Rashid Khan: ತಾಲಿಬಾನಿಗಳಿಗೆ ಮೈದಾನದಿಂದಲೇ ಸವಾಲು ಎಸೆಯುತ್ತಿರುವ ರಶೀದ್ ಖಾನ್

| Updated By: ಝಾಹಿರ್ ಯೂಸುಫ್

Updated on: Aug 21, 2021 | 9:55 PM

afghanistan crisis: ಸೋಷಿಯಲ್ ಮೀಡಿಯಾದಲ್ಲಿ ರಶೀದ್ ಖಾನ್ ತಮ್ಮ ದೇಶದ ಮೇಲಿನ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಂತೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

1 / 6
ಒಂದೆಡೆ ಅಫ್ಘಾನಿಸ್ತಾನದಲ್ಲಿ (afghanistan crisis) ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದೆ. ಇನ್ನೊಂದೆಡೆ ನಾಗರೀಕರು ಕೂಡ ಪ್ರತಿರೋಧ ತೋರಲು ಶುರು ಮಾಡಿದ್ದಾರೆ. ಈಗಾಗಲೇ ಬಹುತೇಕ ಭಾಗಗಳನ್ನು ತಾಲಿಬಾನ್ (Taliban)​ ಉಗ್ರರು ವಶಪಡಿಸಿಕೊಂಡರೂ, ಕೆಲ ಭಾಗದಲ್ಲಿ ಅಫ್ಘಾನ್ ಜನರ ಹೋರಾಟವನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

2 / 6
ತಾಲಿಬಾನಿಗಳು ಅನೇಕ ಪ್ರದೇಶಗಳಲ್ಲಿ ಅಫ್ಘಾನಿಸ್ತಾನದ ರಾಷ್ಟ್ರ ಧ್ವಜವನ್ನು ಕೆಳಗಿಸಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನ್ ಎಂಬ ಧ್ವಜಗಳನ್ನು ಸರ್ಕಾರಿ ಕಛೇರಿಗಳ ಮೇಲೆ ಹಾರಿಸಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ  ಜಲಲಾಪ್ರದೇಶದಲ್ಲಿನ ಜನರು ಅಫ್ಘಾನ್ ರಾಷ್ಟ್ರಧ್ವಜದೊಂದಿಗೆ ಬೃಹತ್ ಮೆರವಣಿಗೆ ನಡೆಸಿ ತಾಲಿಬಾನಿಗಳಿಗೆ ಸವಾಲು ಹಾಕಿದ್ದಾರೆ.

3 / 6
ಇತ್ತ ಅಫ್ಘಾನಿಸ್ತಾನದ ಕ್ರಿಕೆಟಿಗ ರಶೀದ್ ಖಾನ್ ಕೂಡ ತನ್ನ ದೇಶದ ಜನರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇಂಗ್ಲೆಂಡ್​ನಲ್ಲಿ ದಿ ಹಂಡ್ರೆಡ್ ಲೀಗ್ ಆಡುತ್ತಿರುವ ರಶೀದ್ ಖಾನ್ ಈ ಹಿಂದೆ ಅಫ್ಘಾನಿಸ್ತಾನದ ನೆರವಿಗೆ ಬರುವಂತೆ ವಿಶ್ವ ನಾಯಕರಿಗೆ ಮನವಿ ಮಾಡಿದ್ದರು. ಅಷ್ಟೇ ಅಲ್ಲದೆ ತಾಲಿಬಾನಿಗಳು ಅಫ್ಘಾನ್​ನಲ್ಲಿ ರಾಷ್ಟ್ರ ಇಳಿಸುತ್ತಿದ್ದಂತೆ ರಾಷ್ಟ್ರ ಧಜ್ವಕ್ಕೆ ಮುತ್ತಿಕ್ಕುವ ಫೋಟೋವೊಂದನ್ನು ರಶೀದ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

4 / 6
ಇದೀಗ ರಶೀದ್ ಖಾನ್ ದಿ ಹಂಡ್ರೆಡ್ ಲೀಗ್​ನಲ್ಲಿ ತನ್ನ ರಾಷ್ಟ್ರ ಧ್ವಜದೊಂದಿಗೆ ಕಣಕ್ಕಿಳಿದಿದ್ದಾರೆ. ಟ್ರೆಂಟ್ ರಾಕೆಟ್ಸ್ ತಂಡದ ಪರ ಆಡುತ್ತಿರುವ ಸ್ಪಿನ್ ಮಾಂತ್ರಿಕ ಮುಖದ ಮೇಲೆ ಅಫ್ಘಾನ್ ಧ್ವಜವನ್ನು ಚಿತ್ರಿಸಿ ಮೈದಾನಕ್ಕಿಳಿದಿದ್ದರು. ಈ ಮೂಲಕ ದೇಶದ ಮೇಲಿನ ತನ್ನ ಪ್ರೀತಿಯನ್ನು ಹಾಗೂ ಅಫ್ಘಾನಿಸ್ತಾನದ ರಾಷ್ಟ್ರ ಧ್ವಜದ ಹಿರಿಮೆಯನ್ನು ವಿಶ್ವಕ್ಕೆ ಸಾರುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಇದುವೇ ನನ್ನ ರಾಷ್ಟ್ರೀಯ ಧ್ವಜ ಎಂದು ಪತಾಕೆ ಬದಲಿಸಿದ ತಾಲಿಬಾನಿಗಳಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.

5 / 6
ಇತ್ತ ಸೋಷಿಯಲ್ ಮೀಡಿಯಾದಲ್ಲಿ ರಶೀದ್ ಖಾನ್ ತಮ್ಮ ದೇಶದ ಮೇಲಿನ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಂತೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಯುವ ಕ್ರಿಕೆಟಿಗನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

6 / 6
ತಾಲಿಬಾನಿಗಳ ಆಕ್ರಮಣವನ್ನು ನಾನಾ ರೀತಿಯಲ್ಲಿ ಪ್ರತಿಭಟಿಸುತ್ತಿರುವ ರಶೀದ್ ಖಾನ್ ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಬಹುತೇಕ ಪ್ರದೇಶವು ತಾಲಿಬಾನ್​ ಹಿಡಿತದಲ್ಲಿದ್ದು, ಹೀಗಾಗಿ ರಶೀದ್ ಖಾನ್ ಕುಟುಂಬದ ಮೇಲೆ ಆಕ್ರಮಣ ಮಾಡುವ ಆತಂಕ ಕೂಡ ಇದೆ. ಇದಾಗ್ಯೂ  ರಶೀದ್ ಖಾನ್ ತನ್ನ ಪ್ರತಿಭಟನೆಯನ್ನು ಮುಂದುವರೆಸುತ್ತಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.