ಅಫ್ಘಾನಿಸ್ತಾನ ಕ್ರಿಕೆಟ್ ತಾಲಿಬಾನ್ ವಶ; ಅಫ್ಘಾನ್​ ವಿರುದ್ಧದ ಸರಣಿಗೆ ತಂಡ ಘೋಷಿಸದ ಪಾಕಿಸ್ತಾನ, ಸರಣಿಯೂ ಶಿಫ್ಟ್

ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಸರಣಿಗೆ ತಂಡವನ್ನು ಘೋಷಿಸುವ ನಿರ್ಧಾರವನ್ನು ಮುಂದೂಡಿದೆ.

ಅಫ್ಘಾನಿಸ್ತಾನ ಕ್ರಿಕೆಟ್ ತಾಲಿಬಾನ್ ವಶ; ಅಫ್ಘಾನ್​ ವಿರುದ್ಧದ ಸರಣಿಗೆ ತಂಡ ಘೋಷಿಸದ ಪಾಕಿಸ್ತಾನ, ಸರಣಿಯೂ ಶಿಫ್ಟ್
ಅಫ್ಘಾನ್​ ವಿರುದ್ಧದ ಸರಣಿಗೆ ತಂಡ ಘೋಷಿಸದ ಪಾಕಿಸ್ತಾನ
Follow us
TV9 Web
| Updated By: ಪೃಥ್ವಿಶಂಕರ

Updated on:Aug 21, 2021 | 8:19 PM

ಅಫ್ಘಾನಿಸ್ತಾನ ತಾಲಿಬಾನ್ ವಶವಾದ ನಂತರ ದೇಶದ ಪರಿಸ್ಥಿತಿಯ ಬಗ್ಗೆ ಅನಿಶ್ಚಿತತೆ ಇದೆ. ಇದು ಕ್ರಿಕೆಟ್ ಹಾಗೂ ಸಾರ್ವಜನಿಕರ ಪರಿಸ್ಥಿತಿ ಮತ್ತು ಅಫಘಾನ್ ಕ್ರಿಕೆಟ್ ತಂಡದ ಮುಂಬರುವ ಪಂದ್ಯಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅಫ್ಘಾನಿಸ್ತಾನ ತಂಡ ಮುಂದಿನ ತಿಂಗಳು ತನ್ನ ನೆರೆಯ ಪಾಕಿಸ್ತಾನದೊಂದಿಗೆ ಏಕದಿನ ಸರಣಿಯನ್ನು ಆಡಬೇಕಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಸರಣಿಗೆ ತಂಡವನ್ನು ಘೋಷಿಸುವ ನಿರ್ಧಾರವನ್ನು ಮುಂದೂಡಿದೆ. ಇದರ ಹೊರತಾಗಿ, ಲಾಹೋರ್‌ನಲ್ಲಿ ಆರಂಭವಾಗಲಿರುವ ತರಬೇತಿ ಶಿಬಿರವನ್ನು ಮಂಡಳಿಯು 21 ಆಗಸ್ಟ್ ಶನಿವಾರದಿಂದ ಸ್ವಲ್ಪ ಸಮಯದವರೆಗೆ ಮುಂದೂಡಿದೆ. ಜೊತೆಗೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಸರಣಿಯನ್ನು ಶ್ರೀಲಂಕಾದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಟಿ 20 ವಿಶ್ವಕಪ್​ಗೂ ಮೊದಲು ಅಫ್ಘಾನಿಸ್ತಾನ ತಂಡಕ್ಕೆ ಈ ಸರಣಿಯು ಬಹಳ ಮುಖ್ಯವಾಗಿದೆ. ತಂಡದ ಕೆಲವು ಆಟಗಾರರು ದೇಶದ ಹೊರಗಿನ ವಿವಿಧ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಆದರೆ ದೇಶದ ನಾಟಕೀಯ ಬದಲಾವಣೆಯು ತಂಡದ ಉಳಿದವರ ಸಿದ್ಧತೆಯನ್ನು ಬೆಚ್ಚಿಬೀಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನದೊಂದಿಗಿನ ಸರಣಿಯು ಕೂಡ ಅಪಾಯದಲ್ಲಿದೆ ಮತ್ತು ಈ ಕಾರಣದಿಂದಾಗಿ ಪಿಸಿಬಿ ಇಂತಹ ನಿರ್ಧಾರವನ್ನು ತೆಗೆದುಕೊಂಡಿದೆ.

ಅಫಘಾನ್ ಮಂಡಳಿಯಿಂದ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ ಈ ಬಗ್ಗೆ ಮಾಹಿತಿ ನೀಡಿದ ಪಾಕಿಸ್ತಾನದ ಮಂಡಳಿಯ ಅಧಿಕಾರಿಗಳು, ಅಫ್ಘಾನ್ ಮಂಡಳಿಯಿಂದ ಸರಣಿಯ ಸಂಘಟನೆಯ ದೃಢೀಕರಣಕ್ಕಾಗಿ ಕಾಯುತ್ತಿದ್ದೇವೆ. ನಂತರವೇ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇಡೀ ಸರಣಿಯ ಪ್ರಯಾಣ ಯೋಜನೆ ಮತ್ತು ವೇಳಾಪಟ್ಟಿಯನ್ನು ಪಡೆದ ನಂತರವೇ ಶಿಬಿರವನ್ನು ಆಯೋಜಿಸಲಾಗುವುದು ಮತ್ತು ತಂಡವನ್ನು ಘೋಷಿಸಲಾಗುವುದು ಎಂದು ಅಧಿಕಾರಿ ಹೇಳಿದರು. ಈ ಸರಣಿಯು ಐಸಿಸಿ ಏಕದಿನ ಸೂಪರ್ ಲೀಗ್‌ನ ಭಾಗವಾಗಿದ್ದು, 2023 ರ ವಿಶ್ವಕಪ್‌ನ ಅರ್ಹತಾ ಪಂದ್ಯಗಳಿಗಾಗಿ ಆಡಲಾಗುತ್ತದೆ.

ಕಾಬೂಲ್​ನಿಂದ ವಿಮಾನಗಳ ಹಾರಾಟ ನಿಷೇಧವಿದೆ ಆದಾಗ್ಯೂ, ಎಸಿಬಿ ತನ್ನ ಆಟಗಾರರು ಕಾಬೂಲ್‌ನಿಂದ ಕೊಲಂಬೊಕ್ಕೆ ಯಾವಾಗ ಹೋಗುತ್ತಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕಾಬೂಲ್‌ನಿಂದ ವಾಣಿಜ್ಯ ವಿಮಾನಗಳ ಹಾರಾಟವನ್ನು ಹಿಂದೆ ನಿಷೇಧಿಸಲಾಗಿತ್ತು. ಪ್ರಸ್ತುತ, ಕಾಬೂಲ್‌ನಿಂದ ವಿದೇಶಿಯರನ್ನು ಸ್ಥಳಾಂತರಿಸಲು ಮಾತ್ರ ವಿಮಾನಗಳು ಹಾರಾಡುತ್ತಿವೆ. ವರದಿಗಳ ಪ್ರಕಾರ, ಎಸಿಬಿ ಈ ನಿಟ್ಟಿನಲ್ಲಿ ಕಾಬೂಲ್ ವಿಮಾನ ನಿಲ್ದಾಣದಿಂದ ತಾಲಿಬಾನ್ ಮತ್ತು ಯುಎಸ್ ಮಿಲಿಟರಿಯೊಂದಿಗೆ ಮಾತುಕತೆ ನಡೆಸುತ್ತಿದೆ.

Published On - 8:19 pm, Sat, 21 August 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