Ravi Shastri: ಧೋನಿ ಟೆಸ್ಟ್ ನಿವೃತ್ತಿ ಬಗ್ಗೆ ಮೌನ ಮುರಿದ ರವಿ ಶಾಸ್ತ್ರಿ: ಅಂದು ಪಂದ್ಯ ಮುಗಿದ ಬಳಿಕ ಆಗಿದ್ದೇನು?

| Updated By: Vinay Bhat

Updated on: Dec 27, 2021 | 12:22 PM

MS Dhoni: ಧೋನಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೊಷಿಸಿದಾಗ ಅವರು ಆಡಿದ್ದು ಕೇವಲ 90 ಟೆಸ್ಟ್‌ ಪಂದ್ಯಗಳನ್ನು ಮಾತ್ರ. ಸದ್ಯ ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಕೇಳಿ.

Ravi Shastri: ಧೋನಿ ಟೆಸ್ಟ್ ನಿವೃತ್ತಿ ಬಗ್ಗೆ ಮೌನ ಮುರಿದ ರವಿ ಶಾಸ್ತ್ರಿ: ಅಂದು ಪಂದ್ಯ ಮುಗಿದ ಬಳಿಕ ಆಗಿದ್ದೇನು?
Ravi Shastri and MS Dhoni
Follow us on

ಮಹೇಂದ್ರ ಸಿಂಗ್ ಧೋನಿಯನ್ನು (MS Dhoni) ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಟೀಮ್ ಇಂಡಿಯಾಗೆ (Team India) ಐಸಿಸಿ ಆಯೋಜಿತ ಮೂರು ಟೂರ್ನಿಗಳಲ್ಲಿ ಚಾಂಪಿಯನ್ಸ್‌ ಪಟ್ಟ ಗೆದ್ದುಕೊಟ್ಟಿದ್ದಾರೆ. ತಮ್ಮ ವೃತ್ತಿಬದುಕಿನುದ್ದಕ್ಕೂ ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್ ಮತ್ತು ನಾಯಕತ್ವ ಎಲ್ಲದರಲ್ಲೂ ಮಾದರಿಯಾಗಿ ನಿಂತ ಕ್ಯಾಪ್ಟನ್‌ ಕೂಲ್‌, 2020ರ ಆಗಸ್ಟ್‌ 14ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇದಕ್ಕೂ ಮೊದಲು 2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸರಣಿ ಮಧ್ಯದಲ್ಲೇ ಟೆಸ್ಟ್‌ ಕ್ರಿಕೆಟ್‌ (Test Cricket) ವೃತ್ತಿಬದುಕಿಗೆ ಮಾಹಿ ಗುಡ್‌ಬೈ ಹೇಳಿದ್ದರು. ಧೋನಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೊಷಿಸಿದಾಗ ಅವರು ಆಡಿದ್ದು ಕೇವಲ 90 ಟೆಸ್ಟ್‌ ಪಂದ್ಯಗಳನ್ನು ಮಾತ್ರ. ಸದ್ಯ ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ (Ravi Shastri), ಅಂದು ಧೋನಿ ತೆಗೆದುಕೊಂಡ ನಿರ್ಧಾರ ಅತ್ಯಂತ ದಿಟ್ಟತನದ ಹಾಗೂ ನಿಸ್ವಾರ್ಥ ಮನೋಭಾವದ್ದಾಗಿತ್ತು ಎಂದು ಹೇಳಿದ್ದಾರೆ.

“ಧೋನಿ ಅವರಲ್ಲಿ ಖಂಡಿತಾ ಇನ್ನು ಸಾಕಷ್ಟು ಟೆಸ್ಟ್‌ ಪಂದ್ಯಗಳನ್ನು ಆಡುವ ಸಾಮರ್ಥ್ಯವಿತ್ತು. ಫಿಟೆಸ್ಟ್‌ ಆಟಗಾರರಲ್ಲಿ ಧೋನಿ ಕೂಡ ಒಬ್ಬರು. ಆದರೆ, ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ನೀಡುವುದಕ್ಕೂ ಮುನ್ನ ಮುಂದಿನ ನಾಯಕ ಯಾರು ಎಂಬುದು ಧೋನಿಗೆ ತಿಳಿದಿತ್ತು. ಧೋನಿ ಒಂದು ಸಮಯಕ್ಕಾಗಿ ಕಾಯುತ್ತಿದ್ದರಷ್ಟೆ. ಅವರಿಗೆ ತಾನು ಎಷ್ಟು ಕೆಲಸವನ್ನು ಹೊರಬಲ್ಲೆ ಎಂಬ ಅರಿವು ಚೆನ್ನಾಗಿದೆ. ಹೀಗಾಗಿ ವೈಟ್ ಬಾಲ್ ಕ್ರಿಕೆಟ್ ಕಡೆ ಹೆಚ್ಚಿನ ಗಮನ ಹರಿಸಲು ಅಂದು ಧೋನಿ ಟೆಸ್ಟ್​ನಿಂದ ನಿವೃತ್ತಿ ಪಡೆದರು.”

