Ravi Bishnoi: ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾದ ರವಿ ಬಿಷ್ಟೋಯಿ: ಖುಷಿಯಲ್ಲಿ ಏನು ಹೇಳಿದ್ರು?
India vs West Indies: ಯುವ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ (Ravi Bishnoi) ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ವೆಸ್ಟ್ ಇಂಡೀಸ್ ಎದುರಿನ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಆಡಲಿರುವ ತಂಡದಲ್ಲಿ ಇವರು ಸ್ಥಾನ ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗೆ ಬಿಸಿಸಿಐ ಭಾರತ (India vs West Indies) ತಂಡವನ್ನು ಪ್ರಕಟ ಮಾಡಿದೆ. ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆಗಿದ್ದು ಏಕದಿನ ಮತ್ತು ಟಿ20 ಸರಣಿಯಲ್ಲಿ ಭಾರತದ ನಾಯಕತ್ವ ವಹಿಸಲಿದ್ದಾರೆ. ವಿರಾಟ್ ಕೊಹ್ಲಿ (Virat Kohli)ಏಕದಿನ ಮತ್ತು ಟಿ20 ಎರಡೂ ಸರಣಿಗೂ ಲಭ್ಯರಾಗಿದ್ದು, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಕೂಡ ತಂಡಕ್ಕೆ ಮರಳಿದ್ದಾರೆ. ಕೋವಿಡ್‌ನಿಂದ ಗುಣಮುಖರಾಗಿ ವಾಷಿಂಗ್ಟನ್ ಸುಂದರ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಯುವ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ (Ravi Bishnoi) ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ವೆಸ್ಟ್ ಇಂಡೀಸ್ ಎದುರಿನ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಆಡಲಿರುವ ತಂಡದಲ್ಲಿ ಇವರು ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ರವಿ ಮಾತನಾಡಿದ್ದು, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಕನಸು ಕೊನೆಗೂ ನನಸಾಗಿದೆ ಎಂದು ಹೇಳಿದ್ದಾರೆ.
“ಇದೊಂದು ಅದ್ಭುತ ಪಯಣ. ಭಾರತದ ಬಣ್ಣಗಳನ್ನು ಧರಿಸುವುದಕ್ಕೆ ಗೌರವವಿದೆ. ಇದೊಂದು ನನಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಕನಸು ನನಸಾಗುವುದನ್ನು ನೋಡಲು ತುಂಬಾ ಸಂತೋಷವಾಗಿದೆ. ನನ್ನ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೆ. ದೊಡ್ಡ ಟೂರ್ನಮೆಂಟ್ಗೆ ನಾನು ನನ್ನನ್ನು ಸಜ್ಜು ಮಾಡಿಕೊಳ್ಳುತ್ತಿದ್ದೆ. ನನಗೆ ಯಾವುದೇ ಅವಕಾಶ ಸಿಕ್ಕರೂ ಅಲ್ಲಿ ಶೇ. 100 ರಷ್ಟು ಪ್ರಯತ್ನ ಪಡುತ್ತೇನೆ. ಸದಾ ಆಟವಾಡುತ್ತಿರು ಮತ್ತು ನಿನ್ನ ಸಮಯಕ್ಕಾಗಿ ಕಾಯಿ ಇದು ನನ್ನ ಮುಖ್ಯ ಗುರಿ,” ಎಂದು ಬಿಷ್ಟೋಯಿ ಹೇಳಿದ್ದಾರೆ.
ಇನ್ನು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದು ಬಿಷ್ಟೋಯ್ ಕೋಚ್ ಅನಿಲ್ ಕುಂಬ್ಳೆ ನೀಡಿದ ಸಲಹೆ ಸಹಕಾರಿ ಆಗಿದೆ ಎಂದರು. “ಅನಿಲ್ ಕುಂಬ್ಳೆ ಅವರಿಂದ ಅನೇಕ ವಿಷಯಗಳನ್ನು ಕಲಿತಿದ್ದೇನೆ. ಅವು ನೀಡಿದ ಸಲಹೆಯಿಂದ ಇಂದು ನಾನು ಇನ್ನಷ್ಟು ಉತ್ತಮ ಕ್ರಿಕೆಟರ್ ಆಗಿದ್ದೇನೆ. ಕುಂಬ್ಳೆ ಅವರು ನನಗೆ ಸದಾ ಗೈಡ್ ಮಡುತ್ತಿದ್ದರು. ಪ್ರಮುಖವಾಗಿ ಒತ್ತಡಗಳಿದ್ದಾಗ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತಿಳಿಸಿಕೊಟ್ಟಿದ್ದಾರೆ,” ಎಂಬುದು ಬೊಷ್ಟೋಯಿ ಮಾತು.
ಇನ್ನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರಾಸೆ ಮೂಡಿಸಿದ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಗಾಯದಿಂದ ಚೇತರಿಸದ ರವೀಂದ್ರ ಜಡೇಜಾ ಈ ಸರಣಿಗಳಿಗೆ ಅಲಭ್ಯರಾಗಿದ್ದಾರೆ. ಅಕ್ಷರ್ ಪಟೇಲ್ ಕೇವಲ ಒಡಿಐ ಸರಣಿಗೆ ಆಯ್ಕೆಯಾಗಿದ್ದಾರೆ. ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಏಕದಿನ ಕ್ರಿಕೆಟ್ ತಂಡದಿಂದ ಕೈಬಿಟ್ಟು ಕೇವಲ ಟಿ20 ಕ್ರಿಕೆಟ್ ತಂಡಕ್ಕೆ ಮಾತ್ರವೇ ಸೇರಿಸಲಾಗಿದೆ.
ಏಕದಿನ ತಂಡ: ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೀ), ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್.
ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅಕ್ಸರ್ ಪಟೇಲ್, ಯುಜವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್, ಅವೇಶ್ ಖಾನ್, ಹರ್ಷಲ್ ಪಟೇಲ್.
ಮೊದಲ ಏಕದಿನ, ಫೆಬ್ರವರಿ 6 (ಅಹ್ಮದಾಬಾದ್)
ಎರಡನೇ ಏಕದಿನ, ಫೆಬ್ರವರಿ 9 (ಅಹ್ಮದಾಬಾದ್)
ಮೂರನೇ ಏಕದಿನ, ಫೆಬ್ರವರಿ 11 (ಅಹ್ಮದಾಬಾದ್)
ಮೊದಲ ಟಿ20, ಫೆಬ್ರವರಿ 16 (ಕೋಲ್ಕತಾ)
ಎರಡನೇ ಟಿ20, ಫೆಬ್ರವರಿ 18 (ಕೋಲ್ಕತಾ)
ಮೂರನೇ ಟಿ20, ಫೆಬ್ರವರಿ 20 (ಕೋಲ್ಕತಾ)
India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ: ಒಂದು ಅಚ್ಚರಿ ಆಯ್ಕೆ, ಇಬ್ಬರಿಗೆ ವಿಶ್ರಾಂತಿ