಪಾ ಚಿತ್ರದ ಡೈಲಾಗ್ ಹಾಗೂ ಹಾಡುಗಳ ಮೂಲಕ ಮಿಂಚಿದ್ದರು.

Rashid Khan: ಪಾಕ್ ಆಟಗಾರನ ಜೊತೆ ಕನ್ನಡ ಹಾಡಿಗೆ ಹೆಜ್ಜೆಹಾಕಿದ ರಶೀದ್ ಖಾನ್
Rashid Khan
Follow us on

ದಕ್ಷಿಣ ಭಾರತದಲ್ಲಿ ಅರಳಿದ ಪುಷ್ಪಾ ಚಿತ್ರದ ಕ್ರೇಜ್ ಇದೀಗ ವಿಶ್ವದಾದ್ಯಂತ ವ್ಯಾಪಿಸಿದೆ. ಬಹುಭಾಷೆಯಲ್ಲಿ ತೆರೆಕಂಡಿದ್ದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರದ ಹಾಡುಗಳು ಮತ್ತು ಡೈಲಾಗ್​ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಲವಾರು ಸೆಲೆಬ್ರಿಟಿಗಳು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದರ ಡೈಲಾಗ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಪುಷ್ಪಾ ಕ್ರಿಕೆಟ್ ಅಂಗಳದಲ್ಲೂ ಹೊಸ ಕ್ರೇಜ್ ಹುಟ್ಟುಹಾಕಿದ್ದು, ಅದರಂತೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ಪುಷ್ಪಾನ ಹವಾ ಜೋರಾಗಿದೆ. ಅಷ್ಟೇ ಅಲ್ಲದೆ ಇದೀಗ ಪಾಕಿಸ್ತಾನ್ ಸೂಪರ್ ಲೀಗ್​ಗೂ ಪುಷ್ಪಾ ಎಂಟ್ರಿ ಕೊಟ್ಟಿರುವುದು ವಿಶೇಷ.

ಹೌದು, ಪುಷ್ಪಾ ಚಿತ್ರದ ಡೈಲಾಗ್ ಮತ್ತು ಹಾಡುಗಳ ಮೂಲಕ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ವಿಕೆಟ್ ಉರುಳಿ ಶಕೀಬ್ ಅಲ್ ಹಸನ್ ಕೂಡ ಪುಷ್ಪಾ ಸೆಲೆಬ್ರೇಷನ್ ಮಾಡಿ ಮಿಂಚಿದ್ದರು. ಇನ್ನು ಅಫ್ಘಾನ್ ಆಟಗಾರ ಮೊಹಮದ್ ಶೆಹಝಾದ್, ಡ್ವೇನ್ ಬ್ರಾವೋ ಕೂಡ ಮೈದಾನದಲ್ಲೇ ಪುಷ್ಪಾ ಸ್ಟ್ರೈಲ್ ತೋರಿಸಿ ಮಿಂಚಿದ್ದರು.

ಮತ್ತೊಂದೆಡೆ ಟೀಮ್ ಇಂಡಿಯಾ ಆಟಗಾರರಾದ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ಪುಷ್ಪಾ ಚಿತ್ರದ ಡೈಲಾಗ್ ಹಾಗೂ ಹಾಡುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೀಗ ಪಾಕಿಸ್ತಾನ್ ಸೂಪರ್ ಲೀಗ್​ ಟೂರ್ನಿಯಲ್ಲೂ ಪುಷ್ಪಾ ಕ್ರೇಜ್ ಕಂಡು ಬಂದಿದೆ.

ಪಿಎಸ್​ಎಲ್​ನಲ್ಲಿ ಲಾಹೋರ್ ಕಲಂದರ್ಸ್​ ತಂಡದ ಆಟಗಾರನಾಗಿರುವ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಪುಷ್ಪಾ ಚಿತ್ರದ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇಲ್ಲಿ ವಿಶೇಷ ಎಂದರೆ ರಶೀದ್ ಖಾನ್ ಆಯ್ಕೆ ಮಾಡಿಕೊಂಡಿರುವುದು ಕನ್ನಡ ಪುಷ್ಪಾದ ಶ್ರೀವಲ್ಲಿ ಹಾಡನ್ನು ಎಂಬುದೇ ವಿಶೇಷ.

ಇನ್ನು ಈ ಹಾಡಿನಲ್ಲಿ ರಶೀದ್ ಖಾನ್ ಜೊತೆ ಪಾಕ್ ತಂಡದ ಆಟಗಾರ ಹ್ಯಾರಿಸ್ ರೌಫ್ ಕೂಡ ಕೈ ಜೋಡಿಸಿದ್ದಾರೆ. ಈ ಮೂಲಕ ಇಬ್ಬರೂ ಕನ್ನಡದ ಶ್ರೀವಳ್ಳಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(Rashid Khan Copies The Pushpa Hook Step With Haris Rauf)