“ಅಂದು ಮೆಲ್ಬೋರ್ನ್​ನಲ್ಲಿ ಅವರು ನನ್ನ ಟೆಸ್ಟ್ ಕ್ರಿಕೆಟ್ ಜೀವನ ಮುಗಿಯಿತು ಎಂದು ಹೇಳಿದಾಗ ನಮಗೆಲ್ಲ ಅಚ್ಚರಿಯಾಯಿತು. ಅವರು ಅದನ್ನು ಹೇಳಿದ್ದು ಮಾಮಾಲಿಯಾಗಿತ್ತು. ಯಾವುದೇ ಒತ್ತಡದಿಂದ ಹೇಳಿದ ರೀತಿ ಕಾಣಲಿಲ್ಲ” ಎಂದು ಶಾಸ್ತ್ರಿ ಹೇಳಿದ್ದಾರೆ.

ನಿವೃತ್ತಿ ಹಿಂಪಡೆಯುವಂತೆ ಮನವಿ ಮಾಡಿದ್ದ ಶಾಸ್ತ್ರಿ

ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ ತಮ್ಮ ಹೊಸ ಪುಸ್ತಕದಲ್ಲಿ ಈ ಬಗ್ಗೆ ವಿವರವಾಗಿ ಬರೆದಿರುವ ರವಿ ಶಾಸ್ತ್ರಿ, ಟೆಸ್ಟ್‌ ಕ್ರಿಕೆಟ್‌ಗೆ ಧೋನಿ ನಿವೃತ್ತಿ ನೀಡಿದ ಬಳಿಕ ಅವರೊಟ್ಟಿಗೆ ಚರ್ಚಿಸಿ ನಿವೃತ್ತಿ ಹಿಂಪಡೆಯುವಂತೆ ಮನವಿ ಮಾಡಿದ್ದ ಸಂಗತಿಯನ್ನೂ ಬಹಿರಂಗ ಪಡಿಸಿದ್ದಾರೆ. ಆದರೆ, ಧೋನಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದ ಕಾರಣ ಹೆಚ್ಚಿನ ಒತ್ತಡ ಹೇರಲಾಗಲಿಲ್ಲ ಎಂದಿದ್ದಾರೆ. ಆದರೆ, ಆ ನಿರ್ಧಾರ ಅತ್ಯಂತ ದಿಟ್ಟತನದ್ದಾಗಿತ್ತು ಎಂದು ಕರೆದಿದ್ದಾರೆ.

“ಪ್ರತಿಯೊಬ್ಬ ಕ್ರಿಕೆಟಿಗನೂ ವೃತ್ತಿಬದುಕಿನಲ್ಲಿ ಮೈಲುಗಲ್ಲು ಅಷ್ಟು ಮಹತ್ವ ಪಡೆಯುವುದಿಲ್ಲ ಎಂದೇ ಹೇಳುತ್ತಾರೆ. ಆದರೆ, ಕೆಲ ಮೈಲುಗಲ್ಲು ಮುಖ್ಯವಾಗಿರುತ್ತವೆ. ಹೀಗಾಗಿ ಈ ವಿಚಾರ ತಿಳಿಸಿಕೊಡಲು ಮುಂದಾಗಿದ್ದೆ. ನಿವೃತ್ತಿ ನಿರ್ಧಾರ ಬದಲಾಯಿಸುವಂತೆ ಪ್ರಯತ್ನ ಮಾಡಿದ್ದೆ. ಆದರೆ, ನಿವೃತ್ತಿ ವಿಚಾರದಲ್ಲಿ ಧೋನಿ ನಿರ್ಧಾರ ಅಚಲವಾಗಿತ್ತು. ಹೀಗಾಗಿ ಒತ್ತಡ ಹೇರುವ ಪ್ರಯತ್ನ ಮಾಡಲಿಲ್ಲ. ಈಗ ಹಿಂದಿರುಗಿ ನೋಡುವುದಾದರೆ, ಧೋನಿ ನಿರ್ಧಾರ ಸರಿಯಾಗಿತ್ತು ಎಂದನಿಸುತ್ತದೆ. ಅದು ಅತ್ಯಂತ ದಿಟ್ಟತನದ ಮತ್ತು ನಿಸ್ವಾರ್ಥ ನಿರ್ಧಾರವಾಗಿತ್ತು,” ಎಂದು ಶಾಸ್ತ್ರಿ ತಮ್ಮ ಪುಸ್ತಕದಲ್ಲಿ ಬರೆದಿದ್ದರು.

Cheteshwar Pujara: ಸೊನ್ನೆಗೆ ಔಟಾಗಿ ಪೆವಿಲಿಯನ್​ಗೆ ಬಂದ ಪೂಜಾರಗೆ ದ್ರಾವಿಡ್ ಮಾಡಿದ್ದೇನು ನೋಡಿ

Bipul Sharma: ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಸನ್​ರೈಸರ್ಸ್​ ಹೈದರಾಬಾದ್ ತಂಡದ ಆಟಗಾರ

(Ravi Shastri revealed that nobody in the team was aware of MS Dhoni Test Retirement decision)