Virat Kohli: ನಾಯಕ ಪಟ್ಟವಿಲ್ಲದಿದ್ದರೂ ನಾನೇ ಕಿಂಗ್..!
Virat Kohli: ಮಹೇಂದ್ರ ಸಿಂಗ್ ಧೋನಿ ಅವರು ನಾಯಕನ ಸ್ಥಾನದಿಂದ ಕೆಳಗಿಳಿದ ಬಳಿಕ ತಂಡದಲ್ಲಿ ನಾಯಕನಾಗಿಯೇ ಇದ್ದರು. ಏಕೆಂದರೆ ನಾವು ಅವರ ಬಳಿ ಪ್ರತಿಯೊಂದರ ಸಲಹೆಯನ್ನು ಪಡೆಯುತ್ತಿದ್ದೆವು.
ಟೀಮ್ ಇಂಡಿಯಾ ನಾಯಕನ ಸ್ಥಾನದಿಂದ ವಿರಾಟ್ ಕೊಹ್ಲಿ (Virat Kohli) ಕೆಳಗಿಳಿದಿದ್ದಾರೆ. ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಚುಟುಕು ಕ್ರಿಕೆಟ್ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದರು. ಆದರೆ ಇದಾದ ಬಳಿಕ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಲಾಗಿತ್ತು. ಬಿಸಿಸಿಐ ತೆಗೆದುಕೊಂಡ ಈ ನಿರ್ಧಾರದ ವಿರುದ್ದ ಕೊಹ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದಾಗ್ಯೂ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ ಎನ್ನಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಕೊಹ್ಲಿ ನಾಯಕತ್ವವನ್ನು ಕೆಳಗಿಳಿದು ಅಚ್ಚರಿ ಮೂಡಿಸಿದ್ದರು. ಇದೀಗ ಕಿಂಗ್ ಕೊಹ್ಲಿ ಟೀಮ್ ಇಂಡಿಯಾದಲ್ಲಿ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇದಾಗ್ಯೂ ನಾನೇ ಈಗಲೂ ಕಿಂಗ್ ಎಂಬಾರ್ಥದಲ್ಲಿ ಕೊಹ್ಲಿ ಹೇಳಿಕೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕೊಹ್ಲಿ, ತಂಡದ ಲೀಡರ್ ಎನಿಸಿಕೊಳ್ಳಲು ನಾಯಕತ್ವದ ಅಗತ್ಯವಿಲ್ಲ ಎಂದಿದ್ದಾರೆ. ಈ ಮೂಲಕ ನಾನು ಈಗಲೂ ನಾಯಕನೇ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಕೊಹ್ಲಿ ಈ ಹೇಳಿಕೆ ಇದೀಗ ಮಹತ್ವ ಪಡೆದುಕೊಂಡಿದೆ. ಏಕೆಂದರೆ ಟೀಮ್ ಇಂಡಿಯಾ ಸೀಮಿತ ಓವರ್ಗಳ ನಾಯಕನಾಗಿ ರೋಹಿತ್ ಶರ್ಮಾ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ಕೊಹ್ಲಿ ಈ ರೀತಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ಇದಾಗ್ಯೂ ತಮ್ಮ ಹೇಳಿಕೆಗೆ ಕೊಹ್ಲಿ ಉದಾಹರಣೆಯನ್ನೂ ಕೂಡ ನೀಡಿದ್ದು, ಮಹೇಂದ್ರ ಸಿಂಗ್ ಧೋನಿ ಅವರು ನಾಯಕನ ಸ್ಥಾನದಿಂದ ಕೆಳಗಿಳಿದ ಬಳಿಕ ತಂಡದಲ್ಲಿ ನಾಯಕನಾಗಿಯೇ ಇದ್ದರು. ಏಕೆಂದರೆ ನಾವು ಅವರ ಬಳಿ ಪ್ರತಿಯೊಂದರ ಸಲಹೆಯನ್ನು ಪಡೆಯುತ್ತಿದ್ದೆವು. ಏನೇ ವಿಷಯಗಳನ್ನು ಹಂಚಿಕೊಳ್ಳಬಹುದಿತ್ತು. ಇದೀಗ ನಾನು ಕೂಡ ಆ ಜವಾಬ್ದಾರಿಯನ್ನು ಮುಂದುವರೆಸಲು ಬಯಸುತ್ತೇನೆ. ಹೀಗಾಗಿ ತಂಡದ ನಾಯಕನಲ್ಲದಿದ್ದರೂ ನಾಯಕನಂತೆ ಯೋಚಿಸುವುದೇ ನಾಯಕತ್ವ ಎಂದು ನಾನು ಭಾವಿಸುತ್ತೇನೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಸದ್ಯ ಟೀಮ್ ಇಂಡಿಯಾ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿದ ಕೊಹ್ಲಿ, “ಒಬ್ಬರು ಎಲ್ಲಾ ರೀತಿಯ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸ್ವೀಕರಿಸಬೇಕು. ನಾನು ಎಂಎಸ್ ಧೋನಿ ನಾಯಕತ್ವದ ಅಡಿಯಲ್ಲಿ ಆಟಗಾರನಾಗಿ ಆಡಿದ್ದೇನೆ. ಅಲ್ಲದೆ ನಾನು ದೀರ್ಘಕಾಲದವರೆಗೆ ತಂಡದ ನಾಯಕನಾಗಿದ್ದೇನೆ. ನನ್ನ ದೃಷ್ಟಿ ಮತ್ತು ಆಲೋಚನೆ ಒಂದೇ ಆಗಿರುತ್ತದೆ. ನಾನು ಆಟಗಾರನಾಗಿದ್ದಾಗಲೂ ನಾಯಕನಂತೆ ಯೋಚಿಸುತ್ತಿದ್ದೆ. ತಂಡ ಗೆಲ್ಲಬೇಕೆಂದು ನಾನು ಬಯಸಿದ್ದೆ. ಹೀಗಾಗಿ ನಾನು ನನ್ನ ನಾಯಕನಾಗಬೇಕೆಂದು ಬಯಸುತ್ತೇನೆ ಎಂದು ಕೊಹ್ಲಿ ಹೇಳಿದರು.
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(You Don’t Need to be a Captain to be The Leader: Virat Kohli)