IND vs SA, 1st Test Day 2, Highlights: ಒಂದೇ ಒಂದು ಎಸೆತವಿಲ್ಲದೆ ಅಂತ್ಯಗೊಂಡ 2ನೇ ದಿನದಾಟ
IND vs SA Live Score, 1st Test Day 2: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸೆಂಚುರಿಯನ್ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಮಳೆಯಿಂದ ಆರಂಭವಾಗಿದೆ. ಸೆಂಚುರಿಯನ್‌ನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಎರಡನೇ ದಿನದ ಆಟ ಬೆಳಗ್ಗೆ ತಡವಾಗಿ ಆರಂಭವಾಗಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೆಂಚುರಿಯನ್ ಟೆಸ್ಟ್‌ನ ಎರಡನೇ ದಿನ ಮಳೆಯಿಂದಾಗಿ ಸಂಪೂರ್ಣವಾಗಿ ಒಂದೇ ಒಂದು ಎಸೆತವನ್ನು ಬೌಲಿಂಗ್ ಮಾಡದೆ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಮಳೆ ಮದ್ಯದಲ್ಲಿ ಕೊಂಚ ವಿರಾಮ ನೀಡಿತ್ತು. ಹೀಗಾಗಿ ಪಂದ್ಯ ಆರಂಭದ ನಿರೀಕ್ಷೆಯಿದ್ದರೂ ಪರಿಸ್ಥಿತಿ ಸಂಪೂರ್ಣವಾಗಿ ಹತೋಟಿಗೆ ಬರುವ ಮುನ್ನವೇ ಮಳೆ ಸುರಿಯಿತು. ಇದರಿಂದಾಗಿ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್‌ಗಳು ನಿರ್ಧರಿಸಬೇಕಾಯಿತು. ಪಂದ್ಯದ ವಿಷಯಕ್ಕೆ ಬಂದರೆ ಮೊದಲ ದಿನ ಬ್ಯಾಟಿಂಗ್ ಮಾಡುತ್ತಿರುವ ಭಾರತ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. ಟೀಂ ಇಂಡಿಯಾ ಪರ ಆರಂಭಿಕ ಆಟಗಾರ ಕೆಎಲ್ ರಾಹುಲ್ (ಔಟಾಗದೆ 122) ಮತ್ತೊಂದು ಅಮೋಘ ಶತಕ ಬಾರಿಸಿದರೆ, ಮಯಾಂಕ್ ಅಗರ್ವಾಲ್ (60) ಕೂಡ ಅರ್ಧಶತಕ ಬಾರಿಸಿದರು. ಇದೀಗ ಮೂರನೇ ದಿನ ರಾಹುಲ್ ಮತ್ತು ಅಜಿಂಕ್ಯ ರಹಾನೆ (ಔಟಾಗದೆ 40) ಇನ್ನಿಂಗ್ಸ್‌ನ್ನು ಮುನ್ನಡೆಸಲಿದ್ದಾರೆ.
LIVE NEWS & UPDATES
-
2ನೇ ದಿನದಾಟ ರದ್ದು
ಕೊನೆಗೂ ಮಳೆ ನಿಲ್ಲಲಿಲ್ಲ, ಹೀಗಾಗಿ ಎರಡನೇ ದಿನದಾಟ ರದ್ದುಪಡಿಸಲು ನಿರ್ಧರಿಸಲಾಗಿದೆ. ಸತತ ಮಳೆಯಿಂದಾಗಿ ಎರಡನೇ ದಿನ ಒಂದೇ ಒಂದು ಚೆಂಡನ್ನು ಎಸೆಯಲಾಗಲಿಲ್ಲ ಮತ್ತು ಅಂತಿಮವಾಗಿ 4 ಗಂಟೆಗಳ ಕಾಲ ಕಾದ ನಂತರ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್‌ಗಳು ನಿರ್ಧರಿಸಿದರು. ಇದೀಗ ಮೂರನೇ ದಿನ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆಯಲಿದೆ.
-
ಮೊದಲ ಸೆಷನ್ ಬಲಿ
ಮಳೆಯಿಂದಾಗಿ ಮೊದಲ ಅಧಿವೇಶನ ಸಂಪೂರ್ಣ ಹಾಳಾಗಿದ್ದು, ಸದ್ಯಕ್ಕೆ ಪರಿಸ್ಥಿತಿ ಸುಧಾರಣೆ ಕಾಣುತ್ತಿಲ್ಲ. 3 ಗಂಟೆಗೆ ಮೈದಾನದ ಪರಿಶೀಲನೆ ನಡೆಯಬೇಕಿತ್ತು, ಆದರೆ ಅದೇ ವೇಳೆಗೆ ಮತ್ತೆ ಮಳೆ ಸುರಿಯಲಾರಂಭಿಸಿತು. ಇದರಿಂದಾಗಿ ನಿಗದಿತ ಸಮಯಕ್ಕಿಂತ ಮೊದಲೇ ಊಟದ ವಿರಾಮ ತೆಗೆದುಕೊಳ್ಳಲಾಗಿದೆ.
-
ಮಳೆ ನಿಂತಿದೆ, ಮಧ್ಯಾಹ್ನ 3 ಗಂಟೆಗೆ ಗ್ರೌಂಡ್ ಪರಿಶೀಲನೆ
ಸೆಂಚುರಿಯನ್ ನಲ್ಲಿ ಸದ್ಯಕ್ಕೆ ಮಳೆ ನಿಂತಿದ್ದು, ಮೈದಾನದ ಸಿಬ್ಬಂದಿ ನೆಲ ಒಣಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ESPN-Cricinfo ಪ್ರಕಾರ, ಮತ್ತೆ ಮಳೆಯಾಗದಿದ್ದರೆ, ಅಂಪೈರ್ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಮೈದಾನವನ್ನು ಪರೀಕ್ಷಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಮಳೆ ಅಡ್ಡಿ
ಸೆಂಚುರಿಯನ್‌ನಲ್ಲಿ ಮಳೆಯಿಂದಾಗಿ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಲಿಲ್ಲ. ಸದ್ಯ ಮಳೆ ನಿಂತಿದ್ದು, ಮೈದಾನದ ಸಿಬ್ಬಂದಿ ನೀರು ತೆಗೆದು ಆಟ ಆರಂಭಿಸಲು ಪರದಾಡುತ್ತಿದ್ದಾರೆ.
Published On - Dec 27,2021 1:39 PM