IND vs SA: ತಂಡದಿಂದ ಕೈ ಬಿಡುವ ಭಯ; ಎಚ್ಚರಿಕೆಯ ಬ್ಯಾಟಿಂಗ್ಗೆ ರಹಾನೆ ಹಿಡಿದ ದಾರಿ ಯಾವುದು ಗೊತ್ತಾ? ವಿಡಿಯೋ
Ajinkya Rahane: ಸೆಂಚುರಿಯನ್ ಟೆಸ್ಟ್‌ನ ಮೊದಲ ದಿನದಂದು ರಹಾನೆ ಬ್ಯಾಟಿಂಗ್ ಮಾಡುತ್ತಿರುವ ಕಿರು ಕ್ಲಿಪ್ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಬ್ಯಾಟಿಂಗ್ ಮಾಡುವಾಗ ಚೆಂಡನ್ನು ಮೊದಲು ನೋಡಿ ನಂತರ ಅದನ್ನು ಹೊಡಿ ಎಂದು ನಿರಂತರವಾಗಿ ಗೊಣಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ಅಜಿಂಕ್ಯ ರಹಾನೆ ತಮ್ಮ ಫಾರ್ಮ್ ಬಗ್ಗೆ ಚಿಂತೆಗೀಡಾಗಿದ್ದಾರೆ. ಕಳೆದ ಒಂದು ವರ್ಷದಿಂದ ಅವರ ಬ್ಯಾಟ್ ಮಂಕಾಗಿದೆ. ರನ್‌ಗಳ ಸುರಿಮಳೆಯಾಗುತ್ತಿಲ್ಲವೆಂದು ಅವರಿಂದ ಟೀಂ ಇಂಡಿಯಾದ ಉಪನಾಯಕತ್ವವನ್ನೂ ಕಿತ್ತುಕೊಂಡರು. ಇದೆಲ್ಲದರ ನಡುವೆ, ತಂಡದಲ್ಲಿನ ಅವರ ಸ್ಥಾನಕ್ಕೂ ಅಪಾಯವಿದೆ. ಅಂದಹಾಗೆ, ಈಗ ಸೌತ್ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ರಹಾನೆ ಆಡುತ್ತಿರುವುದು ಒಳ್ಳೆಯ ಸಂಗತಿ. ಈ ಹಿಂದೆಯೂ ಈ ಬಗ್ಗೆ ವಿವಿಧ ರೀತಿಯ ಪ್ರಶ್ನೆಗಳು ಎದ್ದಿದ್ದವು. ಬಾಕ್ಸಿಂಗ್ ಡೇ ಟೆಸ್ಟ್‌ಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವರಿಗೆ ಅವಕಾಶ ಸಿಗುತ್ತದೆ ಎಂದು ಕ್ರಿಕೆಟ್ ತಜ್ಞರು ಕೂಡ ಊಹಿಸಿರಲಿಲ್ಲ. ಆದರೆ ಈಗ ಚಿತ್ರ ಸ್ಪಷ್ಟವಾಗಿದೆ. ರಹಾನೆ ತಂಡದ ಪ್ಲೇಯಿಂಗ್ XI ನ ಭಾಗವಾಗಿದ್ದಾರೆ.
ವಿಶೇಷವೆಂದರೆ ಬಾಕ್ಸಿಂಗ್ ಡೇ ಟೆಸ್ಟ್‌ಗಾಗಿ ಭಾರತೀಯ ಆಟಗಾರರ ಇಲೆವೆನ್‌ನ ಭಾಗವಾದ ನಂತರ ರಹಾನೆ ಅವರ ಆಟವೂ ಉತ್ತಮವಾಗಿದೆ. ಅವರು ಸೆಂಚುರಿಯನ್ ಟೆಸ್ಟ್ ಪಂದ್ಯದ ಮೊದಲ ದಿನ 80 ಎಸೆತಗಳಲ್ಲಿ 40 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಆದರೆ, ಇದಕ್ಕೂ ಮೊದಲು 21 ಇನ್ನಿಂಗ್ಸ್‌ಗಳಲ್ಲಿ ಕೇವಲ 19.57 ಸರಾಸರಿಯಲ್ಲಿದ್ದ ರಹಾನೆ ಇದ್ದಕ್ಕಿದ್ದಂತೆ ಫಾರ್ಮ್‌ನಲ್ಲಿರುವಂತೆ ತೋರುತ್ತಿದೆ. ಇಂಗ್ಲೆಂಡ್‌ನಲ್ಲಿ ಆಡದ, ಭಾರತದಲ್ಲಿ ಆಡದ ಬ್ಯಾಟ್ಸ್‌ಮನ್, ಈಗ ದಕ್ಷಿಣ ಆಫ್ರಿಕಾದಲ್ಲಿ ಯಶಸ್ಸಿನತ್ತ ಸಾಗುತ್ತಿರುವಂತೆ ತೋರುತ್ತಿದೆ. ಹಾಗಾಗಿ ಚೆಂಡನ್ನು ನೋಡಿದ ನಂತರ ಅದನ್ನು ಹೊಡೆಯಲು ಅವರ ಸೂತ್ರವು ಉತ್ತರವಾಗಿದೆ.
ಬಾಲ್ ನೋಡಿ ನಂತರ ಅದನ್ನು ಹೊಡಿ ಸೆಂಚುರಿಯನ್ ಟೆಸ್ಟ್‌ನ ಮೊದಲ ದಿನದಂದು ರಹಾನೆ ಬ್ಯಾಟಿಂಗ್ ಮಾಡುತ್ತಿರುವ ಕಿರು ಕ್ಲಿಪ್ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಬ್ಯಾಟಿಂಗ್ ಮಾಡುವಾಗ ಚೆಂಡನ್ನು ಮೊದಲು ನೋಡಿ ನಂತರ ಅದನ್ನು ಹೊಡಿ ಎಂದು ನಿರಂತರವಾಗಿ ಗೊಣಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಹೀಗಿರುವಾಗ ಸೆಂಚುರಿಯನ್ ಟೆಸ್ಟ್‌ನ ಮೊದಲ ದಿನವೇ 40 ರನ್ ಗಳಿಸಿದ್ದ ಅವರು ಎರಡನೇ ದಿನದಾಟದಲ್ಲಿ ಏನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
Rahane reminding himself to watch the ball as the bowler runs up makes me realise how cruel cricket can be for such experienced guy pic.twitter.com/3HKhVgMMFc
— Nikhil Dubey (@nikhildubey96) December 26, 2021
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ರಹಾನೆ ಅತ್ಯುತ್ತಮ ದಾಖಲೆ ಅಂದಹಾಗೆ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಅವರ ದಾಖಲೆಯೂ ಅತ್ಯುತ್ತಮವಾಗಿದೆ ಎಂಬುದು ಒಳ್ಳೆಯ ವಿಚಾರವಾಗಿದೆ. ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ರಹಾನೆ ಸರಾಸರಿ 92.67. ಈ ಅವಧಿಯಲ್ಲಿ ಅವರು ಇಲ್ಲಿಯವರೆಗೆ 2 ಶತಕ ಮತ್ತು 1 ಅರ್ಧ ಶತಕ ಗಳಿಸಿದ್ದಾರೆ.